ಆರೋಗ್ಯ

ಮಜ್ಜಿಗೆ ದಾಹವನ್ನು ತಣಿಸೋದು ಮಾತ್ರವಲ್ಲದೆ ದೇಹಕ್ಕೆ ತುಂಬಾ ಉಪಯೋಗಕಾರಿ.

Pinterest LinkedIn Tumblr

ಮಜ್ಜಿಗೆಯ ಮಹಿಮೆ ನಿಮಗೆ ಗೊತ್ತಾ, ಮಲಗುವ ಮುನ್ನ ಹಾಲವನ್ನ ಕುಡಿದರೆ, ಬೆಳಿಗ್ಗೆ ಎದ್ದಕೂದಲೆ ನೀರನ್ನ ಕುಡಿದರೆ ಮತ್ತು ಊಟದ ನಂತರ ಮಜ್ಜಿಗೆಯನ್ನ ಕುಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ನಮ್ಮ ಹಿರಿಯರು.

ಹಾಲಿನ ಹಾಗೆ ಮಜ್ಜಿಗೆಯನ್ನ ಕುಡಿದರು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಹಾಲಿಗೆ ಹೋಲಿಸರೇ ಮಜ್ಜಿಗೆಗೆ ಅರ್ಧದಷ್ಟು ಕಡಿಮೆ ಕ್ಯಾಲರಿ ಇರೋದು ಹಾಗು ಮುಕ್ಕಾಲು ಅಂಶ ಕಡಿಮೆ ಕೊಬ್ಬಿನ ಅಂಶ ಇರೋದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ಬೇಸಿಗೆಯಲ್ಲಿ ಮಜ್ಜಿಗೆಗೆ ಜನರು ಮುಗಿಬೀಳುತ್ತಾರೆ, ಮಜ್ಜಿಗೆ ಕೇವಲ ದಾಹವನ್ನ ತಣಿಸೋದು ಮಾತ್ರವನ್ನ ಇದು ನಮ್ಮ ದೇಹಕ್ಕೆ ತುಂಬಾ ಉಪಯೋಗಕಾರಿ, ಹಾಗಾದರೆ ಇದು ನಮ್ಮ ದೇಹಕ್ಕೆ ಹೇಗೆ ಉಪಯೋಗ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಆರೋಗ್ಯ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

ಮಜ್ಜಿಗೆಗೆ ಅರಸಿನ, ಜೀರಿಗೆ ಪುಡಿಯನ್ನ ಸೇರಿಸಿ ಕುಡಿಯುದರಿಂದ ನರ ದೌರ್ಬಲ್ಯ ಕಡಿಮೆಯಾಗುತ್ತದೆ, ಇನ್ನು ಮಜ್ಜಿಗೆ ಸೇವನೆಯಿಂದ ತೆರೆದ ಗಾಯಗಳು, ಹುಣ್ಣು ಮತ್ತು ರಕ್ತಶ್ರಾವದಂತ ರೋಗಗಳು ಬಹಳಬೇಗ ಕಡಿಮೆಯಾಗುತ್ತದೆ. ಇನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ತಕ್ರದ್ದಾರಾ ಎನ್ನುವ ಪಂಚಕರ್ಮ ಮಜ್ಜಿಗೆಯನ್ನ ಬಳಸಲಾಗುತ್ತದೆ.

ಇನ್ನು ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಬೇಕಾಗುವ ಖನಿಜ ಅಂಶ ತುಂಬಾ ಅಧಿಕವಾಗಿದೆ, ಮನಸಿನ ಒತ್ತಡ ಹಾಗು ಧಾತುಗಳಿಗೆ ಅಗತ್ಯ ವಿರುವ ವಿಟಮಿನ್ ಈ ಮಜ್ಜಿಗೆಯಲ್ಲಿ ಇದೆ, ಇನ್ನು ಅಜೀರ್ಣ, ಹೊಟ್ಟೆ ನೋವು ಕಂಡುಬಂತು ಅಂದರೆ ಮಜ್ಜಿಗೆಗೆ ಇಂಗು ಮತ್ತು ಉಪ್ಪು ಕೆಲವು ಸಮಯದಲ್ಲಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಇನ್ನು ಮಜ್ಜಿಗೆಯಲ್ಲಿ ಇರುವ ಪೊಟ್ಯಾಸಿಯಮ್ ರಕ್ತದ ಒತ್ತಡವನ್ನ ಕಡಿಮೆ ಮಾಡುತ್ತದೆ ಮತ್ತು ಮೂಳೆಗಳಿಗೆ ಮಜ್ಜಿಗೆಯು ಅಗತ್ಯವಾದ ಶಕ್ತಿಯನ್ನ ನೀಡುತ್ತದೆ ಮತ್ತು ಭೇದಿ ಮತ್ತು ಕರುಳು ಸಂಬಂದಿ ಕಾಯಿಲೆಗಳಿಗೆ ಮಜ್ಜಿಗೆ ತುಂಬಾ ಉಪಯೋಗಕಾರಿ.

ಇನ್ನು ಮಜ್ಜಿಗೆಯಲ್ಲಿ ಕ್ಷಹರಾ ಹಾಗು ಕಷಾಯಗೊಂಡ ಮೂಲವ್ಯಾದಿಯಲ್ಲಿನ ಗುಧಾಂಕುರವನ್ನ ನಿವಾರಣೆ ಮಾಡುತ್ತದೆ ಮಜ್ಜಿಗೆ, ಇನ್ನು ಲಿವರ್ ನಲ್ಲಿ ಇರುವ ವಿಶಾಂಕುರವನ್ನ ತೆಗೆದು ಹಾಕುವ ಶಕ್ತಿ ಮಜ್ಜಿಗೆಗೆ ಇದೆ.

ಇನ್ನು ಮಜ್ಜಿಗೆಗೆ ಉಪ್ಪು ಮತ್ತು ಶುಂಟಿಯನ್ನ ಬೆರೆಸಿ ಕುಡಿಯುದರಿಂದ ವಾಂತಿ ಕಡಿಮೆಯಾಗುತ್ತದೆ, ಇನ್ನು ಮಜ್ಜಿಗೆಗೆ ಉಪ್ಪು, ಕಾರ ಮತ್ತು ಕೊತ್ತಂಬರಿಯನ್ನ ಸೇರಿಸಿ ಕುಡಿಯುವುದರಿಂದ ತಿಂದ ಆಹಾರ ಬೇಗ ಜೀರ್ಣವಾಗುತ್ತದೆ.

ಇನ್ನು ಮಜ್ಜಿಗೆಯು ಮುಖ್ಯ್ವಾಗಿ ತ್ವಚೆಯ ಕಾಂತಿಯನ್ನ ಹೆಚ್ಚಿ ಮುಪ್ಪನ್ನ ತಡೆಯುತ್ತದೆ, ಸಕ್ಕರೆ ಕಾಯಿಲೆ ಇರುವವರಿಗೆ ಮಜ್ಜಿಗೆ ತುಂಬಾ ಉತ್ತಮ ಮತ್ತು ದಿನಕ್ಕೆ 4-5 ಲೋಟ ಮಜ್ಜಿಗೆ ಕುಡಿದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.

ಇನ್ನು ಡಯಟ್ ಮಾಡುವವರು ಹಣ್ಣುಗಳ ಜೊತೆ ಮಜ್ಜಿಗೆಯನ್ನು ಕೂಡ ಸೇವಿಸಬೇಕು, ಇನ್ನು ಕೊನೆಯದಾಗಿ ತಲೆ ಹೊಟ್ಟಿನ ಸಮಸ್ಯೆ ಇರುವವರಿಗೆ ಹುಳಿ ಮಜ್ಜಿಗೆಯನ್ನು ತಲೆ ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆ ಹೊಟ್ಟು ನಿವಾರಣೆ ಆಗುತ್ತದೆ.

Comments are closed.