ಮಕ್ಕಳಿಗೆ ಅತ್ಯಂತ ಉಪಯುಕ್ತ ಹೆಚ್ಚಿನ ಶಕ್ತಿ ನೀಡುವ ಈ ಸಸ್ಯ ಯಾವುದು ಮತ್ತು ಅದರಿಂದ ಮಕ್ಕಳಿಗೆ ಅತೀ ಹೆಚ್ಚಿನ ಉಪಯೋಗ ಎಂದು ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯೋಣ. ಈ ಸಸ್ಯ ನಗರ ಪಟ್ಟಣಗಳು ಸೇರಿದಂತೆ ನಮ್ಮ ಮನೆಯಂಗಳದಲ್ಲೂ ಸಹ ಹೇರಳವಾಗಿ ಬೆಳೆಯುವ ಸಸ್ಯ ಹುಳಿ ಹುಳಿಯಾದ ಸ್ವಾದದಿಂದ ಕೂಡಿದ ಈ ಸಸ್ಯವನ್ನು ಮಕ್ಕಳು ಬಹಳವೇ ತಿನ್ನುತ್ತಾರೆ, ನಮ್ಮ ಅಕ್ಕಪಕ್ಕದಲ್ಲೇ ಇರುವ ಈ ಸಸ್ಯದ ಹೆಸರು ಫುಲ್ಲಮ್ ಪುರ್ಚಿಗಿಡ.
ಆಕಾಲಿಡೇಸಿಯೇ ಕುಟುಂಬಕ್ಕೆ ಸೇರಿದ ಈ ಸಸ್ಯದ ವೈಜ್ಞಾನಿಕ ಹೆಸರು ಅಕ್ಸೆಲಿಸ್ ಕಾರ್ನಿಕಿಲೀಟಾ ಸಂಸ್ಕ್ರುತದಲ್ಲಿ ಚಂಗೇರಿ ಚುಕ್ರಿಕಾ ದಂತಶತ ಅಂಬಸ್ತಾ ಆಮ್ಲಲೋನಿಕಾ ಶಪರಿ ಕುಶಲಿ ಆಮ್ಲಪತ್ರ ಎಂದೆಲ್ಲಾ ಕರೆದರೆ ಆಂಗ್ಲಭಾಷೆಯಲ್ಲಿ ಇಂಡಿಯನ್ ಸ್ವರೆಲ್ ಕ್ರಿಪಿನ್ ವುಡ್ ಸ್ವರೆಲ್ ಪ್ರಕ್ಯೂನಬೆಂಟ್ ಎಲ್ಲೋಸ್ವರೆಲ್ ಸ್ಲೀಪಿಂಗ್ ಬ್ಯುಟಿ ಕ್ರಿಪಿನ್ ಅಕ್ಸೆಲಿಸ್ ಎಂದು ಕನ್ನಡದಲ್ಲಿ ಫುಲ್ಲಮ್ ಪುರಚಿಗಿಡ ಶಿವರ್ಗಿ ಎಂದು ಕರೆದರೆ ಈ ಸಸ್ಯ ಹುಳಿ ಹುಳಿಯಾಗಿರುವುದರಿಂದ ಮಜ್ಜಿಗೆ ಸೊಪ್ಪಿನಗಿಡ ಹಾಗೂ ಹುಳಿಗಿಡ ಎಂದು ಕೂಡ ಕರೆಯುತ್ತಾರೆ.
ಹುಲ್ಲಿನ ಜಾತಿಗೆ ಸೇರಿದ್ದು ತೇವಾಂಶವಿರುವ ಜಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಸಸ್ಯ ಬುಡದಿಂದಲೇ ಹಲವಾರು ಕವಲುಗಳಿಂದ ಕೂಡಿದ್ದು 5 ರಿಂದ 10 ಸೆಂಟಿಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಹಾಗೂ 30 ಸೆಂಟಿಮೀಟರ್ ಗಿಂತಲೂ ವಿಸ್ತಾರವಾಗಿ ಬೆಳೆಯಬಲ್ಲ ಸಸ್ಯವಾಗಿದೆ ಹೃದಯಾಕಾರದ 3 ಹಸಿರು ಎಲೆಗಳು ಒಂದೇ ತೊಟ್ಟಿನಲ್ಲಿ ಸಮಾನಾಂತರವಾಗಿ ಜೋಡನೆಗೊಂಡಿದ್ದು ನೋಡಲು ವೃತ್ತಾಕಾರವಾಗಿ ಕಾಣುತ್ತವೆ 5 ದಳಗಳಿಂದ ಕುಡಿದ ಪುಟ್ಟ ಪುಟ್ಟದಾದ ಹಳದಿ ಬಣ್ಣದ ಸುಂದರವಾದ ಹೂವುಗಳು ಇರುತ್ತವೆ.
ಆಯುರ್ವೇದದಲ್ಲಿ ಬಳಸಲಾಗುವ ಈ ಸಸ್ಯ ಸಾಂಪ್ರದಾಯಿಕ ಔಷಧಿಯ ಸಸ್ಯವಾಗಿದ್ದು ಗ್ರಾಮೀಣ ಪ್ರದೇಶದ ನಾಟಿ ವೈದ್ಯರುಗಳಿಂದ ಹಲವು ಕಾಯಿಲೆಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ. ಜ್ವರ ಹಾಗೂ ಶಿತಜ್ವರಕಕ್ಕೆ ಮೂತ್ರಕ್ಕೆ ಸಂಬಂದಿಸಿದ ಕಾಯಿಲೆಗಳಲ್ಲಿ ಹೊಟ್ಟೆನೋವಿಗೆ ಹಾವು ಕಡಿತಕ್ಕೂ ಸಹ ಈ ಸಸ್ಯದಿಂದ ಔಷದೋಪಚಾರ ಮಾಡಲಾಗುತ್ತದೆ. ಈ ಸಸ್ಯದ ಎಲೆಗಳನ್ನು ಅರೆದು ಹಚ್ಚುವದರಿಂದ ಗಾಯಗಳು ವಾಸಿಯಾಗುವುದಲ್ಲದೆ ಈ ಎಲೆಗಳು ರಕ್ತಸ್ರಾವ ನಿರೋಧಕತೆಯಿಂದ ಕೂಡಿದ್ದು ಕೈಕಾಲುಗಳು ತರಚಿ ಸ್ರಾವವಾಗುತ್ತಿದ್ದಾಗ ಈ ಎಲೆಗಳನ್ನು ಅರೆದು ಹಚ್ಚಬಹುದು. ಮೂತ್ರವರ್ಧಕವಾಗಿರುವ ಫುಲ್ಲಮ್ ಪುರ್ಚಿಗಿಡ ಅತಿಸಾರ ಜಂತುಹುಳುವಿನ ಸಮಸ್ಯೆಗಳು ಸುಟ್ಟಗಾಯಗಳಿಗೆ ಮೊಡವೆಗಳಿಗೆ ಹಾಗೂ ಸಕ್ಕರೆ ಕಾಯಿಲೆಗೂ ಸಹ ಉತ್ತಮವಾದ ಔಷಧಿಯಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಯಿಂದ ಕೂಡಿರುವ ಈ ಸಸ್ಯವನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಆರೋಗ್ಯ ಪೂರ್ಣವಾಗಿರುತ್ತದೆ. ಈ ಸಸ್ಯದ ಎಲೆಗಳಲ್ಲಿ ಆಕ್ಸಾಲಿಕ್ ಆಮ್ಲಗಳು ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ದೇಹದಲ್ಲಿನ ಕ್ಯಾಲ್ಸಿಯಂ ಪ್ರಮಾಣವನ್ನು ಪ್ರತಿಬಂದಿಸುತ್ತದೆ. ಹಾಗಾಗಿ ಅಧಿಕ ಪ್ರಮಾಣದಲ್ಲಿ ಸೇವಿಸದೇ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ತೊಂದರೆಯು ಇಲ್ಲ. ಹಾಗೂ ಆರೋಗ್ಯಪೂರ್ಣವಾಗಿ ಇರುತ್ತೀರಿ ಈ ಸಸ್ಯದಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದಿದ್ದರೂ ಸಹ ಇದನ್ನು ಅತಿಯಾಗಿ ಸೇವಿಸಬಾರದು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಮಕ್ಕಳಿಗೆ ಈ ಸಸ್ಯ ಅತ್ಯಂತ್ಯ ಉಪಯುಕ್ತ ಶಕ್ತಿ ನೀಡುವ ಹಾಗೇ ಮಾಡುತ್ತದೆ, ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದಲ್ಲಿ ಸೂಕ್ತ ವೈದ್ಯರ ನೆರವು ಪಡೆದುಕೊಂಡ ನಂತರ ನಿಯಮಿತವಾಗಿ ಮಕ್ಕಳಿಗೆ ಈ ಸೊಪ್ಪಿನ ಆಹಾರ ನೀಡಿರಿ.

Comments are closed.