ಆರೋಗ್ಯ

ಈ ಆಘಾತಕಾರಿ ವಿಷಯ ಕೋಳಿ ತಿನ್ನುವ ಅದೆಷ್ಟೋ ಜನರಿಗೆ ಗೊತ್ತಿಲ್ಲ, ಇವತ್ತೇ ತಿಳಿದುಕೊಳ್ಳಿ

Pinterest LinkedIn Tumblr

ಭಾರತದಲ್ಲಿ ಚಿಕನ್ ಪ್ರಿಯರು ತುಂಬಾ ಜನರಿದ್ದಾರೆ, ಹಾಗೆಯೆ ಕೋಳಿ ಮಾಂಸಕ್ಕೆ ಭಾರತದಲ್ಲಿ ಸಾಕಷ್ಟು ಬೇಡಿಕೆಗಳಿವೆ ಮತ್ತು ಇದನ್ನೇ ಉದ್ಯೋಗವಾಗಿಸಿಕೊಂಡು ಹಲವಾರು ಯುವ ಜನರು ಕೂಡ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೋಳಿ ಮಾಂಸಕ್ಕೆ ಭಾರತದಲ್ಲಿ ಸದಾ ಅಪಾರ ಬೇಡಿಕೆ ಇದ್ದೆ ಇದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಸಾಕುವ ನಾಟಿ ಕೋಳಿಗಳನ್ನು ಇಟ್ಟುಕೊಂಡು ಈ ಬೇಡಿಕೆ ಪೂರೈಸುವುದು ಸಾಧ್ಯವೇ ಇಲ್ಲ. ಹಾಗಾಗಿಯೇ ಬೇಗ ಬೆಳೆಯುವ ಮತ್ತು ಹೆಚ್ಚು ಮಾಂಸ ಕೊಡುವ ‘ಕಮರ್ಷಿಯಲ್‍ ಬ್ರಾಯ್ಲರ್‍’ ಎಂಬ ಕೋಳಿ ತಳಿಯನ್ನು ಸೃಷ್ಟಿಸಲಾಗಿದೆ. ವಿಪರೀತ ಬೇಡಿಕೆಯಿಂದಾಗಿ ಬಹಳಷ್ಟು ರೈತರು ಬೇಸಾಯದ ಜತೆಗೆ ಕೋಳಿ ಫಾರಂ ಕೂಡ ನಡೆಸುತ್ತಿದ್ದಾರೆ, ಕೋಳಿ ಸಾಕಣೆ ಮತ್ತು ಮಾಂಸ ಮಾರಾಟ ದೊಡ್ಡ ಉದ್ಯಮವಾಗಿ ಬೆಳೆದಿರುವುದರಿಂದ ದೇಶದೆಲ್ಲೆಡೆ ಹೆಚ್ಚಿನ ಮಂದಿ ಕೋಳಿ ಫಾರಂ ನಡೆಸುತ್ತಿದ್ದಾರೆ.

ಆದರೆ ಕೆಲವರು ಹಣದಾಸೆಗೆ ಬಿದ್ದು ಈ ಕೋಳಿ ಫಾರ್ಮ್ ನಲ್ಲಿಯೂ ಕೂಡ ಕೆಲವೊಂದು ಆಧುನಿಕತೆ ತಂದಿರುವುದು ಜನರ ಪಾಲಿಗೆ ಮುಳ್ಳಾಗಿದೆ ಎನ್ನಬಹುದು. ಹೆಚ್ಚು ಹೆಚ್ಚು ಫಾರ್ಮ್ ಕೋಳಿ ತಿನ್ನುವ ಎಷ್ಟೋ ಮಂದಿಗೆ ಈ ವಿಷಯದ ಬಗ್ಗೆ ಗೊತ್ತೇ ಇಲ್ಲ. ಇದೊಂದು ಆತಂಕಕಾರಿ ವಿಷಯ ಸದ್ಯಕ್ಕೆ ಎಲ್ಲರನ್ನು ಕಾಡುತ್ತಿದೆ. ಹೌದು ಕೋಳಿಗಳ ಮಾಂಸವನ್ನು ಶೀಘ್ರವಾಗಿ ಪಡೆಯಲು ಆ್ಯಂಟಿಬಯೊಟಿಕ್‍ ನೀಡಲಾಗುತ್ತಿದೆ ಎನ್ನುವ ಮಾತು ಹಲವು ಬಾರಿ ನಾವು ಟಿವಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ, ಈ ರೀತಿ ಆ್ಯಂಟಿಬಯೊಟಿಕ್‍ ಹೆಚ್ಚು ನೀಡಿದ ಕೋಳಿಗಳನ್ನು ತಿನ್ನುವುದು ಬಹಳಷ್ಟು ಅಪಾಯಕಾರಿ ಎನ್ನಲಾಗಿದೆ.

ಸುಮಾರು 40 ದಿನ ಸಾಕಿದ ಬಳಿಕ ಸಾಮಾನ್ಯವಾಗಿ ಒಂದು ಕೋಳಿ ಒಂದೂವರೆ ಕೆಜಿಯಷ್ಟು ತೂಕ ಬರುತ್ತದೆ, ಆದರೆ ಕೆಲವು ಕೋಳಿ ಗಳು ಶೀಘ್ರದಲ್ಲೇ ಎರಡೂವರೆ ಕೆಜಿ ತೂಕಕ್ಕೆ ಬರುತ್ತವೆ. ಇನ್ನು ಹಲವಾರು ಜನರು ಹಾಗು ಟಿವಿಗಳು ನಡೆಸಿದ ಎಷ್ಟೋ ರಿಯಾಲಿಟಿ ಚೆಕ್ ನಲ್ಲಿ ಆ್ಯಂಟಿಬಯೊಟಿಕ್‍ಗಳ ಖಾಲಿ ಪ್ಯಾಕೆಟ್‍ಗಳು ಕೋಳಿ ಫಾರ್ಮ್ ಗಳ ಬಳಿಯಲ್ಲಿ ಸಿಕ್ಕ ಉದಾಹರಣೆಗಳಿವೆ. ಕೊಲೆಸ್ಟಿನ್‍ ಸಲ್ಫೇಟ್‍ ಎಂಬ ಆ್ಯಂಟಿಬಯೊಟಿಕ್‍ ಅನ್ನು ಕೋಳಿಗಳಿಗೆ ಯಾವುದೇ ವಿವೇಚನೆ ಇಲ್ಲದೆ ನೀಡಲಾಗುತ್ತದೆ ಎನ್ನುವ ಮಾತು ಕೂಡ ಇದೆ ಕೊಲೆಸ್ಟಿನ್‍ ಸಲ್ಫೇಟ್‍ ಅನ್ನು ಮನುಷ್ಯರಿಗೂ ಸೋಂಕು ನಿವಾರಣೆಗಾಗಿ ನೀಡಲಾಗುತ್ತದೆ, ಆದರೆ ಇದು ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೊಟಿಕ್‍ ಅಲ್ಲ. ಇಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಅದೆಷ್ಟೋ ವಿಡಿಯೋಗಳು ಕೂಡ ಕೋಳಿಗಳಿಗೆ ಇಂಜೆಕ್ಷನ್ ನೀಡುವ ಜಾಲವನ್ನು ಬಯಲು ಮಾಡಿದೆ.

ಇನ್ನು ಆತಂಕದ ವಿಷಯ ಏನೆಂದರೆ ನೀವು ಇಷ್ಟಪಟ್ಟು ಚಪ್ಪರಿಸಿ ಚಪ್ಪರಿಸಿ ತಿನ್ನೋ ಈ ರೀತಿ ಬೆಳೆಸಿದ ಚಿಕನ್​ ನಿಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನೇ ನಾಶ ಮಾಡುತ್ತದೆ. ನಿಮ್ಮ ಮೇಲೆ ಯಾವುದೇ ಔಷಧಿಯೇ ಕೆಲಸ ಮಾಡದಂತೆ ಮಾಡಬಹುದು. ಕೋಳಿ ಖಾದ್ಯ ನಿಮ್ಮ ಹೃದಯ, ಕಿಡ್ನಿ, ಲಿವರಿಗೆ ಇನ್ನಿಲ್ಲದ ಬೇನೆ ಕೊಡಬಹುದು, ನಾನಾ ಮಾರಣಾಂತಿಕ ಸೋಂಕು ಕಾಯಿಲೆಯಿಂದ ಕಾಡಿಸಿ ಅನಾರೋಗ್ಯಕ್ಕೆ ಕಾರಣ ಆಗಬಹುದು. ಹೆಚ್ಚಿನ ಕೋಳಿ ಫಾರಂಗಳಲ್ಲಿ ಶೀಘ್ರ ಕೋಳಿ ಮಾಂಸ ಪಡೆಯಲು. ಕಾಯಿಲೆ ವಾಸಿ ಮಾಡಲು ಬಳಸಬೇಕಾದ ರೋಗ ನಿರೋಧಕ ಔಷಧಿಗಳನ್ನ ಕೋಳಿಗಳ ತೂಕ ಹೆಚ್ಚಿಸೋಕೆ ಬಳುಸುತ್ತಾರೆ ಎನ್ನುವ ಮಾಹಿತಿ ಕೂಡ ಇದೆ ಇದಕ್ಕೆಲ್ಲ ಸರ್ಕಾರ ಹಾಗು ಅರೋಗ್ಯ ಇಲಾಖೆಯೇ ಕ್ರಮ ಕೈಗೊಳ್ಳಬೇಕು.

Comments are closed.