ಆರೋಗ್ಯ

ಅರ್ಧ ತಲೆನೋವು ಸಮಸ್ಯೆ ನಿವಾರಣೆಗೆ ಪರಿಹಾರ ಇಲ್ಲಿದೆ

Pinterest LinkedIn Tumblr

ಮನುಷ್ಯನಿಗೆ ತಲೆನೋವು ಎನ್ನುವುದು ಆತ ಯಾವುದಾದರೂ ಒಂದು ವಿಚಾರದ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡಿದಾಗ ಬರುತ್ತದೆ ದರಲ್ಲೂ ಅರ್ಧ ತಲೆನೋವು ಬಂತು ಎಂದರೆ ನಾವು ಮಾನಸಿಕವಾಗಿ ತುಂಬಾನೆ ಹಿಂಸೆಯನ್ನು ಅನುಭವಿಸುತ್ತೇವೆ ಈ ಅರೆ ತಲೆನೋವನ್ನು ಸಹಿಸಿಕೊಳ್ಳಲು ಆಗದಷ್ಟು ನೋವು ಕೊಡುತ್ತದೆ ಇಂತಹ ಅರ್ಧ ತಲೆನೋವಿಗೆ ಮನೆಯಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗಾದರೆ ಅರ್ಧ ತಲೆ ನೋವಿಗೆ ಮನೆ ಮದ್ದು ಯಾವುದು ಮತ್ತು ಅದನ್ನು ಹೇಗೆ ಮಾಡಬೇಕು ಎನ್ನುವುದನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಮೊದಲನೇ ಮನೆಮದ್ದು ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವುದರಿಂದ ಕಟ್ಟಿದ ಮೂಗು ಗಂಟಲಿನ ಕಿರಿಕಿರಿ ಹಾಗೂ ಸೈನಸ್ ನಿಂದ ಉಂಟಾಗುವ ತಲೆ ನೋವುಗಳೆಲ್ಲವು ನಿವಾರಣೆ ಆಗುತ್ತವೆ

ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆ ಆಗುವುದಿಲ್ಲ ಅಲ್ಲದೆ ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ ಬಿಸಿನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದು ಇದರ ಪರಿಣಾಮವಾಗಿ ಬೆವರು ಪ್ರಾರಂಭವಾಗುತ್ತದೆ ಈ ಕ್ರಿಯೆಯಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ ಅರೆ ತಲೆನೋವಿನಿಂದ ಬಳಲುತ್ತಿರುವವರು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಪ್ಪದೆ ನೀರು ಕುಡಿಯುವ ಅಭ್ಯಾಸ ರೂಢಿ ಮಾಡಿಕೊಂಡರೆ ಪರಿಹಾರ ಸಿಗುತ್ತದೆ ಹಾಗೇನೇ ಇದರ ಜೊತೆಗೆ ನರಗಳ ಸಂಬಂದಿ ಅನೇಕ ನೋವುಗಳನ್ನು ಕೂಡ ನಿವಾರಿಸಿಕೊಳ್ಳಬಹುದು.

ಹೀಗೆ ಪ್ರತಿದಿನ ಬೆಳಿಗ್ಗೆ ಬಿಸಿನೀರು ಕುಡಿಯುವುದರಿಂದ ಕೇವಲ ಅರ್ಧ ತಲೆನೋವು ಹೋಗುವುದರ ಜೊತೆಗೆ ನಾವು ವ್ಯಾಯಾಮ ಮಾಡದೆ ಈಗಿನ ಹೊರಗಿನ ಆಹಾರ ತಿನ್ನುವುದರಿಂದ ಬೇಗನೆ ಪ್ರತಿಯೊಬ್ಬರಿಗೂ ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಬೊಜ್ಜು ಸಾಮಾನ್ಯವಾಗಿ ಬಿಟ್ಟಿದೆ ಈ ಬೊಜ್ಜಿನಿಂದಲೇ ಮನುಷ್ಯನಿಗೆ ಹಲವಾರು ಕಾಯಿಲೆಗಳು ಬರುತ್ತಿವೆ ಈ ಬೊಜ್ಜನ್ನು ಕರಗಿಸಿಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ ಆದರೆ ಯಾವುವು ಸಹ ಉಪಯೋಗ ನೀಡುವುದಿಲ್ಲ ವ್ಯಾಯಾಮ ಮಾಡುವುದು ಸಹ ಕೆಲವು ಜನರು ಮೊದಮೊದಲು ಸ್ವಲ್ಪ ದಿನ ಮುಂದುವರೆಸಿಕೊಂಡು ಹೋಗುತ್ತಾರೆ ನಂತರದ ದಿನಗಳಲ್ಲಿ ಅದನ್ನು ಬಿಟ್ಟು ಬಿಡುತ್ತಾರೆ ಹೀಗಿರುವಾಗ ತಮ್ಮ ದೇಹದ ಅನುಪಯುಕ್ತ ಕೊಬ್ಬನ್ನು ಕರಗಿಸಲು ಈ ಬಿಸಿನೀರು ಅಂತವರಿಗೆ ತುಂಬಾನೇ ಒಂದು ಪ್ರಯೋಜನಕಾರಿ ಅಂತಾ ಹೇಳಬಹುದು

ಏಕೆಂದರೆ ಈ ಬಿಸಿನೀರನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಬೊಜ್ಜು ನಿವಾರಣೆಯಾಗುತ್ತದೆ ಹಾಗೇನೇ ದೇಹದ ತೂಕ ಕೂಡ ಕಡಿಮೆ ಆಗುತ್ತದೆ ಇದೆಲ್ಲದರ ಜೊತೆಗೆ ನಮ್ಮ ದೇಹದ ರ ಕ್ತವು ಕೂಡ ಶುದ್ಧಿಯಾಗುತ್ತದೆ ನಂತರ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬೇರೆ ಬೇರೆ ತಿಂಡಿ ತಿನಿಸುಗಳನ್ನು ತಿನ್ನುವ ಬದಲು ಬಿಸಿ ನೀರು ಕುಡಿಯುವುದರಿಂದ ನಮ್ಮ ಮೆದುಳು ಸಹ ಚೆನ್ನಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ ಇದರಿಂದ ಮೆದುಳಿನ ಕಾರ್ಯವು ಸಹ ಸುಗಮವಾಗಿ ನಡೆಯುತ್ತದೆ. ಆದ್ದರಿಂದ ಈ ಬಿಸಿನೀರು ಮನುಷ್ಯನ ದೇಹಕ್ಕೆ ತುಂಬಾ ಒಳ್ಳೆಯದು ಅಂತಾನೆ ಹೇಳಬಹುದು ಇದರಿಂದ ಅರ್ಧ ತಲೆನೋವು ಕೂಡ ಕೂಡಲೇ ನಿವಾರಣೆ ಆಗುತ್ತದೆ. ಹಾಗಾಗಿ ನೀವು ಸಹ ಇನ್ನುಮುಂದೆ ಈ ಬಿಸಿನಿರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

Comments are closed.