ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿರುತ್ತದೆ ಇದರಲ್ಲಿ ಎ ಬಿ1 ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು ಕೊಲೆಸ್ಟರಾಲ್ ನಿಯಂತ್ರಣದಲ್ಲಿ ಇರಿಸಲು ಇದು ಸಹಾಯ ಮಾಡುತ್ತದೆ ಕಿಡ್ನಿ ಸ್ಟೋನ್ ಸಮಸ್ಯೆ ಎದುರಿಸುತ್ತಾ ಇರುವವರು ಈ ತೊಂಡೆಕಾಯಿ ರಾಮಬಾಣ ಇದ್ದಂತೆ ವಾರಕ್ಕೆ ಒಮ್ಮೆ ಆದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಈ ಲೇಖನದಲ್ಲಿ ನಾವು ತೊಂಡೆಕಾಯಿ ಸೇವನೆ ಮಾಡುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ ಅದಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ತೊಂಡೆಕಾಯಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಕಫ ಅಂತಹ ಸಮಸ್ಯೆಗಳನ್ನು ನಾವು ದೂರ ಮಾಡಬಹುದು ತೊಂಡೆಕಾಯಿ ಹೊಂದಿರುವ ಬೀಜಗಳು ಮಲಬದ್ದತೆ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮಲ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣ ಪಡಿಸುತ್ತದೆ.
ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗುಳ್ಳೆ ಆದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಹಚ್ಚಿದರೆ ನೋವು ನಿವಾರಣೆ ಆಗುತ್ತದೆ ತೊಂಡೆಕಾಯಿಯಲ್ಲಿ ವಿಟಮಿನ್ ಬಿ ವಿಟಮಿನ್ ಸಿ2 ವಿಟಮಿನ್ ಬಿ3 ಹೇರಳವಾಗಿ ಇರುವುದರಿಂದ ನಮ್ಮ ರಕ್ತ ನಿರೋಧಕ ಶಕ್ತಿಯನ್ನು ಇದು ವೃದ್ಧಿಸುತ್ತದೆ ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವನೆ ಮಾಡಿದರೆ ನಮ್ಮ ದೇಹದ ಉಷ್ಣತೆ ಕಡಿಮೆ ಆಗುತ್ತದೆ ಎರಡು ಚಮಚ ತೊಂಡೆಕಾಯಿ ಎಲೆ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ಬೇಧಿ ಕಡಿಮೆ ಆಗುತ್ತದೆ. ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದು ಆಗುತ್ತದೆ ಮತ್ತು ಇದರಿಂದ ಮಧುಮೇಹ ಗುಣವಾಗುತ್ತದೆ. ದೇಹದಲ್ಲಿ ಊತ ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆ ಜಜ್ಜಿ ಪೇಸ್ಟ್ ಮಾಡಿ ಈ ಜಾಗಕ್ಕೆ ಹಚ್ಚಿದರೆ ಕಜ್ಜಿಯಂತ ಸಮಸ್ಯೆಗಳು ದೂರ ಆಗುತ್ತದೆ ಋತು ಸ್ರಾವದ ಸಂದರ್ಭದಲ್ಲಿ ತೊಂಡೆಕಾಯಿ ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆ ಆಗುತ್ತದೆ.
ತೊಂಡೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ ಮತ್ತು ಹೆಚ್ಚು ಹೊತ್ತು ನಮ್ಮ ಹೊಟ್ಟೆಯನ್ನು ತುಂಬಿದ ಹಾಗೆ ಮಾಡುತ್ತದೆ ಇದರಿಂದ ನಾವು ಸ್ವಲ್ಪವಾಗಿ ನಮ್ಮ ತೂಕವನ್ನು ಕಳೆದು ಕೊಳ್ಳಬಹುದು. ಒಂದು ಲೋಟ ತೊಂಡೆಕಾಯಿ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಸೇರಿಸಿ ಕುದಿಸಿ ತಯಾರಿಸಿದ ಎಣ್ಣೆಯನ್ನು ಚರ್ಮದ ಕಾಯಿಲೆಗೆ ನಾವು ಉಪಯೋಗಿಸಬಹುದು ಪೊಟ್ಯಾಶಿಯಂ ಹೆಚ್ಚು ಇರುವ ತೊಂಡೆಕಾಯಿ ಹೃದಯದ ಆರೋಗ್ಯವನ್ನು ತುಂಬಾ ಕಾಪಾಡುತ್ತದೆ. ಕಣ್ಣು ಉರಿಯುತ್ತ ಇದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆ ರಸಕ್ಕೆ ಸೇರಿಸಿ ಒಂದು ಲೋಟ ರಸ ಆಗುವವರೆಗೆ ಸರಿಯಾಗಿ ಕುದಿಸಬೇಕು ಈ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕಣ್ಣಿನ ಉರಿ ನಿವಾರಣೆ ಆಗುತ್ತದೆ. ಕಫದ ಸಮಸ್ಯೆ ನಿವಾರಿಸುವ ಗುಣ ತೊಂಡೆಕಾಯಿಗೆ ಇದೆ.

Comments are closed.