ರುದ್ರಾಕ್ಷಿ ಧರಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ. ರುದ್ರಾಕ್ಷಿ ಧರಿಸುವುದರಿಂದ ನಮಗೆ ಆಗುವ ಪ್ರಯೋಜನಗಳೇನು ಈ ರುದ್ರಾಕ್ಷಿಯನ್ನು ಏಕೆ ಧರಿಸಬೇಕು ನೈಜ ರುದ್ರಾಕ್ಷಿ ಧಾರಣೆ ಮಾಡಿದ್ರೆ ನಿಮಗೆ ಶಿವನು ನೀಡುವ ಲಾಭಗಳ ಜೊತೆಗೆ ಅರೋಗ್ಯ ಲಾಭಗಳು ಏನು ಇದರಿಂದ ನಮ್ಮ ದೇಹಕ್ಕೆ ಏನಲ್ಲಾ ಲಾಭ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ರುದ್ರಾಕ್ಷಿ ಎಂಬ ಪದದ ಅರ್ಥ ಶಿವನ ಕಣ್ಣು ಇದೊಂದು ಜಾತಿಯ ಫಲ ಹಣ್ಣಾಗಿ ಸಿಪ್ಪೆ ಸುಲಿದು ಒಣಗಿದ ಮೇಲೆ ನಾವು ನೋಡುವ ರುದ್ರಾಕ್ಷಿ ಆಗುತ್ತದೆ ಸಾಮಾನ್ಯವಾಗಿ ಜಪ ಮಾಡಲು ರುದ್ರಾಕ್ಷಿ ಮಾಲೆ ಧರಿಸುತ್ತಾರೆ ಶೈವ ಪಂಥದ ಸನ್ಯಾಸಿಗಳೆಲ್ಲ ರುದ್ರಾಕ್ಷಿ ಹಾರಗಳನ್ನು ಕೊರಳಿಗೆ ಹಾಕಿಕೊಂಡಿರುತ್ತಾರೆ.
ಜನಸಾಮಾನ್ಯರು ಧಾರ್ಮಿಕ ವ್ಯಕ್ತಿಗಳು ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಾರೆ ಇದನ್ನು ಧರಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಶಿವನ ಕೃಪೆ ಸಿಗುತ್ತದೆ ಎಂಬ ನಂಬಿಕೆ ಇದೆ ಜಪದಲ್ಲಿ ಇದನ್ನು ಬಳಸುವುದಕ್ಕೆ ಲೆಕ್ಕಾಚಾರ ಮಾಡಲು ಮಣಿಗಳು ಬೇಕು ಎಂಬುದು ಒಂದು ಕಾರಣವಾದರೆ ರುದ್ರಾಕ್ಷಿಗೆ ಇರುವ ಧಾರ್ಮಿಕ ಮಹತ್ವ ಇನ್ನೊಂದು ಕಾರಣ ಪುರಾಣದ ಕಥೆಯ ಪ್ರಕಾರ ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಲ್ಲಲು ಶಿವನು ಪ್ರಕಾರ ಅಸ್ತ್ರವೊಂದನ್ನು ಪ್ರಯೋಗಿಸಿದ್ದನಂತೆ ಅದರ ಪ್ರಭೆಗೆ ಶಿವನ ಕಣ್ಣಲ್ಲಿ ನೀರು ಬಂದಿತು ಆ ಕಣ್ಣೀರಿನ ಹನಿಗಳು ನೆಲದ ಮೇಲೆ ಬಿದ್ದಾಗ ಅಲ್ಲಿ ಕೆಲಗಿಡಗಳು ಹುಟ್ಟಿದವಂತೆ ಅವು ಮರವಾಗಿ ಬೆಳೆದು ಅವುಗಳಲ್ಲಿ ರುದ್ರಾಕ್ಷಿಯ ಫಲಗಳು ಬಿಡುತ್ತಿವೆಯಂತೆ. ರುದ್ರಾಕ್ಷಿಯ ವ್ಯಾಪಕ ಬಳಕೆಗೆ ಅದರಲ್ಲಿರುವ ವೈದ್ಯಕೀಯ ಗುಣಗಳು ಕೂಡ ಕಾರಣ ರುದ್ರಾಕ್ಷಿಯಲ್ಲಿ ಎಲೆಕ್ರ್ಟೋ ಮೆಗ್ನೇಟಿಕ್ ಮತ್ತು ಪ್ಯಾರಾ ಮೆಗ್ನೇಟಿಕ್ ಗುಣಗಳಿದ್ದು ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಮನಸ್ಸನ್ನು ಶಾಂತವಾಗಿರಿಸುತ್ತದೆಯಂತೆ ಈ ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿ ನಮ್ಮ ಅಂತಸತ್ವ ವುದ್ದೀಪನೆ ಆಗುತ್ತದೆಯಂತೆ.
ರುದ್ರಾಕ್ಷಿಯಿಂದ ಹೊರಟ ಬಯೋ ಎಲೆಕ್ರ್ಟಿಕ್ ಸಿಗ್ನಲ್ ಗಳು ಮೆದುಳನ್ನು ವುದ್ದೀಪಿಸಿ ನರವ್ಯೂಹವನ್ನು ಚುರುಕುಗೊಳಿಸುತ್ತದೆಯಂತೆ ಅದರಿಂದಾಗಿ ರಕ್ತದೊತ್ತಡ ಖಿನ್ನತೆ ಆತಂಕ ಏಕಾಗ್ರತೆ ಕೊರತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬಿ ಪಿ ಸಮಸ್ಯೆ ಇದ್ದವರು ರುದ್ರಾಕ್ಷಿ ಧಾರಣೆ ಮಾಡುವುದು ತುಂಬಾ ಒಳ್ಳೆಯದು ನಿಮ್ಮ ದೇಹದ ಉಷ್ಣಾಂಶ ಹತೋಟಿಯಲ್ಲಿ ಇಡಲು ಸಹಾಯ ಮಾಡುತ್ತದೆ. ಎಂದು ಕೆಲವು ಸಂಶೋಧಕರು ಹೇಳುತ್ತಾರೆ ರುದ್ರಾಕ್ಷಿ ಮಾಲೆಯಲ್ಲಿ ಓಂ ಜಪ ಮಾಡಿದರೆ ಇನ್ನು ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ರುದ್ರಾಕ್ಷಿ ಮಾಲೆ ಶಿವನಿಗೆ ಅತ್ಯಂತ ಪ್ರಿಯವಾದದ್ದು ಈ ಮಾಲೆಯನ್ನು ಕೈಯಲ್ಲಿ ಹಿಡಿದು ಜಪಿಸುವುದರಿಂದ ಶಿವನ ಒಲುಮೆಗೆ ನಾವು ಸಹ ಪಾತ್ರರಾಗುತ್ತೇವೆ ಎನ್ನುವುದು ಶಿವನ ಭಕ್ತರ ನಂಬಿಕೆಯಾಗಿದೆ
Comments are closed.