ಆರೋಗ್ಯ

ಕಡಲೇ ಬೀಜದಿಂದ ಹೃದಯ ಖಾಯಿಲೆ,ಗ್ಯಾಸ್,ಅಸಿಡಿಯಂತಹ ಸಮಸ್ಯೆಗಳು ದೂರ.

Pinterest LinkedIn Tumblr

ಬಡವರ ಬಾದಾಮಿ ಎಂದೇ ಪ್ರಸಿಧ್ದವಾಗಿರುವ ಕಡಲೆಬೀಜದಲ್ಲಿದೆ ಹಲವಾರು ಆರೋಗ್ಯಕರ ಅಂಶಗಳು. ಕಡಲೆಬೀಜ ಅಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ ಈ ಕಡಲೆ ಬೀಜವನ್ನು ಬಡವರ ಬಾದಾಮಿ ಎನ್ನುತ್ತಾರೆ ಈ ಕಡಲೆ ಬೀಜದಲ್ಲಿ ಬಾದಾಮಿಯಲ್ಲಿರುವಸ್ಟು ಪೋಷಕಾಂಶ ಗಳು ಇರುತ್ತವೆ ಇದರಲ್ಲಿ ಪ್ರೊಟೀನ್ ಕೊಬ್ಬು ಫೈಬರ್ ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿ ಇರುತ್ತದೆ ಇದು ನಮ್ಮ ಮೂಳೆಗಳನ್ನು ಬಲಪಡಿಸಿ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲದೆ ಉತ್ತಮ ಸೌಂದರ್ಯಕ್ಕೂ ಸಹಕರಿಸುತ್ತದೆ. ಕಡಲೆಬೀಜದಲ್ಲಿ ಇರುವಂತಹ ಆರೋಗ್ಯಕರ ಅಂಶಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯೋಣ. ಕಡಲೆಬೀಜ ಕರುಳಿನ ಕಾಯಿಲೆಯನ್ನು ಗುಣಪಡಿಸುತ್ತದೆ. ಪ್ರತಿದಿನ ಕಡಲೆಬೀಜವನ್ನು ಸೇವಿಸುವುದರಿಂದ ಗ್ಯಾಸ್ ಮತ್ತು ಅಸಿಡಿಯಂತಹ ಸಮಸ್ಯೆಗಳು ದೂರವಾಗುತ್ತವೆ.

2 ದಿನಕ್ಕೊಮ್ಮೆಯಾದರು ಕಡಲೇ ಬಿಜವನ್ನು ಸೇವಿಸಿದರೆ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ. ರಕ್ತಹೀನತೆ ಸಮಸ್ಯೆ ಇರುವವರು ಕಡಲೆ ಬೀಜವನ್ನು ಸೇವಿಸಬೇಕು ಪ್ರತಿದಿನ ಕಡಲೇ ಬೀಜವನ್ನು ತಿನ್ನುವುದರಿಂದ ರ ಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸಬಹುದು. ಪ್ರತಿದಿನ ಪುರುಷ ಮತ್ತು ಮಹಿಳೆಯರಿಬ್ಬರು ಕಡಲೇ ಬೀಜವನ್ನು ಸೇವಿಸುವುದರಿಂದ ಲೈಂ ಗಿಕ ಹಾರ್ಮೋನ ಗಳು ಸಮತೋಲನದಲ್ಲಿ ಇರುತ್ತವೆ. ಇದರಿಂದಾಗಿ ನಿಮ್ಮ ಲೈಂ ಗಿಕ ಜೀವನ ಸುಕಮಯವಾಗಿ ಇರುತ್ತದೆ. ಗರ್ಭಿಣಿಯರಿಗೆ ಕಡಲೆಬೀಜ ಬಹಳ ಒಳ್ಳೆಯದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಉತ್ತಮ ಬೆಳವಣಿಗೆಗೆ ಕಡಲೆ ಬೀಜದ ಪಾತ್ರ ತುಂಬಾ ಮುಖ್ಯ ಇದು ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ ಚರ್ಮದ ಕಾಂತಿಗೆ ಕಡಲೆಬೀಜ ಒಂದು ಒಳ್ಳೆಯ ಔಷಧಿ ಕಡಲೇಬಿಜದ ಎಣ್ಣೆಯನ್ನು ಬಳಸಿ ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು

ಇದರಲ್ಲಿ ಒಮೆಗ 6 ಎಂಬ ಕೊಬ್ಬಿನಂಶವಿರುತ್ತದೆ ಇದು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಈ ಒಂದು ಕಡಲೆಬೀಜವನ್ನು ತಿಂದ ನಂತರ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ಬೇಗ ಆಗುವುದಿಲ್ಲ ಏಕೆಂದರೆ ಕಡಲೆಬೀಜ ನಮ್ಮ ಹೊಟ್ಟೆಯಲ್ಲಿ ಜೀರ್ಣ ಆಗುವುದಕ್ಕೆ ಸರಿಸುಮಾರು 15 ರಿಂದ 20 ನಿಮಿಷಗಳ ಸಮಯ ಬೇಕು ಆದ್ದರಿಂದ ನಾವು ಕಡಲೆಬೀಜವನ್ನು ತಿಂದರೆ 15 ರಿಂದ 20 ನಿಮಿಷ ಅದ ನಂತರ ನೀರನ್ನು ಕುಡಿಯುವುದು ಒಳ್ಳೆಯದು.

Comments are closed.