ಕರ್ನಾಟಕ

ಅಮಿತ್ ಶಾ ಭೇಟಿಗೆ ಸಮಯ ನಿಗದಿ; ಸಂಪುಟ ವಿಸ್ತರಣೆಗೆ ಅನುಮತಿ ಸಾಧ್ಯತೆ

Pinterest LinkedIn Tumblr

ನವದೆಹಲಿ: ಸಚಿವ ಸಂಪುಟ ವಿಸ್ತರಣೆಗಾಗಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಗುರುವಾರ ದೆಹಲಿಗೆ ಆಗಮಿಸಿದ್ದರು. ನಿನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಬಿಎಸ್​ವೈ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆದರೆ, ಈ ಭೇಟಿ ಐದು ನಿಮಿಷಕ್ಕಷ್ಟೇ ಸೀಮಿತವಾದ್ದರಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಆಗಿರಲಿಲ್ಲ. ಇಂದು ಬೆಳಗ್ಗೆ 9 ಗಂಟೆಗೆ ಮತ್ತೆ ಭೇಟಿಯಾಗುವಂತೆ ಅಮಿತ್ ಶಾ ಹೇಳಿದ್ದರು.

ಆದರೆ, ಇಂದು ಬೆಳಗ್ಗೆಯಿಂದ ಅಮಿತ್ ಶಾ ಭೇಟಿಗಾಗಿ ಬಿಎಸ್​ವೈ ಕಾದು ಕುಳಿತಿದ್ದರು. ಮಧ್ಯಾಹ್ನ 3 ಗಂಟೆಯವರೆಗು ಗೃಹ ಕಚೇರಿಯಿಂದ ಬಿಎಸ್​ವೈಗೆ ಭೇಟಿಯ ಕರೆ ಬರಲಿಲ್ಲ. ಹೀಗಾಗಿ ಬೆಳಗ್ಗೆಯಿಂದಲೂ ಸಿಎಂ ಬಿಎಸ್​ವೈ ಕರ್ನಾಟಕ ಭವನದಲ್ಲಿ ಕಾಯುತ್ತಾ ಕುಳಿತಿದ್ದರು. ಕೊನೆಗೂ ಗೃಹ ಕಚೇರಿಯಿಂದ ಬಂದಿದ್ದು, ಸಂಜೆ ನಾಲ್ಕು ಗಂಟೆಗೆ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದೆ. ಈ ವೇಳೆ ಸಿಎಂ ಬಿಎಸ್​ವೈ ಅವರು ಅಮಿತ್ ಶಾ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿ, ಮಂತ್ರಿ ಮಂಡಲ ವಿಸ್ತರಣೆಗೆ ಅನುಮತಿ ಪಡೆಯುವ ಸಾಧ್ಯತೆ ಇದೆ.

Comments are closed.