ಆರೋಗ್ಯ

ಡಯಾಬಿಟಿಸ್ ರೋಗಿಗಳಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸಲು ಜಿ಼ಂಕ್ ಕೊರತೆ ಕಾರಣವೇ?

Pinterest LinkedIn Tumblr

ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಜಿ಼ಂಕ್ ನಿಮ್ಮ ದೇಹಕ್ಕೆ ಸಣ್ಣ ಪ್ರಮಾಣದಲ್ಲಿ ಅಗತ್ಯವಾದ ರಾಸಾಯನಿಕ ಅಂಶವಾಗಿದೆ. ನಿಮ್ಮ ದೇಹದಲ್ಲಿ ಇದರ ಪ್ರಮಾಣ ಹೆಚ್ಚು ಅಥವಾ ಕಡಿಮೆ ಆದರೆ, ಅದು ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವ ಅಸಮರ್ಥತೆಯಂತಹ ಹಲವಾರು ಬಗೆಯ ಅಸಮತೋಲನಕ್ಕೆ ಕಾರಣವಾಗಬಹುದು.

ಜಿ಼ಂಕ್ ಮತ್ತು ಅಧಿಕ ರಕ್ತದೊತ್ತಡ
ಮೂತ್ರಪಿಂಡದ ಮಟ್ಟದಲ್ಲಿ ಹೇಳುವುದಾದರೆ, ಮೂತ್ರಪಿಂಡಗಳು ಮೂತ್ರದ ಮೂಲಕ ಸೋಡಿಯಂ ಅನ್ನು ಹೊರಹಾಕುವ ಕಾರ್ಯವಿಧಾನವು ನಿಮ್ಮ ದೇಹವು ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡಗಳಿಂದ ಸೋಡಿಯಂ ಹೊರಹಾಕುವಿಕೆ ಅಥವಾ ಸೋಡಿಯಂ ಹಿಡಿದಿಟ್ಟುಕೊಳ್ಳುವಿಕೆಯ ಮೇಲೆ ಪ್ರಭಾವ ಬೀರುವಂತಹ ಹಲವಾರು ಅಂಶಗಳಿವೆ. ಮೂತ್ರಪಿಂಡಗಳಲ್ಲಿನ ಸೋಡಿಯಂ ಸಾಗಣೆ ಮಾರ್ಗವನ್ನು ನಿಯಂತ್ರಿಸುವಲ್ಲಿ ಜಿ಼ಂಕ್ ಕೊರತೆಯು ನಿರ್ಣಾಯಕ ಪಾತ್ರ ವಹಿಸುವುದರ ಜೊತೆಗೆ ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎಂದು ಇತ್ತೀಚಿನ ಕೆಲವು ತನಿಖೆಗಳು ತೋರಿಸಿವೆ. ಅನೇಕ ಅಧ್ಯಯನಗಳು ಜಿ಼ಂಕ್ ಕೊರತೆ ಮತ್ತು ಟೈಪ್ 2 ಡಯಾಬಿಟಿಸ್‌ನಂತಹ ಇತರ ದೀರ್ಘಕಾಲೀನ ಸಮಸ್ಯೆಗಳ ನಡುವಿನ ಸಂಬಂಧವನ್ನು ಸಹ ಗಮನಿಸಿವೆ. ಜಿ಼ಂಕ್ ಕೊರತೆ ಮತ್ತು ಡಯಾಬಿಟಿಸ್ ರೋಗಿಗಳಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುವ ಅಪಾಯದ ನಡುವೆ ಗಮನಿಸಬಹುದಾದ ಸಂಬಂಧವೂ ಇರಬಹುದು.

ಜಿ಼ಂಕ್ ಕುರಿತು ಶಿಫಾರಸ್ಸುಗಳು
ದೇಹದಲ್ಲಿ ಜಿ಼ಂಕ್‍ನ ಹೆಚ್ಚುವಿಕೆ ಅಥವಾ ಕೊರತೆಯು ನಿಮ್ಮ ರಕ್ತದೊತ್ತಡದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹಾಗಾಗಿ, ನಿಮ್ಮ ದೇಹದಲ್ಲಿನ ಜಿ಼ಂಕ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ಜಿ಼ಂಕ್-ಸಮೃದ್ಧ ಆಹಾರದ ಸೂಕ್ತ ಪ್ರಮಾಣವನ್ನು ಸೇವಿಸಲು ನಿಮ್ಮ ಆಹಾರವನ್ನು ಮಾರ್ಪಡಿಸುವುದು ಅತ್ಯವಶ್ಯಕ.

ಜಿ಼ಂಕ್ ಪೂರಕಗಳಲ್ಲಿ, ಹಲವು ರೂಪಗಳಿವೆ ಮತ್ತು ಧಾತುರೂಪದ ರೂಪದಲ್ಲಿ ದಿನಕ್ಕೆ ಜಿ಼ಂಕ್ ಅನ್ನು ವಯಸ್ಕರು 15 ರಿಂದ 30 ಮಿಲಿಗ್ರಾಂ ಸೇವಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಇದನ್ನು ದಿನಕ್ಕೆ 40 ಮಿಲಿಗ್ರಾಮಿಗಿಂತ ಹೆಚ್ಚು ಸೇವಿಸಬಾರದು. ಆದಾಗ್ಯೂ, ಅಗತ್ಯವಿರುವ ಜಿ಼ಂಕ್ ಅವರ ವಯಸ್ಸಿಗೆ ಅನುಗುಣವಾಗಿ, ಅವರು ಗರ್ಭಿಣಿಯಾಗಿದ್ದರೆ ಅಥವಾ ಅವರಿಗೆ ಬೇರೆ ಯಾವುದೇ ಕಾಯಿಲೆಗಳಿದ್ದರೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅಧಿಕ ರಕ್ತದೊತ್ತಡ ಇರುವವರು ಜಿ಼ಂಕ್ ಪೂರಕಗಳನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಬೇಕು.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನವಾಗಿ ನಿಮ್ಮ ಆಹಾರದಲ್ಲಿ ಜಿ಼ಂಕ್-ಸಮೃದ್ಧ ಆಹಾರವನ್ನು ಸೇರಿಸಬಹುದು. ಕುಂಬಳಕಾಯಿ ಬೀಜಗಳು, ಮೊಸರು, ಹುರಿದ ಗೋಡಂಬಿ, ಶೆಲ್‍ಫಿಶ್, ಬೇಳೆ ಮತ್ತು ಕಡಲೆಕಾಳು ಮತ್ತು ಡಾರ್ಕ್ ಚಾಕೊಲೇಟ್ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ನೀವು ಸೇರಿಸಿಕೊಳ್ಳಬಹುದಾದ ಕೆಲವು ಆಹಾರಗಳು.

Comments are closed.