ಆರೋಗ್ಯ

ಮೆಕ್ಕಾದಿಂದ ವಾಪಾಸ್ಸಾದ ಮಹಿಳೆಗೆ ಕೊರೋನಾ ಶಂಕೆ: ಮಣಿಪಾಲ ಕೆಎಂಸಿಗೆ ದಾಖಲು

Pinterest LinkedIn Tumblr

ಉಡುಪಿ: ಕೊರೊನಾ ಶಂಕಿತ ವೃದ್ದೆಯೊಬ್ಬರನ್ನು ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೃದ್ದೆಗೆ ಕೊರೊನಾ ವೈರಸ್‌‌ ಇರುವುದು ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ.

(ಸಾಂದರ್ಭಿಕ ಚಿತ್ರ)

ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ವೃದ್ದೆ ಕಳೆದ ವಾರ ಸೌದಿಯ ಮೆಕ್ಕಾಗೆ ತೆರಳಿದ್ದು ಜ್ವರ, ಕಫ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಗುಣಮುಖರಾದ ಬಳಿಕ ಬೆಂಗಳೂರಿಗೆ ವಾಪಾಸ್‌ ಆಗಿದ್ದರು. ಅಲ್ಲಿಂದ ಶಿವಮೊಗ್ಗಕ್ಕೆ ತೆರಳಿದ್ದು, ಜ್ವರವಿದ್ದರಿಂದ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೂ ಕೂಡ ವೃದ್ದೆಗೆ ಕಫ, ಹಾಗೂ ಉಸಿರಾಟದ ತೊಂದರೆ ಕಂಡುಬಂದಿದ್ದು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ವೃದ್ದೆಯನ್ನು ಪರೀಕ್ಷೆಗೆ ಒಳಪಡಿಸಿ ನಿಗಾ ಇರಿಸಲಾಗಿದೆ. ಬೆಂಗಳೂರು ಲ್ಯಾಬ್ ನಿಂದ ತಪಾಸಣಾ ವರದಿ ಇನ್ನಷ್ಟೇ ಬರಬೇಕಿದೆ.

Comments are closed.