ಈಗಿನ ಕಾಲದ ಹೆಚ್ಚಿನ ಜನರಲ್ಲಿ ಆಲಸ್ಯ ಮನೆ ಮಾಡಿದೆ ಅಂದರೆ ತಪ್ಪಾಗಲ್ಲ ಮತ್ತು ಹೊರಗಿನ ತಿಂಡಿಗಳ ಸೇವನೆಯಿಂದ ಜನರಿಗೆ ಹಲವು ರೀತಿಯ ಕಾಯಿಲೆಗಳು ಬರುತ್ತಿದೆ. ಇನ್ನು ಮಿತಿಮೀರಿದ ಆಹಾರಗಳ ಸೇವನೆಯಿಂದ ಜನರ ತೂಕ ಜಾಸ್ತಿಯಾಗುವುದರ ಜೊತೆಗೆ ಅವರ ಹೊಟ್ಟೆಯಲ್ಲಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಶೇಖರಣೆ ಆಗಿರುವುದರಿಂದ ಅವರು ಹಲವು ರೀತಿಯ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಹೊಟ್ಟೆಯ ಬಾಗದಲ್ಲಿ ಬೆಳೆದ ಕೊಬ್ಬಿನ ಅಂಶವನ್ನ ಬೊಜ್ಜು ಎಂದು ಕರೆಯುತ್ತಾರೆ ಮತ್ತು ಇದರಿಂದ ಕಾಲು ನೋವು, ರಕ್ತದ ಒತ್ತಡ ಮತ್ತು ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.
ಇನ್ನು ಈ ರೀತಿ ಬೊಜ್ಜು ಬರಲು ಕಾರಣ ಏನು ಅಂದರೆ ವ್ಯಾಯಾಮ ಮಾಡದೆ ಇರುವುದು ಮತ್ತು ಹಾರ್ಮೋನುಗಳ ಸಮತೋಲನ ತಪ್ಪುವುದು ಆಗಿದೆ, ಇನ್ನು ಇದರಿಂದ ನಿಮ್ಮ ತೂಕ ಜಾಸ್ತಿಯಾಗುವುದಲ್ಲದೆ ಹೊಟ್ಟೆಯ ಭಾಗದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾಗಿ ಶೇಖರಣೆ ಆಗುತ್ತದೆ. ಹಾಗಾದರೆ ಇದನ್ನ ಕಡಿಮೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ,
ಸ್ನೇಹಿತರೆ ಆಲೂಗಡ್ಡೆಯಿಂದ ಮಾಡಿದ ಈ ಆಹಾರವನ್ನ ಸೇವನೆ ಮಾಡಿದರೆ ನಿಮ್ಮ ಹೊಟ್ಟೆ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಬಹುದು, ಆಲೂಗಡ್ಡೆ ತಿಂದರೆ ತೂಕ ಜಾಸ್ತಿಯಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ ಆದರೆ ಅದೂ ತಪ್ಪು ಸ್ನೇಹಿತರೆ
ಹೌದು ಸ್ನೇಹಿತರೆ ಆಲೂಗಡ್ಡೆ ಅಂದ ತಕ್ಷಣ ಅದನ್ನ ಎಣ್ಣೆಯಲ್ಲಿ ಫ್ರೈ ಮಾಡಿ ತಿನ್ನುವುದಲ್ಲ ಬದಲು ಆರೋಗ್ಯಕರವಾದ ರೀತಿಯಲ್ಲಿ ಆಲೂಗಡ್ಡೆಯನ್ನ ಸೇವನೆ ಮಾಡಿದರೆ ಅದೂ ನಿಮ್ಮ ಹೊಟ್ಟೆಯ ಬಾಗದ ಬೊಜ್ಜನ್ನ ಕರಗಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಹೌದು ಆಲೂಗಡ್ಡೆಯನ್ನ ತೆಗೆದುಕೊಂಡು ಅದನ್ನ ನೀರಿನಲ್ಲಿ ಹಾಕಿ ಚನ್ನಾಗಿ ಕುದಿಸಿ ನಂತರ ಅದರ ಸಿಪ್ಪೆಯನ್ನ ತೆಗೆದು ಅದನ್ನ ಪೀಸ್ ಮಾಡಿ ತಿನ್ನಬೇಕು ಅಥವಾ ಆಲೂಗಡ್ಡೆಯನ್ನ ಸಣ್ಣ ಸಣ್ಣ ಪೀಸ್ ಗಳನ್ನಾಗಿ ಮಾಡಿ ಅದನ್ನ ನೀರಿನಲ್ಲಿ ಹಾಕಿ ಕುದಿಸಿ ನಂತರ ಅದಕ್ಕೆ ಉಪ್ಪನ್ನ ಸೇರಿಸಿ ತಿನ್ನಬಹುದು, ಇನ್ನು ಕುದಿಸಿ ಬೆಂದ ಆಲೂಗಡ್ಡೆಗೆ ಮೊಸರನ್ನ ಸೇರಿಸಿ ತಿಂದರೆ ಅದೂ ನಿಮ್ಮ ಹೊಟ್ಟೆಯ ಬಾಗದ ಬೊಜ್ಜನ್ನ ಕರಗಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ.
ಇನ್ನು ಇದು ಮಾಡಲು ಸಾಧ್ಯವಾಗದಿದ್ದರೆ ಬೇಯಿಸಿದ ಆಲೂಗಡ್ಡೆಯನ್ನ ಮಿಕ್ಸಿ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಕೊಂಡು ಅದನ್ನ ಜ್ಯೂಸ್ ಮಾಡಿ ಕೂಡ ನೀವು ಕುಡಿಯಬಹುದು, ಇನ್ನು ಇದನ್ನ ನೀವು ರಾತ್ರಿ ಊಟ ಆದ ನಂತರ ಸೇವನೆ ಮಾಡಬೇಕು ಮತ್ತು ಇದನ್ನ ತಿಂದ ನಂತರ ನೀವು ಯಾವುದೇ ರೀತಿಯ ಆಹಾರವನ್ನ ಸೇವನೆ ಮಾಡುವ ಹಾಗೆ ಇಲ್ಲ, ಸ್ನೇಹಿತರೆ ನೀವು ಈ ರೀತಿಯಾಗಿ ತಿನ್ನಲು ಆಲೂಗಡ್ಡೆಯನ್ನ ಸೇವನೆ ಮಾಡಿದರೆ ಕೆಲವೇ ಕಾಲವು ದಿನಗಳಲ್ಲಿ ನಿಮ್ಮ ಹೊಟ್ಟೆಯ ಭಾಗದ ಬೊಜ್ಜುಗಳು ಕರಗಿ ಹೋಗುತ್ತದೆ.

Comments are closed.