ಆರೋಗ್ಯ

ಅತೀ ಹೆಚ್ಚು ಮೊಬೈಲ್ ಬಳಕೆಯ ಪರಿಣಾಮ ಜೀವನದಲ್ಲಿ ಹತಾಶೆ ಜಾಸ್ತಿ … ನಿಜನಾ?

Pinterest LinkedIn Tumblr

ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮೊಬೈಲ್ ಫೋನ್ ಗಳು ಇರಲಿಲ್ಲ ಮತ್ತು ಜನರು ಯಾರ ಬಳಿ ಆದರೂ ಮಾತನಾಡಬೇಕು ಅಂದರೆ ಲ್ಯಾಂಡ್ ಲೈನ್ ಅಥವಾ ಅಂಚೆ ಕಚೇರಿಯ ಮೊರೆ ಹೋಗುತ್ತಿದ್ದರು, ಆದರೆ ಈಗ ಒಬ್ಬ ವ್ಯಕ್ತಿ ಎಷ್ಟೇ ದೂರ ಇದ್ದರೆ ಇದ್ದರು ಆತನ ಜೊತೆ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ. ಇನ್ನು ಕೆಲವು ಮೊಬೈಲ್ ಗಳನ್ನ ಮಾತನಾಡುವುದಕ್ಕೆ ಬಳಸಿದರೆ ಹೆಚ್ಚು ತೊಂದರೆ ಇರುವುದಿಲ್ಲ ಆದರೆ ಇಂದಿನ ಕಾಲದಲ್ಲಿ ಜನರು ಇಂಟೆರ್ ನೆಟ್ ಮೂಲಕ ಆಟವಾಡಲು ಮತ್ತು ಸಾಮಾಜಿಕ ಜಾಲತಾಣವನ್ನು ಬಳಸಲು ಹೆಚ್ಚಿನ ಸಮಯವನ್ನ ಕೊಡುತ್ತಿದ್ದಾರೆ.

ಇನ್ನು ಜನರು ಹೆಚ್ಚಾಗಿ ಮೊಬೈಲ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ನಾನಾ ರೀತಿಯ ಖಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ ಅನ್ನುವುದು ತುಂಬಾ ಬೇಸರದ ಸಂಗತಿ ಆಗಿದೆ. ದಿನದ 24 ಘಂಟೆಯಲ್ಲಿ ಹೆಚ್ಚಿನ ಜನರು 10 ಘಂಟೆಗಳನ್ನ ಮೊಬೈಲ್ ಬಳಕೆ ಮಾಡಲು ಸೀಮಿತವಾಗಿ ಇಡುತ್ತಿದ್ದಾರೆ ಅನ್ನುವುದು ವಿಷಾದದ ಸಂಗತಿಯಾಗಿದೆ. ಇನ್ನು ಕೆಲವರು ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ಮೊಬೈಲ್ ಬಳಸಲು ಶುರು ಮಾಡುತ್ತಾರೆ ಮತ್ತು ಮಲಗುವಾಗ ಕೂಡ ತುಂಬಾ ಸಮಯ ಮೊಬೈಲ್ ಬಳಕೆ ಮಾಡುತ್ತಾರೆ, ಇನ್ನು ಕೆಲವರು ಕೆಲಸದ ವಿಷಯವಾಗಿ ಹೆಚ್ಚು ಸಮಯ ಮೊಬೈಲ್ ಬಳಸಿದರೆ ಇನ್ನೂ ಕೆಲವರು ಟೈಮ್ ಪಾಸ್ ಮಾಡುವ ಸಲುವಾಗಿ ಮೊಬೈಲ್ ಬಳಕೆ ಮಾಡುತ್ತಾರೆ.

ಹಾಗಾದರೆ ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಮನುಷ್ಯನ ದೇಹಕ್ಕೆ ಆಗುವ ತೊಂದರೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮೊಬೈಲ್ ಫೋನ್ ಗಳನ್ನ ಹೆಚ್ಚಾಗಿ ಬಳಕೆ ಮಾಡುವುದರಿಂದ ಮನುಷ್ಯನ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ ಮತ್ತು ಯಾವುದೇ ಕೆಲಸವನ್ನ ಪೂರ್ತಿ ಮಾಡಲು ನಿಮಗೆ ಬಹಳ ಹೆಚ್ಚಿನ ಸಮಯ ಬೇಕಾಗುತ್ತದೆ. ಇನ್ನು ಮೊಬೈಲ್ ಫೋನ್ ಗಳನ್ನ ಜಾಸ್ತಿ ಬಳಕೆ ಮಾಡಿದರೆ ನಿಮ್ಮ ಕೆಲಸಕ್ಕಿಂತ ಜಾಸ್ತಿ ಬೆರೆಕೆ ಕಡೆ ನಮ್ಮ ಗಮನ ಹೆಚ್ಚಾಗಿ ಹೋಗುತ್ತದೆ, ಚಾರ್ಜ್ ಕಡಿಮೆ ಆಗಿ ಕೆಲವು ಸಮಯ ನಿಮಗೆ ಮೊಬೈಲ್ ಬಳಸಲು ಆಗಲಿಲ್ಲ ಅಂದರೆ ಹುಚ್ಚು ಹಿಡಿದ ಅನುಭವ ಆಗುತ್ತದೆ ಮತ್ತು ಇದರ ಪರಿಣಾಮ ಜೀವನದಲ್ಲಿ ಹತಾಶೆ ಜಾಸ್ತಿ ಆಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ.

ಮೊಬೈಲ್ ಬಳಕೆ ಹೆಚ್ಚು ಬಳಕೆ ಮಾಡುವವರಿಗೆ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಕೋಪ ಬರುತ್ತದೆ ಮತ್ತು ಭಾವನೆಗಳ ಮೇಲೆ ನಿಯಂತ್ರಣ ಕಡಿಮೆ ಆಗುತ್ತದೆ ಮತ್ತು ಎದುರುಗಡೆ ಇರುವ ವ್ಯಕ್ತಿಯ ಭಾವನೆಗಳು ನಮಗೆ ಅರ್ಥ ಆಗುವುದಿಲ್ಲ. ಇನ್ನು ಇಷ್ಟು ಮಾತ್ರವಲ್ಲದೆ ಮೆದುಳಿನಲ್ಲಿನ ಡೊಫೋಮೈನ್ ರಿಸೆಪ್ಟರ್ಸ್ ಕಡಿಮೆ ಆಗಿ ಮಾನಸಿಕ ಖಿನ್ನತೆ ಅಥವಾ ಡಿಪ್ರೆಶನ್ ಉಂಟಾಗುತ್ತದೆ. ಇನ್ನು ಮೊಬೈಲ್ ಹೆಚ್ಚಾಗಿ ಬಳಸುವವರಿಗೆ ಪದೇ ಪದೇ ಕಾಫಿ ಬೇಕು, ಟೀ ಬೇಕು ಅಥವಾ ಎಣ್ಣೆ ಹೊಡಿಬೇಕು ಮತ್ತು ಹೋಗೆ ಎಳಿಬೇಕು ಅನಿಸುವುದು ಆಗುತ್ತದೆ ಮತ್ತು ಅದನ್ನ ನಿಯಂತ್ರಣಕ್ಕೆ ತರಲು ಆಗುವುದಿಲ್ಲ. ಇನ್ನು ಮೊಬೈಲ್ ಗಳಿಂದ ಬರುವ ವಿಕಿರಣಗಳಿಂದ ಕಣ್ಣಿನ ದೃಷ್ಟಿ ಕಡಿಮೆ ಆಗುತ್ತದೆ ಮತ್ತು ತಲೆ ನೋವು ಹಾಗೆ ಮೈಗ್ರೇನ್ ನಂತಹ ನೋವು ಕೂಡ ಜಾಸ್ತಿ ಆಗುತ್ತದೆ.

ಮೊಬೈಲ್ ಹೆಚ್ಚು ಬಳಕೆ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶಗಳ ಸಂಗ್ರಹ ಜಾಸ್ತಿ ಆಗಿ ದೇಹ ದಪ್ಪ ಆಗುತ್ತದೆ, ಇನ್ನು ಇದರ ಜೊತೆಗೆ ಕುತ್ತಿಗೆ ನೋವು, ಬೆನ್ನು ನೋವಿನಂತಹ ಸಮಸ್ಯೆಗಳು ಬರುತ್ತದೆ. ಇನ್ನು ಮೊಬೈಲ್ ಹೆಚ್ಚಾಗಿ ಬಳಕೆ ಮಾಡುವವರಿಗೆ ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ನಿದ್ರೆ ಬರುವುದಿಲ್ಲ, ಸ್ನೇಹಿತರೆ ಮೊಬೈಲ್ ಗಳನ್ನ ಹೆಚ್ಚು ಬಳಕೆ ಮಾಡುವುದರಿಂದ ಹೀಗೆ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಪಬ್ ಜಿ ಆಟವನ್ನು ಆಡಲು ಹೆಚ್ಚಿನ ಸಮಯ ಹಾಳು ಮಾಡುತ್ತಿದ್ದು ಅದೂ ಅವರ ಆರೋಗ್ಯದ ಮೇಲೆ ತುಂಬಾ ಪ್ರಭಾವನ್ನ ಬೀರುತ್ತಿದೆ, ಸ್ನೇಹಿತರೆ ಇನ್ನಾದರೂ ಸ್ವಲ್ಪ ಎಚ್ಛೆತ್ತುಕೊಳ್ಳಿ.

Comments are closed.