ಆರೋಗ್ಯ

ಚಳಿಗಾಲದ ನೆಗಡಿ,ಶೀತ,ಕೆಮ್ಮು,ಕಫ,ಗಂಟಲು ಕಿರಿಕಿರಿ ನಿವಾರಣೆಗೆ ಸಿಂಪಲ್ ಟಿಪ್ಸ್

Pinterest LinkedIn Tumblr

ಚಳಿಗಾಲದ ನೆಗಡಿ ಶೀತ ಕೆಮ್ಮು ಹೋಗಲಾಡಿಸುತ್ತದೆ ಈ ಒಂದು ಮನೆಮದ್ದು. ನಮಸ್ಕಾರ ಸ್ನೇಹಿತರೆ ವಾತಾವರಣ ಬದಲಾದಂತೆ ದೊಡ್ಡವರಿಂದ ಹಿಡಿದು ಚಿಕ್ಕವರ ವರೆಗೂ ಅವರಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಅಂದರೆ ನೆಗಡಿ ಶೀತ ಕೆಮ್ಮು ಕಫ ಹಾಗೇನೇ ಗಂಟಲು ಕಿರಿಕಿರಿ ಶುರುವಾಗುತ್ತದೆ. ಆದ್ದರಿಂದ ಈ ನೆಗಡಿ ಶೀತ ಗಂಟಲು ಕಿರಿಕಿರಿ ಕಫ ಇದೆಲ್ಲವನ್ನು ನಿವಾರಿಸುವುದಕ್ಕೆ ಈಗ ನಾವು ಈ ಒಂದು ಲೇಖನದಲ್ಲಿ ಒಂದು ಕಷಾಯವನ್ನು ತಿಳಿಸುತ್ತೇನೆ ನೋಡೋಣ ಬನ್ನಿ. ಈ ಕಷಾಯವು ತುಂಬಾ ಒಳ್ಳೆಯದು ನೀವು ಇದನ್ನು ಒಂದು ಸಾರಿ ಕುಡಿದರೆ ಸಾಕು ನಿಮಗೆ ಇರುವಂತಹ ಎಲ್ಲ ನೆಗಡಿ ಶೀತ ಇವೆಲ್ಲವೂ ಗುಣವಾಗುತ್ತವೆ.

ಬನ್ನಿ ಹಾಗಾದರೆ ಈ ಒಂದು ಮನೆಮದ್ದನ್ನು ಯಾವ ರೀತಿ ತಯಾರಿಸುವುದು ಎನ್ನುವುದನ್ನು ಈಗ ತಿಳಿಯೋಣ ಒಂದು ಇಂಚು ಹಸಿ ಅರಿಷಿಣ ಸ್ವಲ್ಪ ಹಸಿ ಶುಂಠಿ ಇವೆರಡನ್ನು ಚೆನ್ನಾಗಿ ತೊಳೆದುಕೊಂಡು ಒಂದು ಪಾತ್ರೆಯಲ್ಲಿ 1 ಲೋಟ ನೀರನ್ನು ಹಾಕಿ ಅದರಲ್ಲಿ ಅರಿಷಿಣವನ್ನು ಹಾಕಿ ಹಸಿ ಅರಿಷಿಣ ಇಲ್ಲವೆಂದರೆ ಅರಿಷಿಣ ಪುಡಿಯನ್ನು ಸಹ ಬಳಸಬಹುದು ನಂತರ ಇದಕ್ಕೆ ಶುಂಠಿ ಹಾಕಬೇಕು ಜೊತೆಗೆ ಇದರಲ್ಲಿ 3 ರಿಂದ 4 ಲವಂಗವನ್ನು ಹಾಕಬೇಕು ಇದರ ಜೊತೆಗೆ 10 ರಿಂದ 12 ಪುದಿನ ಎಲೆಗಳನ್ನು ಹಾಕಬೇಕು ಜೊತೆಗೆ ಕಾಲು ಚಮಚ ಓಂಕಾಳನ್ನು ಹಾಕಬೇಕು ಇವೆಲ್ಲವನ್ನು ಚೆನ್ನಾಗಿ ಕುದಿಸಬೇಕು ಅಂದರೆ 1 ಲೋಟ ನೀರು ಅರ್ಧ ಲೋಟ ಆಗುವವರೆಗೂ ಕುದಿಸಬೇಕು. ನಂತರ ಇದನ್ನು ಸೋಸಬೇಕು ನಂತರ ಈ ಕಷಾಯ ತಣ್ಣಗಾದ ಮೇಲೆ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಬೇಕು.

ಹೀಗೆ ತಯಾರಿಸಿದ ಕಷಾಯವನ್ನು ನೀವು ಪ್ರತಿದಿನ ಎರಡು ಬಾರಿ ಸೇವಿಸಬೇಕು ಹಾಗೇನೇ ಮಕ್ಕಳಿಗೆ ದಿನಕ್ಕೆ ಒಂದು ಬಾರಿ ಕುಡಿಸಬೇಕು. ಇದರಲ್ಲಿರುವ ಅರಿಷಿನದಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣವಿದೆ ಅದೇ ರೀತಿ ಇಲ್ಲಿ ಬಳಸಲಾದ ಹಸಿ ಶುಂಠಿಯಲ್ಲೂ ಸಹ ಆಂಟಿಬ್ಯಾಕ್ಟೀರಿಯಲ್ ಗುಣವಿದೆ ಇದು ನಿಮ್ಮ ರಕ್ತ ಸಂಚಾರವನ್ನು ಗುಣಪಡಿಸುತ್ತದೆ ಹಾಗೂ ಇನಪೇಕ್ಷನ್ ಮತ್ತು ಅಲರ್ಜಿಯಿಂದ ನಿಮ್ಮನ್ನು ಕಾಪಾಡುತ್ತದೆ ಹಾಗೇನೇ ಲವಂಗ ಈ ಲವಂಗ ನೈಸರ್ಗಿಕವಾಗಿ ಆಂಟಿಬ್ಯಾಕ್ಟೀರಿಯಲ್ ಆಗಿದೆ ಇದು ನೆಗಡಿ ಮತ್ತು ಶಿತವನ್ನು ಗುಣಪಡಿಸುತ್ತದೆ ನಂತರ ಪುದಿನ ಎಲೆಯನ್ನು ಬಳಸಿದ್ದೇವೆ ಈ ಎಲೆಗಳು ಕೂಡ ಆಂಟಿಬ್ಯಾಕ್ಟೀರಿಯಲ್ ಆಗಿದೆ ಇದು ಕೂಡ ನಿಮ್ಮ ಗಂಟಲಿನ ಕಿರಿಕಿರಿಯನ್ನು ಗುಣಪಡಿಸುತ್ತದೆ ಹಾಗೂ ನಿಮ್ಮ ಅಲರ್ಜಿಯನ್ನು ದೂರ ಮಾಡುತ್ತದೆ.

ಹಾಗೇನೇ ಓಂಕಾಳು ಈ ಓಂಕಾಳು ಕೂಡ ಕಫವನ್ನು ನಿವಾರಿಸಲು ತುಂಬಾ ಉಪಯೋಗಕಾರಿಯಾಗಿದೆ.ಹೀಗೆ ಇವುಗಳನ್ನು ಬಳಸಿ ಮಾಡಿದಂತಹ ಕಷಾಯವನ್ನು ಕುಡಿಯುವುದರಿಂದ ನೆಗಡಿ ಶೀತ ಕೆಮ್ಮು ಕಫ ಹಾಗೂ ಗಂಟಲು ಕಿರಿಕಿರಿ ಜೊತೆಗೆ ಅಲರ್ಜಿ ಯಿಂದ ಕೂಡ ಮುಕ್ತಿಯನ್ನು ಪಡೆಯಬಹುದು ಅದೆ ರೀತಿ ನಿಮಗೆ ಹೆಚ್ಚಾಗಿ ಸೀನು ಬರುತ್ತಿದ್ದರೆ ಅದಕ್ಕೂ ಕೂಡ ಇದು ರಾಮಬಾಣ. ಇದನ್ನು ಉಪಯೋಗಿಸಿ ಆರಾಮವಾಗಿ ಇರಿ.

Comments are closed.