ಆರೋಗ್ಯ

ಸೌತೆಕಾಯಿಯನ್ನು ಸಿಪ್ಪೆ ಸಹಿತ ಸೇವಿಸಿದರೆ ಹೊಟ್ಟೆ ಉಬ್ಬರ ಕಡಿಮೆ ಸಾಧ್ಯ.

Pinterest LinkedIn Tumblr

ಸೌತೆಕಾಯಿಯಲ್ಲಿದೆ ಹಲವಾರು ಉಪಯುಕ್ತ ಔಷಧಿ ಗುಣಗಳು. ಸೌತೆ ಕಾಯಿಯನ್ನು ಹಸಿಯಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ನಾವು ಈಗ ತಿಳಿಯೋಣ ಬನ್ನಿ.

ಒಂದು ಸಾಮಾನ್ಯ ಸೌತೆಕಾಯಿಯಲ್ಲಿ 64.5 ರಷ್ಟು ಪ್ರತ್ಯಾಮ್ಲಿಲಿಯ ಅಂಶವಿರುತ್ತದೆ 35.95 ರಷ್ಟು ಆಮ್ಲಿಯ ಅಂಶವಿರುತ್ತದೆ ಇದನ್ನು ಸೇವಿಸುವುದರಿಂದ ಪ್ರತ್ಯಾಮ್ಲಿಯ ವಸ್ತುಗಳು ಜಠರದಲ್ಲಿನ ಆಮ್ಲಿಯ ಗುಣವನ್ನು ತಟಸ್ಥ ಗೊಳಿಸುತ್ತದೆ. ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ ಆದರೆ ಈ ಸೌತೆಕಾಯಿಯನ್ನು ಬೇಯಿಸದೆ ಸಿಪ್ಪೆ ತೆಗೆಯದೆ ತಿಂದರೆ ಈ ಲಾಭಗಳು ಸಿಗುತ್ತವೆ.

ಒಂದು 100 ಗ್ರಾಮ್ ಸೌತೆಕಾಯಿಯಲ್ಲಿ ನೀರಿನಂಶ 96.3 ರಷ್ಟು ಇರುತ್ತದೆ ಪ್ರೊಟೀನ್ ಅಂಶ 0.4ರಷ್ಟು ಇರುತ್ತದೆ ಕೊಬ್ಬಿನಂಶ 0.1ರಷ್ಟು ಇರುತ್ತದೆ ಖನಿಜಾಂಶ 0.3 ರಷ್ಟು ಇರುತ್ತದೆ ನಾರಿನಂಶ 0.4 ರಷ್ಟು ಇರುತ್ತದೆ ಮತ್ತು ಪಿಷ್ಟದ ಅಂಶ 2.5 ರಷ್ಟು ಇರುತ್ತದೆ ಇವುಗಳ ಜೊತೆಗೆ 10 ಮಿಲಿಗ್ರಾಮ್ ನಷ್ಟು ಕ್ಯಾಲ್ಸಿಯಂ ಇರುತ್ತದೆ 25 ಮಿಲಿಗ್ರಾಮ್ ರಂಜಕ 1.5 ಮಿಲಿಗ್ರಾಮ್ ಕಬ್ಬಿನ 7 ಮಿಲಿಗ್ರಾಮ್ ವಿಟಮಿನ್ ಸಿ ಮತ್ತು ಅಲ್ಪಪ್ರಮಾನದಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಸಹ ಇರುತ್ತದೆ 100 ಗ್ರಾಮ್ ಸೌತೆಕಾಯಿ 13 ಕೆಲೊರಿಯಷ್ಟು ಶಕ್ತಿಯನ್ನು ನೀಡುತ್ತದೆ ಇದರಿಂದ ಸ್ತುಲಕಾಯದ ಸಮಸ್ಯೆ ಇರುವವರು ಸಹ ಇದನ್ನು ಸೇವಿಸಬಹುದು.

ಈ ಸೌತೆಕಾಯಿಯನ್ನು ಹಸಿಯಾಗಿ ತಿನ್ನುವಾಗ ಉಪ್ಪನ್ನು ಹಾಕಿ ತಿನ್ನಬಾರದು ಹೀಗೆ ತಿಂದರೆ ಅದರ ಆಮ್ಲಿಯತೆಯ ಗುಣ ಕಡಿಮೆಯಾಗುತ್ತದೆ ಜೊತೆಗೆ ಸೌತೆಕಾಯಿ ಮೇಲಿರುವ ಸಿಪ್ಪೆಯನ್ನು ತೆಗೆಯಬಾರದು ಇದರಲ್ಲಿ ನಾರಿನಂಶ ಇರುವುದರಿಂದ ಮಲಬದ್ದತೆಯನ್ನು ಇದು ಹೋಗಲಾಡಿಸುತ್ತದೆ ಸೌತೆಕಾಯಿಯಲ್ಲಿರುವ ಒಳ ತಿರುಳನ್ನು ಬಿಸಾಡಬಾರದು ಅದನ್ನು ಸೇವಿಸಬೇಕು.

ಆಧುನಿಕ ರೋಗಗಳಲ್ಲಿ ಜಠರದಲ್ಲಿ ಆಗುವಂತಹ ಆಮ್ಲಿಯತೆ ಸಹ ಒಂದು ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತದೆ ಇದರ ನಿಯಂತ್ರಣಕ್ಕಾಗಿ ನಾವು ಔಷಧಿ ಅಂಗಡಿಗಳಲ್ಲಿ ಸಿಗುವಂತಹ ಆಂಟಿ ಆಸಿಡ್ ಮಾತ್ರೆಗಳನ್ನು ಅಥವಾ ದ್ರವಣ ರೂಪದ ಔಷಧಿಗಳನ್ನು ಸೇವಿಸುತ್ತೇವೆ ಆದರೆ ಜಠರದಲ್ಲಿ ಅತಿ ಆಮ್ಲತೆಯನ್ನು ಸಾಧಾರಣ ತರಕಾರಿಯಾದ ಸೌತೆಕಾಯಿ ನಿಯಂತ್ರಣಕ್ಕೆ ತರುತ್ತದೆ ಇದರ ಬೀಜಗಳಲ್ಲಿ ಎರೆಪ್ಸಿನ್ ಎಂಬ ಜೀವಕಣ ಇರುತ್ತದೆ ಪಚನ ಕ್ರಿಯೆಯಲ್ಲಿ ಅಧಿಕವಾಗಿ ನೆರವನ್ನು ನೀಡುತ್ತದೆ. ಸೌತೆಕಾಯಿ ದೇಹಕ್ಕೆ ತಂಪು ನೀಡುತ್ತದೆ. ಇದರ ಸೇವನೆಯಿಂದ ಮೂತ್ರ ತೊಂದರೆ ಕಡಿಮೆಯಾಗುತ್ತದೆ. ಬಾಯಾರಿಕೆ ಬೇಗನೆ ಕಡಿಮೆಯಾಗುತ್ತದೆ.

ದೇಹದ ರ ಕ್ತದಲ್ಲಿ ಪ್ರತ್ಯಾಮ್ಲಿಯ ದ್ರವಣದ ಮಟ್ಟವನ್ನು ಸಿದ್ಧಗೊಳಿಸುವುದಕ್ಕೆ ಸೌತೆಕಾಯಿ ಸಹಾಯ ಮಾಡುತ್ತದೆ ಇದರಿಂದ ರಸ ತಯಾರಿಸಿ ಸೇವಿಸಿದರೆ ಹೊಟ್ಟೆಯುರಿ ನಿವಾರಣೆ ಆಗುತ್ತದೆ ಕೀಲುನೋವನ್ನು ಸಹ ಇದು ಸುಲಭವಾಗಿ ನಿವಾರಿಸುತ್ತದೆ ಸೌತೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ ಕಣ್ಣಿನ ಉರಿ ಇದ್ದಾಗ ಇದರ ಬಿಲ್ಲೆಗಳನ್ನು ಕಣ್ಣಿನ ರೆಪ್ಪೆಯ ಮೇಲೆ ಇಟ್ಟು ಮಲಗಿದರೆ ಉರಿ ಕಡಿಮೆಯಾಗುತ್ತದೆ.

ಚರ್ಮವನ್ನು ಶುದ್ಧೀಕರಿಸಲು ಮುಖದ ಮೇಲೆ ಮೊಡವೆಗಳನ್ನು ಹೋಗಲಾಡಿಸಲು ಮತ್ತು ಕಪ್ಪು ಕಲೆಗಳನ್ನು ನಿವಾರಿಸುವುದಕ್ಕೆ ಈ ಸೌತೆಕಾಯಿ ರಸವನ್ನು ದಿನಕ್ಕೆ 2 ರಿಂದ 3 ಬಾರಿ ಲೇಪನ ಮಾಡಿಕೊಂಡು ಸ್ವಲ್ಪ ಸಮಯದ ಬಳಿಕ ಮುಖವನ್ನು ತೊಳೆಯುವುದರಿಂದ ಇಂತಹ ತೊಂದರೆಗಳು ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ.

ಅಂಗೈ ಉರಿಯುತವನ್ನು ನಿವಾರಿಸಲು ಇದರ ರಸವನ್ನು ಬಳಸಬಹುದು ಒರಟು ಚರ್ಮವನ್ನು ಇದು ಸೌಂದರ್ಯವಾಗಿ ಕಾಣುವಂತೆ ಮಾಡುತ್ತದೆ ಇದರಲ್ಲಿ ಸಿಲಿಕಾನ್ ಮತ್ತು ಗಂಧಕ ಅಂಶಗಳು ಇರುತ್ತವೆ ಈ ಅಂಶಗಳು ನಮ್ಮ ಕೂದಲಿಗೆ ಸಹಾಯ ಮಾಡುತ್ತದೆ.

Comments are closed.