ಆರೋಗ್ಯ

ಹಸಿ ಬಾಳೆಕಾಯಿಯಲ್ಲಿರುವ ಆರೋಗ್ಯಕರ ಗುಣಗಳು.

Pinterest LinkedIn Tumblr

ಬಾಳೆಹಣ್ಣಿನ ಮಹತ್ವ. ಬಾಳೆಹಣ್ಣು ಬಗ್ಗೆ ಹೇಳಬೇಕಾಗಿಲ್ಲ ತುಂಬಾ ಜನಕ್ಕೆ ಬಾಳೆಹಣ್ಣಿನಲ್ಲಿರುವ ಅಂಶಗಳ ಬಗ್ಗೆ ಗೊತ್ತಿರುತ್ತದೆ. ಅದು ನಮಗೆ ಕೊಡುವಂತಹ ಆರೋಗ್ಯಕರ ಅಂಶಗಳ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿಯಿದೆ ಆದರೆ ಕಚ್ಚಾ ಬಾಳೆಕಾಯಿ ಅಂದರೆ ಹಸಿ ಬಾಳೆಕಾಯಿ ಯಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿರುವುದಿಲ್ಲ ಕಚ್ಚಾ ಬಾಳೆಹಣ್ಣು ತಿನ್ನುವುದರಿಂದ ಉಂಟಾಗುವ ಆರೋಗ್ಯಕರ ಅಂಶಗಳ ಕುರಿತು ತಿಳಿಯೋಣ ಬನ್ನಿ ಉತ್ತಮ ಆರೋಗ್ಯಕ್ಕೆ ಬಾಳೆಕಾಯಿ ಅವಶ್ಯವಾಗಿ ಬೇಕಾಗಿದೆ. ಎಲ್ಲರೂ ತುಂಬಾ ಇಷ್ಟಪಟ್ಟು ಬಾಳೆಹಣ್ಣನ್ನು ಸೇವಿಸುತ್ತಾರೆ ಆದರೆ ಬಾಳೆಕಾಯಿಯನ್ನು ಹಸಿಯಾಗಿ ತಿನ್ನುವುದಕ್ಕೆ ಸಾಧ್ಯವಿಲ್ಲ ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯ ಸುಧಾರಣೆಯಲ್ಲಿಡಲು ಮಹತ್ವದ ಪಾತ್ರವಹಿಸುತ್ತದೆ.

ಬಾಳೆಕಾಯಿಯನ್ನು ಬೇಯಿಸಿ ಪಲ್ಯ ತಯಾರಿಸುತ್ತಾರೆ. ಬಾಳೆಕಾಯಿ ಬಜ್ಜಿ ತಯಾರಿಕೆ ಬಗ್ಗೆ ಹೇಳಬೇಕಾಗಿಲ್ಲ.ಬಹಳಷ್ಟು ಜನರು ಬಜ್ಜಿ ತಿನ್ನುತ್ತಾ ಅದರ ರುಚಿಯನ್ನು ಆಸ್ವಾದಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಳೆಕಾಯಿ ಬಜ್ಜಿ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ ಆದರೆ ಬಾಳೆಕಾಯಿ ಚಿಪ್ಸ್ ಬಾಳೆಕಾಯಿ ಗೊಜ್ಜು ಹಾಗೂ ಸಾಂಬಾರು ಮಾಡಿ ಸೇವಿಸುವುದು ಸಹ ಉತ್ತಮ. ಬಾಳೆಕಾಯಿ ತುಂಡಾಗಿ ಕತ್ತರಿಸಿ ಉಪ್ಪು ಖಾರ ಹಾಕಿ ಫ್ರೈ ಮಾಡಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ ಇಂದಿನ ಕಾಲದಲ್ಲಿ.ಇನ್ನು ಮಧುಮೇಹಿಗಳು ಈ ರೀತಿಯ ಪದಾರ್ಥಗಳ ಸೇವನೆಯಿಂದ ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ಕೆಲವೊಂದು ರಿಸರ್ಚ್ ಗಳಿಂದ ತಿಳಿದುಬಂದಿದೆ ಜೊತೆಗೆ ಜೀರ್ಣಕ್ರಿಯೆಯಲ್ಲಿ ನಿಮಗೆ ಇದು ಸಹಕರಿಸುತ್ತದೆ ದೈಹಿಕ ತೂಕ ಇಳಿಸಲು ನೆರವಾಗುತ್ತದೆ ಒಂದು ಬಾಳೆಕಾಯಿ ಇಂದ ತಯಾರಿಸಿದ ಪಲ್ಯ ಸಾಕಷ್ಟು ರುಚಿಕರವಾಗಿರುತ್ತದೆ ಬಾಳೆಕಾಯಿ ಯಲ್ಲಿರುವ ಪಿಷ್ಟ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ .

ಪಿಷ್ಟ ಹೀರಿಕೊಳ್ಳುವ ನಾರಿನಾಂಶ ದಂತೆ ಕೆಲಸ ಮಾಡುತ್ತದೆ ಬಾಳೆಕಾಯಿ. ಅಷ್ಟೇ ಅಲ್ಲದೆ ಜೀರ್ಣಾಂಗದ ವ್ಯವಸ್ಥೆಯಲ್ಲಿ ಸೇರಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಜೀರ್ಣಕ್ರಿಯೆಯ ವ್ಯವಸ್ಥೆ ಸುಧಾರಿಸುವಲ್ಲಿ ಬಾಳೆಕಾಯಿ ಸಹಕರಿಸುತ್ತದೆ ಫೈಬರ್ ಒಳಗೊಂಡಿರುವ ಬಾಳೆಕಾಯಿ ಜೀರ್ಣಕ್ರಿಯೆ ಸುಧಾರಿಸಿ ಕರುಳಿನ ಚಲನೆಯನ್ನು ಸುಲಭವಾಗಿಸುತ್ತದೆ ರಕ್ತ ಶುದ್ಧೀಕರಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಬಾಳೆಕಾಯಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು ನರಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ ಬೇಸಿದ ಬಾಳೆಕಾಯಿ ಯಲ್ಲಿ 531 ಎಂ.ಜಿ ಯಷ್ಟು ಪೊಟ್ಯಾಶಿಯಂ ಒಳಗೊಂಡಿರುತ್ತದೆ ಬಾಳೆಕಾಯಿ ಯಲ್ಲಿರುವ ಫೈಬರ್ ಅಂಶದಿಂದ ಹೊಟ್ಟೆ ಬೇಗನೆ ತುಂಬಿದಂತಾಗುತ್ತದೆ ಹಾಗೂ ಇದರಿಂದ ದೇಹದ ತೂಕ ಇಳಿಸಲು ಸಹಕಾರವಾಗುತ್ತದೆ ಮಧುಮೇಹಿಗಳಿಗೂ ಒಂದು ರೀತಿ ಇದು ಉಪಯುಕ್ತವಾಗಿದೆ ಎರಡನೇ ಹಂತದ ಮಧುಮೇಹ ನಿಯಂತ್ರಿಸಲು ಹಸಿರು ಬಾಳೆಕಾಯಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ

ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿರುತ್ತದೆ ಮಧುಮೇಹಿಗಳು ಇದನ್ನು ಸೇವಿಸಬಹುದಾಗಿದೆ ಅಧಿಕ ಪ್ರಮಾಣದಲ್ಲಿ ಅಂಶಗಳು ಅದರಲ್ಲೂ ನ್ಯೂಟ್ರಿನ್ ಅಂಶಗಳು ಬಾಳೆಕಾಯಿ ಎಲ್ಲಿ ಇರುತ್ತದೆ ಡಯೇರಿಯಾ ನಿಯಂತ್ರಣದಲ್ಲಿಡಲು ಇದು ಸಹಕರಿಸುತ್ತದೆ ಡಯೇರಿಯಾದ ರೋಗ ಲಕ್ಷಣಗಳ ಆದ ತಲೆನೋವು,ವಾಕರಿಕೆ ಮತ್ತು ಸುಸ್ತನ್ನು ದೂರಮಾಡುತ್ತದೆ.ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ ಬಿ 6 ಅಂಶಗಳು ಹೇರಳವಾಗಿ ಸಿಗುತ್ತದೆ ವಿಟಮಿನ್ ಬಿ 6, ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ ಇದಲ್ಲದೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಇದು ನಿಯಂತ್ರಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಹಸಿರುಬಾಳೆಕಾಯಿ ಎತ್ತಿದ ಕೈ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುವುದಕ್ಕೆ ಇದು ಉತ್ತಮವಾಗಿ ಕೆಲಸ ಮಾಡುತ್ತದೆ ಆದ್ದರಿಂದ ಬಾಳೆಹಣ್ಣು ಮಾತ್ರವಲ್ಲ ಹಸಿರು ಬಾಳೆಕಾಯಿ ಸೇವನೆಯಿಂದ ನಮಗೆ ಇಷ್ಟೆಲ್ಲಾ ಆರೋಗ್ಯ ದೊರೆಯುತ್ತದೆ.

Comments are closed.