ಆರೋಗ್ಯ

ಬೇರ್ಪಟ್ಟ ಕೀಲುಗಳ ಮರು ಜೋಡನೆಗೆ ಹುಣಸೆಹಣ್ಣು ಮತ್ತು ಬೆಲ್ಲ ಸಹಕಾರಿ

Pinterest LinkedIn Tumblr

ಹುಣಸೆಹಣ್ಣು ಮತ್ತು ಬೆಲ್ಲದಿಂದ ಬೇರ್ಪಟ್ಟ ಕೀಲುಗಳ ಮರು ಜೋಡನೆ. ಇವತ್ತಿನ ಆಧುನಿಕ ಯುಗದಲ್ಲಿ ನಾವು ಏನೇ ಒಂದು ಸಣ್ಣ ನೋವು ಆದರೂ ಕೂಡ ಆಸ್ಪತ್ರೆಯ ಮೊರೆ ಹೋಗುತ್ತೇವೆ ವೈದ್ಯರ ಬಳಿ ಸಲಹೆ ಪಡೆದು ಮಾತ್ರೆಗಳನ್ನು ತಿನ್ನುತ್ತೇವೆ ಆದರೆ ಇದರಿಂದ ನಮ್ಮ ದೇಹಕ್ಕೆ ಹಲವಾರು ಬಗೆಯ ತೊಂದರೆಗಳು ಆಗಬಹುದು ಆದರೆ ಹಿಂದಿನ ಕಾಲದಲ್ಲಿ ಅಂದರೆ ನಮ್ಮ ಪೂರ್ವಜರು ಯಾವುದೇ ಸಮಸ್ಯೆ ತೊಂದರೆ ಇದ್ದರು ಕೂಡ ತಮ್ಮ ಸುತ್ತ ಮುತ್ತ ಇರುವಂತಹ ಸಸ್ಯಗಳನ್ನು ಔಷಧಿಯಾಗಿ ಬಳಸುತ್ತಿದ್ದರು ಹಾಗೇನೇ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಔಷಧಿ ತಯಾರಿಸುತ್ತಿದ್ದರು ಹಾಗೇನೇ ನಾವು ನಡೆದಾಡುವಾಗ ಅಥವಾ ಏನಾದರೂ ಆಗಿ ನಮ್ಮ ಕೈ ಕಾಲು ಗಳು ಉಳುಕಿದಾಗ ನಾವು ಆಸ್ಪತ್ರೆಗೆ ಹೋಗುವ ಬದಲು ಈಗ ನಾವು ಈ ಲೇಖನದಲ್ಲಿ ತಿಳಿಸುವ ಮನೆಮದ್ದನ್ನು ಬಳಸಬಹುದು ಹೀಗೆ ಮಾಡುವುದರಿಂದ ಬೇಗನೆ ಉಳುಕಿರುವ ಜಾಗದಲ್ಲಿ ನೋವು ಶಮನವಾಗುತ್ತದೆ

ಜೊತೆಗೆ ಯಾವುದೇ ರೀತಿಯ ಮಾತ್ರೆ ಚುಚ್ಚುಮದ್ದಿನ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಹೀಗೆ ಉಳುಕಿಗೆ ಯಾವ ಮನೆಮದ್ದು ಇದೆ ಎಂದು ನೋಡೋಣ ಬನ್ನಿ. ಉಳುಕು ಸರಿಪಡಿಸುವ ಹುಣಸೆಹಣ್ಣು ಹೌದು ಬೆಲ್ಲವನ್ನು ಹಳೆಯ ಹುಣಸೆ ಹಣ್ಣಿನೊಂದಿಗೆ ಬಿಸಿ ಮಾಡಿ ಉಳುಕಿದ ಜಾಗಕ್ಕೆ ಕಾವು ಕೊಟ್ಟರೆ ಉಳುಕಿದ ನೋವು ಕಡಿಮೆ ಆಗುವುದರ ಜೊತೆಗೆ ಬೇರ್ಪಟ್ಟ ಕೀಲುಗಳು ಸರಿಯಾದ ಜಾಗದಲ್ಲಿ ಸೇರುವುದು. ಬೆಲ್ಲವನ್ನು ತುಪ್ಪದಲ್ಲಿ ಹಾಕಿ ಬಿಸಿ ಮಾಡಿ ಉಳುಕಿರುವ ಭಾಗದಲ್ಲಿ ಲೇಪಿಸುವುದರಿಂದ ನೋವು ಕಡಿಮೆ ಆಗುತ್ತದೆ ಉಳುಕಿರುವ ಹಾಗೂ ಊದಿರುವ ಜಾಗಕ್ಕೆ ಬಿಸಿ ನೀರಿನಿಂದ ಕಾವು ಕೊಡುವುದರಿಂದ ಲು ಸಹ ನೋವು ಕಡಿಮೆ ಆಗುತ್ತದೆ ಜೊತೆಗೆ ಹೀಗೆ ಮಾಡುವುದರಿಂದ ಊತವು ಕಡಿಮೆ ಆಗುವುದು ಇನ್ನು ಬಿಸಿ ಮಾಡಿದ ಹುಣಸೆ ಗೊಜ್ಜನ್ನು ಉಳಿಕಿರುವ ಹಾಗೂ ಊತ ಇರುವ ಭಾಗದ ಮೇಲೆ ಲೇಪಿಸುವುದರಿಂದ ಕಡಿಮೆ ಆಗುತ್ತದೆ ಉಳುಕಿದ ತಕ್ಷಣ ಹರಳೆಣ್ಣೆ ಹಾಕಿ ನಿಧಾನವಾಗಿ ತಿಕ್ಕಬೇಕು ಬೆಳಿಗ್ಗೆ ಎದ್ದ ತಕ್ಷಣ ಎಣ್ಣೆ ಹಾಕಿ ನಿಧಾನವಾಗಿ ತಿಕ್ಕುವುದರಿಂದ ನೋವು ಕಡಿಮೆ ಆಗುತ್ತದೆ.

ಈ ಹರಳೆಣ್ಣೆ ತುಂಬಾ ಹಿಂದಿನಿಂದಲೂ ವಿಶೇಷತೆ ಪಡೆದ ಒಂದು ತೈಲವಾಗಿದೆ ಇದು ತುಂಬಾ ತಂಪು ನೀಡುವಂತಹ ತೈಲವು ಸಹ ಹೌದು. ಆದ್ದರಿಂದ ಈ ಹರಳೆಣ್ಣೆಯನ್ನು ಬರಿ ನೋವಿಗೆ ಹಚ್ಚುವುದಷ್ಟೇ ಅಲ್ಲದೆ ತಲೆ ಕೂದಲಿಗೂ ಸಹ ಬಳಸುತ್ತಿದ್ದರು ಹೀಗೆ ಕೂದಲಿಗೆ ಮತ್ತು ನಮ್ಮ ದೇಹಕ್ಕೆ ತಂಪು ನಿಡುವುದರ ಜೊತೆಗೆ ಕೂದಲಿಗೆ ಹೊಳಪನ್ನು ಸಹ ಈ ಹರಳೆಣ್ಣೆ ನೀಡುತ್ತದೆ ಜೊತೆಗೆ ಹೊಟ್ಟೆ ಗಟ್ಟಿಯಾಗಿ ಮಲವಿಸರ್ಜನೆಗೆ ತೊಂದರೆ ಆದರೂ ಸಹ ಈ ಹರಳೆಣ್ಣೆಯನ್ನು ಒಂದು ಬೊಟ್ಟು ಬಾಯಲ್ಲಿ ಚೀಪುವುದರಿಂದ ಹೊಟ್ಟೆ ಸರಳವಾಗಿ ಮಲವಿಸರ್ಜನೆ ಆಗುತ್ತದೆ. ಹಿಗೆ ಹರಳೆಣ್ಣೆ ತುಂಬಾ ಉಪಯುಕ್ತವಾಗಿದೆ. ನೀವು ಸಹ ಇಲ್ಲಿ ತಿಳಿಸಿರುವ ಮನೆ ಮದ್ದುಗಳನ್ನು ಬಳಸಿ ನೋಡಿ ಪರಿಣಾಮ ಕಂಡುಕೊಳ್ಳಿ.

Comments are closed.