ಆರೋಗ್ಯ

ದೇಹದಲ್ಲಿ ಹುಳ ಕಚ್ಚಿ ಗುಳ್ಳೆಗಳಾದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಹಚ್ಚಿದರೆ ನೋವು ನಿವಾರಣೆ.

Pinterest LinkedIn Tumblr

ಈ ತೊಂಡೆಕಾಯಿಯಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ. ಇದರಲ್ಲಿ ವಿಟಮಿನ್ ಎ ಬಿ1 ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುವ ಕಾರಣ ಕೊಬ್ಬನ್ನು ನಿಯಂತ್ರಣ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿರುವವರಿಗೆ ತೊಂಡೆಕಾಯಿ ಒಂದು ರಾಮಬಾಣವಿದ್ದಂತೆ ವಾರಕ್ಕೆ ಒಂದುಬಾರಿಯಾದರು ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಅಂತಹ ತೊಂಡೆಕಾಯಿ ಬಗ್ಗೆ ನಿಮಗೆ ತಿಳಿಯದೆ ಇರುವ ಆರೋಗ್ಯಕರ ಅಂಶಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಯೋಣ ಬನ್ನಿ. ಇದು ಉತ್ತಮ ಆರೋಗ್ಯಕ್ಕಾಗಿ ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ತೊಂಡೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ. ತೊಂಡೆಕಾಯಿಯಲ್ಲಿರುವ ಬೀಜಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಮತ್ತು ಮಲವಿಸರ್ಜನೆಗೆ ಸಂಬಂದಿಸಿದ ಸಮಸ್ಯೆಗಳನ್ನು ಕೂಡ ಗುಣಪಡಿಸುತ್ತದೆ. ದೇಹದ ಯಾವುದೇ ಭಾಗದಲ್ಲಿ ಹುಳ ಕಚ್ಚಿ ಗುಳ್ಳೆಗಳಾದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.

ವಿಟಮಿನ್ ಸಿ ವಿಟಮಿನ್ ಬಿ2 ವಿಟಮಿನ್ ಬಿ3 ಹೇರಳವಾಗಿ ತೊಂಡೆಕಾಯಿಯಲ್ಲಿ ಸಿಗುವುದರಿಂದ ನಮ್ಮ ರಕ್ತ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವನೆ ಮಾಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. 2 ಚಮಚ ತೊಂಡೆಕಾಯಿ ಎಲೆ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ತಿಂದರೆ ಒಣಗಿರುವ ಚರ್ಮ ಮೃಧುವಾಗುತ್ತದೆ ಮತ್ತು ಮಧುಮೇಹ ಗುಣವಾಗುತ್ತದೆ. ದೇಹದಲ್ಲಿ ಗುಳ್ಳೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಪೇಸ್ಟ ಮಾಡಿ ಆ ಜಾಗಕ್ಕೆ ಹಚ್ಚಿದರೆ ಆ ಒಂದು ಗುಳ್ಳೆಗಳು ಮಾಯವಾಗುತ್ತವೆ ಋತುಸ್ರಾವದ ಸಂದರ್ಭದಲ್ಲಿ ತೊಂಡೆಕಾಯಿಯನ್ನು ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗುತ್ತದೆ. ತೊಂಡೆಕಾಯಿಯಲ್ಲಿ ಕಡಿಮೆ ಕ್ಯಾಲೊರಿಗಳಿರುವ ಕಾರಣ ಇದನ್ನು ತಿಂದರೆ ಬೇಗನೆ ಹಸಿವಾಗುವುದಿಲ್ಲ ಇದರಿಂದ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು

ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆಗೆ ಕುದಿಸಿ ತಯಾರಿಸಿದ ಎಣ್ಣೆಯನ್ನು ಚರ್ಮದ ಕಾಯಿಲೆಗೆ ಉಪಯೋಗಿಸಬಹುದು ಪೊಟ್ಯಾಶಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣುಗಳು ಉರಿಯುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೇಯ ರಸವನ್ನು ಸೇರಿಸಿ ಅದು ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿಬೇಕು ನಂತರ ಆ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣೂರಿ ಕಡಿಮೆಯಾಗುತ್ತದೆ. ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್ ಎಂಬ ಚರ್ಮದ ಕಾಯಿಲೆ ಕಡಿಮೆಯಾಗುತ್ತದೆ. ಈ ಒಂದು ತೊಂಡೆಕಾಯಿ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.

ಸಂದಿಗಳಲ್ಲಿ ಊತ ಇದ್ದರೆ ತೊಂಡೆಗಿಡದ ಎಲೆಗಳನ್ನು ಬೇವಿನ ಎಣ್ಣೆಯೊಂದಿಗೆ ಮಿಶ್ರಣಮಾಡಿ ಊತ ಇರುವ ಜಾಗದಲ್ಲಿ ಹಚ್ಚುವುದರಿಂದ ಊತ ಕಡಿಮೆಯಾಗುತ್ತದೆ. ಎಳೆಯ ತೊಂಡೆಕಾಯಿಯನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ ತೊಂಡೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬಿಟಾಕ್ಯಾರೋಟಿನ್ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ಮತ್ತು ಇನ್ನಿತರ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಈ ತೊಂಡೆಕಾಯಿ ಹೊಂದಿದೆ. ಆದ್ದರಿಂದ ಸ್ನೇಹಿತರೆ ಒಂದು ಚಿಕ್ಕ ತೊಂಡೆಕಾಯಿ ನಮ್ಮ ದೇಹದ ಆರೋಗ್ಯವನ್ನು ಯಾವರೀತಿ ಕಾಪಾಡುತ್ತದೆ ಎಂದು ಆದ್ದರಿಂದ ತೊಂಡೆಕಾಯಿ ತಿಂದು ಆರೋಗ್ಯ ವೃದ್ಧಿಸಿಕೊಳ್ಳಿ.

Comments are closed.