ಸೌಂದರ್ಯ ಎನ್ನುವುದು ಮನುಷ್ಯರಿಗೆ ಅದರಲ್ಲೂ ಮಹಿಳೆಯರಿಗೆ ಒಂದು ಅತ್ಯಮೂಲ್ಯ ಎಂದು ಹೇಳಬಹುದು ಆದರೆ ಅದನ್ನು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದು ನಮಗೆ ತಿಳಿದಿದ್ದರೆ ಅದು ತುಂಬಾ ಒಳ್ಳೆಯದು ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳುತ್ತೇವೆ ಏಕೆಂದರೆ ಅದು ನಮಗೆ ಗೊತ್ತಿರುವುದಿಲ್ಲ ಅದರಲ್ಲಿ ಒಂದು ಎಂದರೆ ಕೂದಲಿಗೆ ಬಣ್ಣ ಹಚ್ಚುವುದು ಹೀಗೆ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಅಡ್ಡ ಪರಿಣಾಮ ಹೆಚ್ಚಾಗುತ್ತದೆ ಹಾಗಾದರೆ ಯಾವ ರೀತಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋದರೆ ನಮ್ಮ ಆರೋಗ್ಯ ಹಾಳಾಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಕೂದಲಿಗೆ ಬಣ್ಣ ಕೂದಲು ನೇರವಾಗಿ ನಿಲ್ಲಲ್ಲು ನೀವೇನಾದರೂ ವಸ್ತುಗಳನ್ನು ಬಳಸುತ್ತಿದ್ದರೆ ಹೆಂಗಸರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಇದೆ
ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ ಈ ಕೆಮಿಕಲ್ ಕೂದಲು ಉತ್ಪಾದನೆಗಳಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಸಂಶೋಧಕರು ದೃಢಪಡಿಸಿದ್ದಾರೆ ಕ್ಯಾನ್ಸರ್ ಮತ್ತು ಕೂದಲಿಗೆ ಬಣ್ಣ ಹಚ್ಚುವುದಕ್ಕೆ ಯಾವ ರೀತಿಯ ಸಂಬಂದ ಇದೆ ಎನ್ನುವುದರ ಬಗ್ಗೆ ಅಧ್ಯಯನ ಕೂಡ ಮಾಡಲಾಗಿದೆ. ಆಫ್ರಿಕಾ ಹಾಗೂ ಅಮೆರಿಕದ ಮಹಿಳೆಯರು ಕೂದಲಿಗೆ ಅತಿ ಹೆಚ್ಚಾಗಿ ಬಣ್ಣವನ್ನು ಹಚ್ಚುತ್ತಾರೆ ಹಾಗಾಗಿ ಅವರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಟ್ಟು 709 ಮಹಿಳೆಯರನ್ನು ಸಂಶೋಧನೆಗಾಗಿ ಬಳಸಿಕೊಳ್ಳಲಾಗಿತ್ತು ಎಂದು ಹೋಗಲಾರದಂತೆ ಕೂದಲಿಗೆ ಬಣ್ಣವನ್ನು ಬಳಸುತ್ತಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಉಳಿದವರಿಗಿಂತ 9 ರಷ್ಟು ಹೆಚ್ಚಾಗಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ.
5 ರಿಂದ 8 ವಾರಗಳಿಗೊಮ್ಮೆ ಹೋಗಲಾರದಂತ ಕೂದಲಿನ ಬಣ್ಣವನ್ನು ಬಳಸುತ್ತಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಂಬಂವ 60 ರಷ್ಟು ಹೆಚ್ಚಾಗಿದೆ ಜಾಸ್ತಿ ದಿನ ಬಾಳಿಕೆ ಬರದೆ ಇರುವ ಕೂದಲಿನ ಬಣ್ಣದ ಬಳಕೆಯಿಂದ ಇಂತಹ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ರೀತಿ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲ್ಲೂ ನಾವು ಮಾಡುವಂತಹ ಇಂತಹ ಕೆಲಸದಿಂದಾಗಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಹೀಗಾಗಿ ಮನುಷ್ಯನಿಗೆ ನಿಜ ರೂಪ ಎಂದಿಗೂ ಕೂಡ ಮರೆಮಾಚುವುದಿಲ್ಲ ನಾವು ಎಸ್ಟೇ ಕೂದಲಿಗೆ ಬಣ್ಣ ಹಾಕಿದರು ಕೂಡ ಅದು ಕ್ಷಣಿಕ ಮಾತ್ರ ಏಕೆಂದರೆ ನೈಸರ್ಗಿಕವಾಗಿ ನಮ್ಮ ಹುಟ್ಟಿನಿಂದ ಬಂದತಹ ಯಾವುದೇ ಬಣ್ಣವನ್ನು ಕೂಡ ನಾವು ಬದಲಾಯಿಸಲು ಆಗುವುದಿಲ್ಲ ಒಂದುವೇಳೆ ಹಾಗೇನಾದರೂ ಬದಲಾಯಿಸಿದರು ಕೂಡ ಅದು ಸ್ವಲ್ಪ ದಿನಗಳವರೆಗೆ ಮಾತ್ರ
ಆ ಸ್ವಲ್ಪ ದಿನಗಳ ಒಂದು ಸೌಂದರ್ಯವನ್ನು ಪಡೆಯುವುದಕ್ಕಾಗಿ ನಾವು ನಮ್ಮ ಆರೋಗ್ಯದ ಮೇಲೆ ಘಾಡ ಪರಿಣಾಮ ಬೀರುವ ಕೆಲಸವನ್ನು ನಮಗೆ ತಿಳಿಯದ ಹಾಗೆ ಮಾಡುತ್ತೇವೆ ಹಾಗಾಗಿ ಸ್ನೇಹಿತರೆ ಸೌಂದರ್ಯ ಎನ್ನುವುದು ಕಣ್ಣಿಗೆ ಕಾಣುವುದಲ್ಲ ಅದು ಮನಸ್ಸಿನಿಂದ ಬರುವುದು ಎಂದು ಹೇಳುವುದಕ್ಕೆ ಇಸ್ಟ ಪಡ್ತೀನಿ ನೀವು ಸಹ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ಇಂತಹ ಕೂದಲಿಗೆ ಬಣ್ಣ ಹಚ್ಚುವುದನ್ನು ಹೆಚ್ಚಾಗಿ ಮಾಡಲಿಕ್ಕೆ ಹೋಗಬೇಡಿ ಅದು ನಿಮಗೆ ಅಡ್ಡ ಪರಿಣಾಮವಾಗಬಹುದು ಇದರಿಂದ ಅನೇಕ ರೀತಿಯ ಕಾಯಿಲೆಗಳು ನಮ್ಮ ಬೆನ್ನುಬಿಳುತ್ತವೆ ಹಾಗಾಗಿ ನೀವು ಈ ವಿಷಯದಲ್ಲಿ ತುಂಬಾ ಹುಷಾರಾಗಿ ಇರುವುದು ಒಳ್ಳೆಯದು.

Comments are closed.