ಆರೋಗ್ಯ

ಮಾನಸಿಕ ಮತ್ತು ದೈಹಿಕ ನೋವನ್ನು ನಿಯಂತ್ರಣದಲ್ಲಿಡಲು ಇದು ಸಹಾಯಕ

Pinterest LinkedIn Tumblr

ಮನೆ ಮದ್ದಿನಿಂದ ಬೆನ್ನುನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಬೆನ್ನುನೋವು ಕತ್ತಿನ ಪಕ್ಕೆಲುಬುಗಳ ಕಡೆಗೆ ಅಥವಾ ಮೇಲ್ಭಾಗ ಅಥವಾ ಮಧ್ಯದ ಭಾಗದಲ್ಲಿ ಎಲ್ಲಾದರೂ ಸಂಭವಿಸಬಹುದು ಕ್ರೀಡೆಗಳು ವ್ಯಾಯಾಮ ಗಾಯ ಮತ್ತು ಕೆಲಸದ ಒತ್ತಡ ಹೆಚ್ಚಾದಾಗ ಮತ್ತೆ ಅದನ್ನು ನಾವು ಪ್ರಾರಂಭಿಸಿದಾಗ ಈ ಒಂದು ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸೂಕ್ತ ವಿಶ್ರಾಂತಿಯನ್ನು ಹೊಂದುವುದರ ಮೂಲಕ ಈ ಬೆನ್ನುಮೂಳೆಯ ಮೇಲೆ ಉಂಟಾಗುವ ಒತ್ತಡವನ್ನು ನಾವು ತಡೆಯಬಹದು ಆಗ ನೋವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ ಬೆನ್ನುನೋವು ನಿವಾರಣೆಗೆ ಐಸ್ ಅಥವಾ ಶಾಖದ ಪ್ಯಾಡ್ ಬಳಸುವ ಮೂಲಕ ನೋವನ್ನು ನಿವಾರಿಸಬಹುದು.

ಈ ಎರಡು ಕ್ರಮಗಳನ್ನು ನಾವು ಅನುಸರಿಸುವುದರಿಂದ ಸ್ನಾಯುಗಳು ಸಡಿಲವಾಗುತ್ತವೆ ಜೊತೆಗೆ ನೋವು ನಿವಾರಣೆಯಾಗುತ್ತದೆ. ಉತ್ತಮ ಫಲಿತಾಂಶ ಪಡೆಯುವುದಕ್ಕೆ ಈ ಎರಡು ಕ್ರಮಗಳನ್ನು ಕಡಿಮೆ ಎಂದರೆ 25 ನಿಮಿಷಕ್ಕಿಂತ ಹೆಚ್ಚುಕಾಲ ನಾವು ಬಳಸಬೇಕು. ಬೆನ್ನುನೋವು ಹೆಚ್ಚಾದಾಗ ಹೆಚ್ಚಾಗಿ ಎಫ್ ಸಾಮ್ ಉಪ್ಪಿನ ಸ್ನಾಯು ಮಾಡುವುದರ ಮೂಲಕ ಬೆನ್ನು ನೋವನ್ನು ನಾವು ನಿವಾರಿಸಬಹುದು ಈ ಸ್ನಾಯುವು ಬೆನ್ನುನೋವು ಅಥವಾ ಉರಿಯುತವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಉಪ್ಪಿನಲ್ಲಿರುವ ಮೆಗ್ನೇಶಿಯಂ ಸ್ನಾಯುಗಳಿಗೆ ಉತ್ತಮ ವಿಶ್ರಾಂತಿಯನ್ನು ನೀಡುತ್ತದೆ ಹೀಗಾಗಿ ನೀರನ್ನು ಹೆಚ್ಚು ಬಿಸಿ ಮಾಡದೆ 30 ನಿಮಿಷ ಕಾಲಕ್ಕಿಂತ ಅಧಿಕ ಸಮಯದ ವರೆಗೆ ಮುಳುಗಿಸಬಾರದು ಹೀಗೆ ಮಾಡುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ ಆಗ ಬೆನ್ನುನೋವು ಅಥವಾ ಬೆನ್ನೂ ಉರಿ ನಮಗೆ ಕಡಿಮೆಯಾಗುತ್ತದೆ.

ಅನುಚಿತ ರೀತಿಯ ಭಂಗಿಯನ್ನು ಹೊಂದುವುದರಿಂದ ಬೆನ್ನುಮೂಳೆಯ ಉರಿ ಅಥವಾ ಒತ್ತಡ ಉಂಟಾಗುತ್ತದೆ ಹೀಗಾಗಿ ನಿತ್ತುಕೊಳ್ಳುವಾಗ ಕುಳಿತುಕೊಳ್ಳುವಾಗ ಮತ್ತು ಮಲಗುವಾಗ ಅಥವಾ ಧೀರ್ಘ ಸಮಯದ ಕೆಲಸ ಕೈಗೊಂಡಾಗ ಸೂಕ್ತವಾದ ಭಂಗಿಯನ್ನು ಅನುಸರಿಸುವುದು ತುಂಬಾನೇ ಮುಖ್ಯ. ಇದರಿಂದ ನಮ್ಮ ಬೆನ್ನುನೋವನ್ನು ನಾವು ನಿಯಂತ್ರಣದಲ್ಲಿ ಇಡಬಹುದು. ಸೂಕ್ತ ರೀತಿಯ ವ್ಯಾಯಾಮ ಮಾಡುವುದರ ಮೂಲಕ ನೋವನ್ನು ನಿವಾರಣೆ ಮಾಡಬಹುದು ಇದರಿಂದ ವಿಪರಿತ ಬೆನ್ನುನೋವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು. ಮಾನಸಿಕ ಮತ್ತು ದೈಹಿಕ ನೋವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಅತ್ಯುತ್ತಮ ವಿಧಾನವೆಂದರೆ ಅದು ಯೋಗ ಮತ್ತು ಧ್ಯಾನ ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಈ ಚಿಕಿತ್ಸಕ ವಿಧಾನವನ್ನು ಗಣನೀಯವಾಗಿ ಅನುಸರಿಸುವುದರಿಂದ ನಾವು ಬೆನ್ನುನೋವನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಮೂಳೆ ಮುರಿತ ಸಂದಿನೋವು ಬೆನ್ನುನೋವು ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರವು ಸಹ ಗಂಭೀರವಾದ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಹೆಚ್ಚಾಗಿ ನಾವು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಬೇಕು ಅದಕ್ಕಾಗಿ ಹಸಿರು ಸೊಪ್ಪುಗಳು ಚೀಸ್ ಮೊಸರು ಮೊಟ್ಟೆ ಕಿತ್ತಳೆ ಸೋಯಾಹಾಲು ಮೀನು ಸೇರಿದಂತೆ ಇನ್ನಿತರ ಆರೋಗ್ಯಕರ ಆಹಾರಗಳನ್ನು ನಾವು ಸೇವಿಸಬೇಕು ಶುಂಠಿ ಬೆನ್ನುನೋವಿಗೆ ರಾಮಬಾಣ ಈ ಒಂದು ಶುಂಠಿ ಈ ಶುಂಟಿಯು ಅತ್ಯುತ್ತಮ ಔಷಧಿ ಗುಣಗಳನ್ನು ಹೊಂದಿರುವ ನೈಸರ್ಗಿಕ ಔಷಧಿಯ ಮೂಲವಾಗಿದೆ ಇದನ್ನು ಗಣನೀಯವಾಗಿ ಬಳಕೆ ಮಡುವುದರಿಂದ ಬೆನ್ನುನೋವನ್ನು ನಾವು ನಿವಾರಿಸಿಕೊಳ್ಳಬಹುದು.

ಶುಂಠಿಯ ಚುರನ್ನು ನೀರಿಗೆ ಸೇರಿಸಿ 30 ನಿಮಿಷ ಕುದಿಸಬೇಕು ಇದರ ನಂತರ ಅದನ್ನು ಸೋಸಿ ತಣ್ಣಗಾಗಲು ಬಿಡಬೇಕು ನಂತರ ಅದನ್ನು ಸೇವಿಸುವುದು ಸೂಕ್ತ. ಸಾಮಾನ್ಯ ಕಾರಣಗಳಿಂದ ಕಾಣಿಸಿಕೊಳ್ಳುವ ಬೆನ್ನುನೋವಿಗೆ ಮನೆಯಲ್ಲೇ ಸೂಕ್ತ ಆರೈಕೆ ಮಾಡುವುದರ ಮೂಲಕ ಸಮಸ್ಯೆಗಳನ್ನು ನಾವು ನಿಯಂತ್ರಣದಲ್ಲಿ ಇಡಬಹುದು ಇಷ್ಟೆಲ್ಲ ಆರೈಕೆಗಳನ್ನು ಮಾಡಿದರು ಸಹ ನಮಗೆ ಬೆನ್ನುನೋವು ಕಡಿಮೆ ಆಗುತ್ತಿಲ್ಲ ಎಂದರೆ ವೈದ್ಯರನ್ನು ಭೇಟಿ ಮಾಡುವುದು ತುಂಬಾ ಸೂಕ್ತ.

Comments are closed.