ಆರೋಗ್ಯ

ಮಾವಿನ ಹಣ್ಣು ತಿನ್ನುವವರಿಗೆ ಈ ವಿಷಯವೇ ಗೊತ್ತಿಲ್ಲ….!

Pinterest LinkedIn Tumblr

ಹಣ್ಣುಗಳ ರಾಜ ಎಂದೆನಿಸಿರುವ ಮಾವಿನ ಹಣ್ಣು ತನ್ನ ಬಣ್ಣ ಹಾಗೂ ಸುವಾಸನೆಯಿಂದಲೇ ತನ್ನತ್ತ ಆಕರ್ಷಿಸುತ್ತದೆ. ವಿವಿಧ ಬಗೆಯ ಮಾವಿನ ಹಣ್ಣುಗಳ ರುಚಿಯನ್ನು ಈಗ ನೋಡದಿದ್ದರೆ ಮತ್ತೆ ಒಂದು ವರ್ಷ ಕಾಯ ಬೇಕಾಗುತ್ತದೆ. ಕೆಲವರಿಗೆ ಮಾವಿನ ಹಣ್ಣು ತಿನ್ನ ಬೇಕೆಂದೆನಿಸುವುದು, ಆದರೆ ಎಲ್ಲಿ ದಪ್ಪಗಾಗುತ್ತೇವೋ ಎಂಬ ಭಯದಲ್ಲಿ ಮಾವಿನ ಹಣ್ಣು ದೂರವಿಡುತ್ತಾರೆ.

ಮಾವಿನ ಹಣ್ಣು ತಿಂದರೆ ದಪ್ಪಗಾಗುತ್ತೇವೆ ಎನ್ನುವುದು ಎಷ್ಟು ನಿಜ ಎಂದು ನೋಡೋಣ ಬನ್ನಿ, ಅತ್ಯುತ್ತಮ ಡಯಟ್‌ ಅಂದರೆ ಅದರಲ್ಲಿ ಸೀಸನ್‌ ಫುಡ್ ಇರಲೇಬೇಕು.

ಇದು ಮಾವಿನ ಹಣ್ಣಿನ ಸೀಸನ್, ಮಾವಿನ ಹಣ್ಣು ರುಚಿಯ ಜತೆಗೆ ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಈ ಹಣ್ಣನ್ನು ತಿನ್ನು ವುದರಿಂದ ಆರೋಗ್ಯ ವೃದ್ಧಿಸುವುದೇ ಹೊರತು ಯಾವುದೇ ತೊಂದರೆ ಉಂಟಾಗುವುದಿಲ್ಲ, ಮಾವಿನ ಹಣ್ಣಿನಲ್ಲಿ ಸ್ವಲ್ಪ ಕ್ಯಾಲೋರಿ ಅಂಶವಿದೆ, ಆದರೆ ಇದನ್ನು ಡಯಟ್‌ನಲ್ಲಿ ಸೇರಿಸಿದರೆ ದೇಹದ ತೂಕ ಹೆಚ್ಚುವುದಿಲ್ಲ, ಕಾರಣ ಇದರಲ್ಲಿ ನಾರಿನಂಶ ಕೂಡ ಇದೆ.

ಮಾವಿನ ಹಣ್ಣಿನಿಂದ ಜ್ಯೂಸ್, ರಸಾಯನ ಮತ್ತಿತರ ಸಿಹಿ ಪದಾರ್ಥಗಳನ್ನು ಮಾಡಿ ತಿಂದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ, ಆದರೆ ಹಾಗೇ ತಿಂದರೆ ಮೈ ತೂಕವೇನು ಹೆಚ್ಚುವುದಿಲ್ಲ ಬದಲಿಗೆ ಆರೋಗ್ಯ ವೃದ್ಧಿಯಾಗುವುದು.

ಬೇಸಿಗೆಯಲ್ಲಿ ಮಾವಿನ ಹಣ್ಣುಗಳದ್ದೇ ಕಾರುಬಾರು, ಬಗೆ-ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ, ಅವುಗಳನ್ನು ನೋಡುವಾಗ ಬಾಯಲ್ಲಿ ನೀರೂರುತ್ತವೆ, ಆದರೆ ಫಿಟ್‌ನೆಸ್‌ ಕುರಿತು ಕಾಳಜಿ ಇರುವವರು ಮಾವಿನ ಹಣ್ಣು ತಿಂದರೆ ಎಲ್ಲಿ ದಪ್ಪಗಾಗುತ್ತೇವೋ ಎಂದು ತಮ್ಮ ಆಸೆಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಾರೆ.

ಮೈ ತೂಕ ಹೆಚ್ಚಾಗಬಾರದೆಂದು ಬಯಸುವವರು ಊಟದ ನಂತರ ಮಾವಿನಹಣ್ಣನ್ನು ತಿನ್ನಬಾರದು, ಇಷ್ಟೇ ಅಲ್ಲದೆ ಮಾವಿನ ಹಣ್ಣು ಅದರಲ್ಲೂ ಸಂತೆ ಮಾರ್ಕೆಟ್ ಗಳಲ್ಲಿ ಸಿಗುವ ಹೆಚ್ಚಿನ ಹಣ್ಣನ್ನು ಖರೀದಿಸುವ ಮೊದಲು ಅವುಗಳು ಸ್ವಾಭಾವಿಕವಾಗಿ ಹಣ್ಣಾಗಿವೆಯೋ ಇಲ್ಲವೋ ಎಂದು ತಿಳಿದುಕೊಳ್ಳಿ,.

ಈಗ ಬರುವ ಕೆಲ ರಾಸಾಯನಿಕಗಳು ಮಾವನ್ನು ದಿನದಲ್ಲಿ ಹಣ್ಣು ಮಾಡಿ ಬಿಡುತ್ತವೆ, ಹಾಗಾಗಿ ಯೋಚಿಸಿ ಖರೀದಿಸಿ. ಅದರಲ್ಲೂ ಚಿಕ್ಕ ಮಕ್ಕಳು ಮಾವಿಗೆ ಹೆಚ್ಚು ಅಸೆ ಪಡುತ್ತಾರೆ ಹಾಗಾಗಿ ಸ್ವಲ್ಪ ಗಮನವಹಿಸಿ ಮಾವನ್ನು ಶುಚಿಯಾಗಿ ಕತ್ತರಿಸಿ ನೀಡಿ.

Comments are closed.