ಆರೋಗ್ಯ

ಬೆಲ್ಲ ಕಡಲೆ ಎರಡನ್ನು ಚಳಿಗಾಲದಲ್ಲಿ ತಿನ್ನುತ್ತಾ ಹೋದರೆ ಅನೇಕ ಪ್ರಯೋಜನಗಳು

Pinterest LinkedIn Tumblr

ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲ ಲಾಭಗಳಿವೆ ನೋಡಿ. ಚಳಿಗಾಲ ಎಂದರೆ ಅದೊಂದು ಆಲಸ್ಯದ ದಿನ ಅಂತಾನೆ ಹೇಳಬಹುದು ಏಕೆಂದರೆ ಆ ವರಟು ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ವಿಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಚಳಿಗಾಲ ಬಂತು ಎಂದರೆ ಕೆಲವರಿಗೆ ಆನಂದ ಇನ್ನು ಕೆಲವರಿಗೆ ಅಯ್ಯೋ ಈ ಚಳಿಗಾಲ ಯಾವಾಗ ಮುಗಿಯಿತ್ತೋ ಅಂತ ಎಂದು ಯಾವಾಗಲೂ ಯೋಚಿಸುತ್ತಿರುತ್ತಾರೆ.

ಚಳಿಗಾಲದಲ್ಲಿ ವೈರಸ್ ಮತ್ತು ಶಿತದ ಸಮಸ್ಯೆ ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ತುಂಬಾನೇ ಕಾಡುತ್ತದೆ. ಈ ಋತುವಿನಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸುವುದಕ್ಕೆ ನಮ್ಮ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಾಗಿಸುವ ಕೆಲವು ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು ನಮ್ಮ ಹಿರಿಯರು ನೀಡುವ ಕೆಲವೊಂದು ಸಲಹೆಗಳನ್ನು ಪಾಲಿಸುವುದರಿಂದ ನಾವು ಎದ್ದು ಬಿದ್ದು ಎಲ್ಲಾದರೂ ಆಸ್ಪತ್ರೆಗೆ ಹೋಗೋಣ ಎಂದು ಅನಿಸುತ್ತದೆ ಅಂತಹದ್ದೇ ಒಂದು ಸಲಹೆ ಬೆಲ್ಲ ತಿನ್ನುವುದು. ಅದರಲ್ಲೂ ಬೆಲ್ಲ ಕಡಲೆ ಎರಡನ್ನು ಚಳಿಗಾಲದಲ್ಲಿ ತಿನ್ನುತ್ತಾ ಹೋದರೆ ಅನೇಕ ಪ್ರಯೋಜನಗಳು ನಮಗೆ ಸಿಗುತ್ತದೆ

ಹೌದು ಆತ್ಮೀಯರೇ ಬೆಲ್ಲವನ್ನು ಕಡಲೆಯೊಂದಿಗೆ ಬೆರೆಸಿ ತಿನ್ನುವುದರಿಂದ ಅದು ಔಷಧಿಯಾಗಿ ನಮ್ಮ ದೇಹದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ ಈ ಎರಡು ಉತ್ತಮ ಆಹಾರಗಳನ್ನು ಒಂದುಕುಡಿಸಿ ತಿನ್ನುವ ಮೂಲಕ ಅನೇಕ ರೋಗಗಳಿಂದ ನಾವು ಮುಕ್ತಿಯನ್ನು ಪಡೆಯಬಹುದು. ಈ ಒಂದು ಲೇಖನದಲ್ಲಿ ಬೆಲ್ಲ ಮತ್ತು ಕಡಲೆ ತಿನ್ನುವುದರಿಂದ ಆಗುವ ದೇಹದ ಆರೋಗ್ಯಕರ ಅಂಶದ ಬಗ್ಗೆ ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಹೇರಳವಾದ ಕಬ್ಬಿಣಾಂಶ ಸಿಗುತ್ತದೆ. ಬೆಲ್ಲ ಮತ್ತು ಕಡಲೆಯಲ್ಲಿ ಕಬ್ಬಿಣಾಂಶ ಹೇರಳವಾಗಿ ಸಿಗುತ್ತದೆ ಇದರಿಂದಾಗಿ ರಕ್ತ ಹೀನತೆ ತಪ್ಪಿಸಬಹುದು ಅದೇ ಸಮಯದಲ್ಲಿ ಹೂರಿದ ಕಡಲೆಯಲ್ಲಿ ಕಬ್ಬಿಣಾಂಶದ ಜೊತೆಗೆ ಪ್ರೊಟೀನ್ ಸಹ ಸರಿಯಾದ ಪ್ರಮಾಣದಲ್ಲಿ ಕಂಡುಬರುತ್ತವೆ ಈ ರೀತಿಯಾಗಿ ಕಡಲೆ ಬೆಲ್ಲ ಸೇವಿಸುವುದರಿಂದ ಕಬ್ಬಿಣಾಂಶ ಮತ್ತು ರಕ್ತಹೀನತೆಗೆ ಸಂಬಂದಿಸಿದ ಕಾಯಿಲೆಯಿಂದ ನಾವು ದೂರವಿರಬಹುದು.

ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದಂತೆ ಅಸ್ವಸ್ಥತೆಯನ್ನು ತೆಗೆದುಹಾಕುವುದಕ್ಕೆ ಬೆಲ್ಲ ಉತ್ತಮ ಆಹಾರ ಅಂತ ಪರಿಗಣಿಸಲಾಗಿದೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಬೆಲ್ಲ ಮತ್ತು ಕಡಲೆಯನ್ನು ಸೇವಿಸಿ ಅಂತ ನಮ್ಮ ಹಿರಿಯರು ಹೇಳುತ್ತಾರೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದರಿಂದ ರಕ್ತಹೀನತೆ ಕಂಡುಬರುತ್ತದೆ. ಈ ರೋಗವು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸುತ್ತದೆ. ಈ ಸಮಸ್ಯೆಗೆ ವಿಶೇಷವಾಗಿ ಕಬ್ಬಿಣದ ಕೊರತೆಯಿಂದಾಗಿ ನಮ್ಮ ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯವು ಸಾಮಾನ್ಯವಾಗಿ ಕಂಡುಬರುತ್ತದೆ. ಅಂತಹ ಸಮಯದಲ್ಲಿ ಮಹಿಳೆಯರಿಗೆ ಆಹಾರದಲ್ಲಿ ಕಬ್ಬಿಣಾಂಶ ಭರಿತ ಆಹಾರಗಳನ್ನು ತೆಗೆದು ಕೊಳ್ಳಬೇಕು ಅಂತ ಸಲಹೆಗಳನ್ನು ವೈದ್ಯರು ನೀಡುತ್ತಾರೆ. ಕಬ್ಬಿಣಾಂಶ ಭರಿತ ಆಹಾರ ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.

ಕಡಲೆ ಮತ್ತು ಬೆಲ್ಲದ ಸೇವನೆ ನಮ್ಮನ್ನು ರಕ್ತ ಹೀನತೆಯಿಂದ ರಕ್ಷಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ದೇಹದಲ್ಲಿ ಉಂಟಾಗುವ ಆಯಾಸ ಮತ್ತು ದೌರ್ಭಲ್ಯವನ್ನು ಕಡಿಮೆ ಮಾಡುತ್ತದೆ ನಿಯಮಿತವಾಗಿ ಮತ್ತು ನಿಯಂತ್ರಿತ ಪ್ರಮಾಣದಲ್ಲಿ ಇವುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಗಳು ಸಿಗುತ್ತವೆ. ಆದ್ದರಿಂದ ಸ್ನೇಹಿತರೆ ಕಡಲೆ ಮತ್ತು ಬೆಲ್ಲವನ್ನು ಒಟ್ಟಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ಮಾಹಿತಿ ಗೊತ್ತಾಯಿತಲ್ಲ

Comments are closed.