ಆರೋಗ್ಯ

ದವಸ ಧಾನ್ಯಗಳಿಡುವ ವಾಡೆಯಲ್ಲಿ ಈ ಸಸ್ಯದ ಬೇರನ್ನು ಇಟ್ಟರೆ ಕ್ರಿಮಿಕೀಟಗಳು ಬರುವುದಿಲ್ಲ.

Pinterest LinkedIn Tumblr

ಅವನತಿಯ ಅಂಚು ತಲುಪಿರುವ ಹಲವಾರು ಔಷಧಿ ಸಸ್ಯಗಳಲ್ಲಿ ಮಾಕಳಿ ಅಥವಾ ಮೀಸೆಕಾಯಿ ಗಿಡವು ಸಹ ಒಂದು ಕೆಲ ದಶಕಗಳ ಹಿಂದೆ ಬಂಡೆಗಳಿಂದ ಕೂಡಿದ ಪ್ರದೇಶದಲ್ಲಿ ಸಹಜವಾಗಿ ಕಾಣಸಿಗುತ್ತಿದ್ದ ಮಾಕಳಿ ಅಕ್ರಮ ಗಣಿಗಾರಿಕೆ ಹಾಗೂ ಅರಣ್ಯ ನಾಶದಿಂದಾಗಿ ಇಂದು ಕೆಲವು ಸೀಮಿತ ಪ್ರಾಂತಗಳಲ್ಲಿ ಮಾತ್ರ ಕಾಣಸಿಗುತ್ತದೆ. ಅಪೋಸೈನಿಸಿಯೇ ಕುಟುಂಬಕ್ಕೆ ಸೇರಿದ ಮಾಕಳಿ ಗಿಡದ ವೈಜ್ಞಾನಿಕ ಹೆಸರು ಡಿಕ್ಯಾನಿಪಿಸ್.

ಈ ಸಸ್ಯದ ಮೂಲ ಭಾರತವೇ ಆಗಿದ್ದು ಸಹಜವಾಗಿ ಕರ್ನಾಟಕದ ಎಲ್ಲ ಕಾಡುಗಳಲ್ಲಿ ಕಂಡುಬರುತ್ತದೆ ಸಂಸ್ಕ್ರುತದಲ್ಲಿ ದವಳ ಕೋಪಕನ್ಯಾ ಶ್ವೇತಸರಿವ ಇತ್ಯಾದಿ ಹೆಸಯುರುಗಳಿದ್ದರೆ ಕನ್ನಡದಲ್ಲಿ ಮಾಕಳಿ ಮಾಗಡಿ ಹಾಗೂ ಮೀಸೆಕಾಯಿ ಗಿಡ ಎಂದರೆ ಆಂಗ್ಲಭಾಷೆಯಲ್ಲಿ ಸ್ವ್ಯಾಲೊರುಟ್ ಎನ್ನಲಾಗಿದೆ.

ಬಂಡೆಗಳು ಜಗು ಸಸ್ಯವರ್ಗಗಳು ಇರುವ ಕಾಡುಗಳಲ್ಲಿ ಕಂಡುಬರುವ ಈ ಸಸ್ಯ ಸಾಮಾನ್ಯವಾಗಿ ಬಂಡೆಗಳ ನಡುವೆ ಬೆಳೆಯುತ್ತದೆ ಮರಗಳು ಹಾಗೂ ಬಂಡೆಗಳ ಆಶ್ರಯದಲ್ಲಿ ಸುಮಾರು 30 ರಿಂದ 40 ಅಡಿಗಳಿಗಿಂತಲು ವಿಸ್ತಾರವಾಗಿ ಹಬ್ಬಿಕೊಂಡು ಬೆಳೆಯಬಲ್ಲ ಬಳ್ಳಿಗಳಿಂದಕೂಡಿದ ಸಸ್ಯವಾಗಿದ್ದು ಇಡೀ ಸಸ್ಯದಲ್ಲಿ ಬಿಳಿಯ ಹಾಲಿನಂತಹ ಜಿಗುಟಾದ ದ್ರವವಿರುತ್ತದೆ.

ಸುಮಾರು 9 ಸೆಂಟಿಮೀಟರ್ ಉದ್ದ ಹಾಗೂ 8 ಸೆಂಟಿಮೀಟರ್ ಅಗಲವಾದ ಅಂಡಾಕಾರದ ಎಲೆಹಾಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂದಿರುತ್ತವೆ. ಏಪ್ರಿಲ್ ಹಾಗೂ ಜೂನ್ ತಿಂಗಳ ಅವಧಿಯಲ್ಲಿ ಹಳದಿ ಬಣ್ಣದ 5 ದಳಗಳಿಂದ ಕುಡಿದ ನಕ್ಷತ್ರಾಕಾರದ ಪುಟ್ಟ ಪುಟ್ಟ ಹೂವುಗಳಿರುತ್ತವೆ.

ಹಸಿರು ಬಣ್ಣದ ನೀಳವಾದ ನುಣುಪಾದ ಕಾಯಿಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ನೋಡಲು ಮೀಸೆ ಆಕಾರದಲ್ಲಿ ಕಾಣುವುದರಿಂದ ಮೀಸೆಕಾಯಿಕಾಯಿ ಗಿಡ ಎನ್ನಲಾಗಿದೆ ಈ ಕಾಯಿಗಳು ಒಣಗಿದ ಬಳಿಕ ಇದರ ಒಳಗೆ ಬಿಳಿಯ ರೇಷ್ಮೆಯಂತಹ ಕೂದಲುಗಳಿಂದ ಕುಡಿದ ಪುಟ್ಟ ಪುಟ್ಟ ಬೀಜಗಳಿರುತ್ತವೆ.

ಟುಹೈಡ್ರಾಕ್ಸಿ 4 ಮೆಟಾಕ್ಷಿಬೆಂಜೋಲ್ ಡಿಹೈಡ್ ಫೋರ್ವೋ ಮೆಟಾಲೈ ರಿಸೋರ್ಸ್ರಿಡ್ ಆಲ್ಡಿಹೈಡ್ ಬೆಂಜೈನ್ ಆಲ್ಕೋಹಾಲ್ ಈ ಅಟ್ಯಾಟೋನ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕುಡಿದುವ ಮಾಕಳಿಯನ್ನು ಸಾಂಪ್ರದಾಯಿಕ ಆಯುರ್ವೇದ ಹಾಗೂ ಸಿಧ್ದವೈದ್ಯ ಪದ್ಧತಿಗಳಲ್ಲಿ ಅಜೀರ್ಣ ಗರ್ಭಕೋಶದ ತೊಂದರೆಗಳು ಸಂಧಿವಾತ ಚರ್ಮರೋಗ ನಿಶಕ್ತಿ ರಕ್ತಶುದ್ದೀಕರಣ ಹಿಮೋಗ್ಲೋಬಿನ್ ಕೊರತೆ ಇತ್ಯಾದಿ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ.

ಅದ್ಭುತವಾದ ಸುವಾಸನೆಯಿಂದ ಕುಡಿರುವ ಮಾಕಳಿ ಬೆರಿಗೆ ಆಂಟಿಬ್ಯಾಕ್ಟೀರಿಯಲ್ ಗುಣವಿರುವುದರಿಂದ ಈ ಬೆರಿಗೆ ಸೂಕ್ಷ್ಮ ಜೀವಿಗಳಾಗಲಿ ಅಥವಾ ಕಿಟಗಳಾಗಲಿ ತಗುಲುವುದಿಲ್ಲ ಹಾಗಾಗಿ ಹಿಂದಿನ ಕಾಲದಲ್ಲಿ ದವಸ ಧಾನ್ಯಗಳ ವಾಡೆಗಳಲ್ಲಿ ಇದನ್ನು ಇಡಲಾಗುತ್ತಿತ್ತು ಇದರಿಂದ ರೈತರ ಧಾನ್ಯಗಳಿಗೆ ಕೀಟಗಳ ಬಾದೆಗಳಿರುತ್ತಿರಲಿಲ್ಲ.

ಮಾಗಡಿ ಬೇರನ್ನು ಉಪ್ಪಿನ ಕಾಯಿಗಳಲ್ಲಿ ಬಳಸುತ್ತಿರುವುದು ಇದೆ ಕಾರಣಕ್ಕಾಗಿ ಈ ಬೇರುಗಳನ್ನು ಬಳಸಿ ತಯಾರಿಸಲಾದ ಉಪ್ಪಿನಕಾಯಿ ಹಲವಾರು ವರ್ಷಗಳ ಕಾಲ ಕೆಡದೆ ಉಪಯೋಗಿಸಲು ಯೋಗ್ಯವಾಗಿರುತ್ತಿದ್ದವು ಅಲ್ಲದೆ ಇದರ ಬೇರಿನ ಸ್ವಾದವು ಸಹ ಅತ್ಯಂತ ರುಚಿಕರವಾಗಿರುವುದರಿಂದ ಉಪ್ಪಿನ ಕಾಯಿಗಳಿಗೆ ಸ್ವಾದ ರುಚಿ ಹಾಗೂ ಧೀರ್ಘಕಾಲದ ಬಾಳಿಕೆಯ ಜೊತೆಗೆ ಔಷಧಿ ಗುಣಗಳನ್ನು ಹೊಂದಿದೆ.

ಈ ಬೇರಿನ ಸಾಮಾನ್ಯ ಉಪಯೋಗವೆಂದರೆ ಈ ಬೇರಿನ ಶರಬತ್ತು ಚಹಾ ಹಾಗೂ ಉಪ್ಪಿನಕಾಯಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳಿಂದ ಗ್ಯಾಸ್ಟ್ರಿಕ್ ನಿಂದ ಮುಕ್ತಿ ಪಡೆಯುವುದರ ಜೊತೆಗೆ ರಕ್ತ ವಿಕಾರಗಳು ಶಕ್ತಿಹೀನತೆ ವಸಡು ಹಾಗೂ ಹಲ್ಲಿನ ಸಮಸ್ಯೆಗಳು ಇತ್ಯಾದಿ ತೊಂದರೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ನಿರ್ಧಿಷ್ಟ ಕಾಯಿಲೆಗಳಿಗೆ ಈ ಬೇರಿನಿಂದ ಹೇಗೆ ಚಿಕಿತ್ಸೆ ನೀಡುತ್ತಾರೆಂಬ ಮಾಹಿತಿಗಳು ಲಭ್ಯವಿಲ್ಲದಿದ್ದರು ಇದರ ಸೇವನೆಯಿಂದ ಹಲವಾರು ರೋಗಗಳಿಂದ ದೂರವಿರಬಹುದು. ಈ ಸಸ್ಯದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಿದ್ದರೂ ಕೂಡ ಗರ್ಭಿಣಿಯರು ಬಳಸುವಾಗ ವೈದ್ಯರ ಸಲಹೆ ಪಡೆಯಬೇಕು ಮಾಕಳಿ ಬೇರುಗಳನ್ನು ಕಾಡುಗಳಿಂದ ಸಂಗ್ರಹಿಸುವುದು ಕಾನೂನು ಬಾಹಿರವಾಗಿದ್ದು ಈ ಗಿಡದ ಬೀಜಗಳನ್ನು ಸಂಗ್ರಹಿಸಿ ಸ್ಥಾನಿಯವಾಗಿ ಬೆಳೆಸಲು ಪ್ರಯತ್ಸಿಸಬಹುದು ಇದರಿಂದಾಗಿ ಮಾಕಳಿ ಗಿಡದ ಉಳಿಯುವಿಕೆಗೂ ಸಹಕಾರಿಯಾಗಿದೆ.

Comments are closed.