ಆರೋಗ್ಯ

ಚುಕ್ಕೆ ಇರುವ ಬಾಳೆಹಣ್ಣಿನ ಸೇವನೆ ನಮ್ಮ ದೇಹಕ್ಕೆ ಆರೋಗ್ಯಕರವೇ ತಿಳಿಯಿರಿ.?

Pinterest LinkedIn Tumblr

ಬಾಳೆ ಹಣ್ಣು ಯಾರು ತಾನೇ ತಿನ್ನಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಬಾಳೆ ಹಣ್ಣನ್ನ ತಿನ್ನುತ್ತಾರೆ, ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ, ಬಾಳೆಹಣ್ಣು ತ್ವರಿತ ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ. ಎರಡು ಬಾಳೆಹಣ್ಣು ತಿಂದರೆ 90 ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಧ್ಯನದಿಂದ ತಿಳಿದು ಬಂದಿದೆ, ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ ನಂಬರ್ ಒಂದು ಹಣ್ಣು ಎಂದರೆ ಬಾಳೆಹಣ್ಣು ಎಂದು ಹೇಳಿದರೆ ಅಚ್ಚರಿಪಡಬೇಕಾಗಿಲ್ಲ. ಬಾಳೆಹಣ್ಣು ಗಣನೀಯವಾದ ರೋಗಗಳನ್ನು ತಡೆಗಟ್ಟುತ್ತದೆ, ಹೀಗಾಗಿ ನಮ್ಮ ಪ್ರತಿನಿತ್ಯ ಆಹಾರ ಬಾಳೆಹಣ್ಣು ಇರಲೇಬೇಕು ಅನ್ನುತ್ತಾರೆ ವೈದ್ಯರು.

ಇನ್ನು ಸಾಮಾನ್ಯವಾಗಿ ನೀವು ಬಾಳೆಹಣ್ಣನ್ನು ತಿನ್ನುವಾಗ ಅದರ ಸಿಪ್ಪೆ ಮೇಲೆ ಚುಕ್ಕೆಗಳನ್ನು ನೋಡಿರಬಹುದು, ಈ ಸಿಪ್ಪೆಗಳು ಹೇಗೆ ನಮ್ಮ ಆರೋಗ್ಯಕ್ಕೆ ಲಾಭಕಾರಕ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ, ಹಾಗಾದರೆ ಚುಕ್ಕೆ ಇರುವ ಬಾಳೆ ಹಣ್ಣು ನಮ್ಮ ದೇಹಕ್ಕೆ ಹೇಗೆ ಆರೋಗ್ಯಕರ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮಾ ಅನಿಸಿಕೆಯನ್ನ ನಮಗೆ ತಿಳಿಸಿ. ಚುಕ್ಕೆಗಳು ಗಾಢ ಮತ್ತು ಅಗಲವಾಗಿದ್ದಷ್ಟೂ ಬಾಳೆಹಣ್ಣು ಹೆಚ್ಚು ಹೆಚ್ಚು ಹಣ್ಣಾಗುತ್ತಾ ಬಂದಿದೆ ಎಂದು ತಿಳಿದುಕೊಳ್ಳಬಹುದು, ಚುಕ್ಕೆಬೀಳಲು ತೊಡಗಿದ ಬಳಿಕ ಬಾಳೆಹಣ್ಣು ತನ್ನ ಎಲ್ಲಾ ಉತ್ತಮ ಗುಣಗಳನ್ನು ಪಡೆದಿರುತ್ತದೆ ಹಾಗಾಗಿ ಈ ಚುಕ್ಕೆಗಳು ಅಗಲವಾಗುವುದನ್ನು ಕಾಯುವ ಅಗತ್ಯವಿಲ್ಲ ಮತ್ತು ಚಿಕ್ಕ ಚುಕ್ಕೆಗಳಿದ್ದರೂ ಸಾಕು.

ಚುಕ್ಕೆ ಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್ಎಫ್) ಎಂಬ ಪೋಷಕಾಂಶವಿದ್ದು ಇವು ಕ್ಯಾನ್ಸರ್ ಗೆಡ್ಡೆಗಳನ್ನು ನಾಶಪಡಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಈ ಮೂಲಕ ಕ್ಯಾನ್ಸರ್ ವಿರುದ್ದ ಹೆಚ್ಚುವರಿ ರಕ್ಷಣೆ ಪಡೆಯಲು ಚುಕ್ಕೆಬಿದ್ದ ಸಿಪ್ಪೆಯ ಬಾಳೆಹಣ್ಣೇ ಸೇವನೆಗೆ ಅತ್ಯುತ್ತಮವಾಗಿದೆ. ಬಾಳೆಹಣ್ಣು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ, ಈ ಪ್ರಯೋಗವು ನಿಮಗೆ ತುಂಬಾ ಸುಲಭ ಮತ್ತು ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಕ್ಯಾಲ್ಸಿಯಂ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ ಆದ್ದರಿಂದ ಇದನ್ನು ಆಯುರ್ವೇದದಲ್ಲಿ ಮೂಳೆ ಬಲಪಡಿಸುವ ಹಣ್ಣು ಎಂದೂ ಪರಿಗಣಿಸಲಾಗಿದೆ. ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ ಇದು ಸೂರ್ಯನ ಹಾನಿಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.

ಬಾಳೆಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶವಿದೆ ಮತ್ತು ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯವಾಗಿರಿಸುತ್ತದೆ. ಬಾಳೆಹಣ್ಣಿನ ಮಾಸ್ಕ್ ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ತಡೆಯಲು ಸಹಾಯ ಮಾಡುತ್ತದೆ ಬಾಳೆಹಣ್ಣಿನಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು ತಿಂದ ಬಳಿಕ ಕ್ಷಿಪ್ರ ಸಮಯದಲ್ಲಿಯೇ ರಕ್ತದ ಮೂಲಕ ದೇಹದಲ್ಲಿ ಹೆಚ್ಚಿನ ಶಕ್ತಿ ಒದಗಿಸಲು ಸಾಧ್ಯವಾಗುತ್ತದೆ ಹಾಗಾಗಿ ಹೆಚ್ಚಿನ ಶಕ್ತಿಯ ಅಗತ್ಯವಿರುವ ಸಂದರ್ಭದಲ್ಲಿ ಅನಾರೋಗ್ಯಕರ ಶಕ್ತಿಪೇಯಗಳನ್ನು ಕುಡಿಯುವ ಬದಲು ಕೆಲವು ಬಾಳೆಹಣ್ಣುಗಳನ್ನು ತಿಂದರೆ ಸಾಕು. ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ನಿಮ್ಮ ಸ್ನಾಯುಗಳನ್ನು ಸೆಳೆತದಿಂದ ತಡೆಯುತ್ತದೆ, ಇತರ ಖನಿಜಗಳು ಮತ್ತು ಪೋಷಕಾಂಶಗಳು ದೀರ್ಘಕಾಲದ ದೈಹಿಕ ಸಹಿಷ್ಣುತೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ,

Comments are closed.