ಆರೋಗ್ಯ

ನಿರಂತರ ಟಿವಿ ವೀಕ್ಷಣೆ ಮಾಡುವುದು ಸಿಗರೇಟ್ ಸೇವನೆಗಿಂತ ಹೆಚ್ಚು ಹಾನಿಕಾರಕ ನಿಮಗಿದ್ದು ಗೋತ್ತೆ?

Pinterest LinkedIn Tumblr

ಮನೆಯಲ್ಲಿ ಟಿವಿ ಯಾರು ತಾನೇ ನೋಡಲ್ಲ ಹೇಳಿ, ಹಿಂದೆ ಹೆಚ್ಚಿನ ಮನೆಯಲ್ಲಿ ಟಿವಿ ಇರಲಿಲ್ಲ ಅದಕ್ಕೆ ಕೆಲವು ಹಳೆಯ ಕಾಲದ ಜನರಿಗೆ ಟಿವಿ ಬಗ್ಗೆ ಇನ್ನು ಸರಿಯಾಗಿ ತಿಳಿದಿಲ್ಲ. ಈಗಿನ ಕಾಲದಲ್ಲಿ ಯಾರ ಮನೆಯಲ್ಲಿ ತಾನೇ ಟಿವಿ ಇಲ್ಲ ಹೇಳಿ, ಟಿವಿ ಇಲ್ಲದ ಮನೆಯನ್ನ ಹುಡುಕುವುದು ಬಹಳ ಕಷ್ಟ, ಹೌದು ಎಷ್ಟೇ ಬಡವರಾಗಿದ್ದರೂ ಕೂಡ ಅವರ ಮನೆಯಲ್ಲಿ ಟಿವಿ ಇದ್ದೆ ಇರುತ್ತದೆ, ರಾತ್ರಿ ಆದರೆ ಸಾಕು ಜನರು ಟಿವಿ ಮುಂದೆ ಕುಳಿತು ತಮಗೆ ಇಷ್ಟವಾದ ಧಾರಾವಾಹಿಗಳನ್ನ ನೋಡುತ್ತಾರೆ. ಇನ್ನು ಮಹಿಳೆಯರು ಒಂದು ದಿನದ ಊಟವನ್ನಾದರೂ ಬಿಡುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಧಾರಾವಾಹಿ ನೋಡುವುದನ್ನ ಬಿಡುವುದಿಲ್ಲ. ಇನ್ನು ಪುರುಷರು ಕೂಡ ಟಿವಿ ಗೆ ಅಡಿಕ್ಟ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಕ್ರಿಕೆಟ್ ಮ್ಯಾಚ್ ಮತ್ತು ಕೆಲವು ಒಳ್ಳೆಯ ಕಾರ್ಯಕ್ರಮ ಇದ್ದಾಗ ಪುರುಷರು ಕೂಡ ಹೆಚ್ಚಾಗಿ ಟಿವಿ ನೋಡುತ್ತಾರೆ.

ಇನ್ನು ಟಿವಿ ನೋಡುವುದರಿಂದ ನಮ್ಮ ದೇಹಕ್ಕೆ ಆಗುವ ತೊಂದರೆ ಏನು ಅನ್ನುವುದು ಇನ್ನು ಹಲವು ಜನರಿಗೆ ತಿಳಿದಿಲ್ಲ, ಹೌದು ಟಿವಿ ನೋಡುವುದರಿಂದ ದೇಹಕ್ಕೆ ಆಗುವ ತೊಂದರೆಯ ಬಗ್ಗೆ ತಿಳಿದುಕೊಂಡರೆ ನೀವು ಒಮ್ಮೆ ಶಾಕ್ ಆಗುತ್ತೀರಿ. ಹಾಗಾದರೆ ದಿನಾಲೂ ಟಿವಿ ನೋಡುವುದರಿಂದ ದೇಹಕ್ಕೆ ಆಗುವ ತೊಂದರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಸಿಗರೇಟ್ ಸೇದುವುದಕ್ಕಿಂತ ಟಿವಿ ನೋಡುವುದು ದೇಹಕ್ಕೆ ಹೆಚ್ಚು ಅಪಾಯಕಾರಿಯಂತೆ, ಹೌದು ಸ್ನೇಹಿತರೆ ನಿರಂತರ ಒಂದು ಘಂಟೆ ಟಿವಿ ನೋಡುವುದರಿಂದ ಒಬ್ಬ ಮನುಷ್ಯನ 22 ನಿಮಿಷದ ಆಯಸ್ಸು ಕಡಿಮೆ ಆಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಆಧುನಿಕ ಜೀವನಶೈಲಿಯ ರೋಗಗಳು ಮತ್ತು ಹೃದಯ ವಿಜ್ಞಾನ ಕ್ಷೇತ್ರದ ಪ್ರಗತಿಯ ವಿಷಯದ ಕುರಿತು ಡಾ. ಸಿ ಏನ್ ಮಂಜುನಾಥ್ ಅವರು ವಿಶೇಷವಾದ ಉಪನ್ಯಾಸವನ್ನ ನೀಡಿದ್ದಾರೆ. ಅವರ ಪ್ರಕಾರ ಘಂಟೆಗಟ್ಟಲೆ ಟಿವಿ ವೀಕ್ಷಣೆ ಮಾಡುವುದು ಸಿಗರೇಟ್ ಸೇವನೆಗಿಂತ ಹೆಚ್ಚು ಹಾನಿಯನ್ನ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಒಂದು ಸಿಗರೇಟ್ ಸೇದುವುದರಿಂದ ಮನುಷ್ಯನ 11 ನಿಮಿಷ ಆಯಸ್ಸು ಕಡಿಮೆ ಆದರೆ ಒಂದು ಘಂಟೆ ನಿರಂತರವಾಗಿ ಟಿವಿ ನೋಡುವುದರಿಂದ ಮನುಷ್ಯನ 22 ನಿಮಿಷಯದ ಆಯಸ್ಸು ಕಡಿಮೆ ಆಗುತ್ತದೆ ಎಂದು ಉಪನ್ಯಾಸದಲ್ಲಿ ಹೇಳಿದ್ದಾರೆ.

ಒತ್ತಡದ ಜೀವನ ಶೈಲಿ, ಆಹಾರ ಪದ್ದತಿಯ ಬದಲಾವಣೆಯಿಂದ ಹೃದಯಾಘಾತ ಮೊದಲಾದ ಸಮಸ್ಯೆ ಹೆಚ್ಚಾಗುತ್ತದೆ, ಹಿಂದಿನ ಕಾಲ ದಲ್ಲಿ 65 ವರ್ಷ ದಾಟಿದವರಿಗೆ ಮಾತ್ರ ಹೃದಯಾಘಾತ ಆಗುತ್ತಿತ್ತು ಆದರೆ ಈಗ 45 ವರ್ಷದ ಪುರುಷರಲ್ಲಿ ಮತ್ತು 55 ವರ್ಷದ ಮಹಿಳೆಯ ರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ಈಗಾದರು ಜನರು ಎಚ್ಛೆತ್ತುಕೊಂಡು ತಮ್ಮ ಜೀವನ ಶೈಲಿಯನ್ನ ಬದಲಿಸಿಕೊಳ್ಳಬೇಕಾಗಿದೆ. ಸ್ನೇಹಿತರೆ ಇನ್ನಾದರೂ ನೀವು ಟಿವಿ ನೋಡುವುದನ್ನ ಕಡಿಮೆ ಮಾಡಿ ಮತ್ತು ನಿಮ್ಮ ಮನೆಯವರಿಗೂ ಇದರ ಕುರಿತು ತಪ್ಪದೆ ಹೇಳಿ. ಸ್ನೇಹಿತರೆ ಈ ಆರೋಗ್ಯ ಮಾಹಿತಿಯನ್ನ ಪತಿಯೊಬ್ಬರಿಗೂ ತಲುಪಿಸಿ.

Comments are closed.