ಆರೋಗ್ಯ

ಸನ್‌ಟ್ಯಾನ್‌ ನಿವಾರಣೆಗೆ ಆಲೂಗಡ್ಡೆಯ ಜ್ಯೂಸ್‌ ಸಹಕಾರಿ

Pinterest LinkedIn Tumblr

ಹೌದು ಆಲೂಗಡ್ಡೆ ಒಂದು ಮನೆ ಮದ್ದಾಗಿದೆ ಇದರಿಂದ ಹಲವು ಉಪಯೋಗಗಳು ಇವೆ ನಿಮ್ಮ ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಮೈಗ್ರೇನ್ ಹಾಗು ಇನ್ನು ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ ಹೇಗೆ ಅನ್ನೋದು ಇಲ್ಲಿದೆ.

ವಾರಕ್ಕೊಮ್ಮೆ ಒಂದು ಹಸಿ ಆಲೂಗಡ್ಡೆಗೆ ಒಂದು ನಿಂಬೆಹಣ್ಣಿನ ಪೂರ್ತಿ ರಸ ಮತ್ತು ಅರ್ಧ ಚಮಚ ಅರಿಶಿನ ಬೆರೆಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ 30 ನಿಮಿಷ ಬಿಟ್ಟು ಮುಖ ತೊಳೆದರೆ ಕಪ್ಪು ಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ಸನ್‌ಟ್ಯಾನ್‌ ಆಗಿದ್ದರೆ ಆಲೂಗಡ್ಡೆಯ ಜ್ಯೂಸ್‌ ಮಾಡಿ ತಣ್ಣನೆಯ ಆ ಜ್ಯೂಸ್‌ ಅನ್ನು ಟ್ಯಾನ್‌ ಆದ ಜಾಗಕ್ಕೆ ಹಚ್ಚಿದರೆ ಪ್ರಯೋಜನವಿದೆ.

ಸುಟ್ಟ ಗಾಯಕ್ಕೆ ತಕ್ಷ ಣ ಆಲೂಗಡ್ಡೆಯನ್ನು ಹೆಚ್ಚಿ ಇಟ್ಟರೆ ಉರಿ ಬೇಗ ಕಡಿಮೆಯಾಗುತ್ತದೆ.

ಮೈಗ್ರೇನ್‌ ತಲೆನೋವು ಇದ್ದಾಗ ಹಣೆ ಮತ್ತು ಕಣ್ಣುಗಳ ಮೇಲೆ ಹಸಿ ಆಲೂಗಡ್ಡೆ ತುಂಡುಗಳನ್ನು 20 ನಿಮಿಷ ಇಟ್ಟರೆ ತಲೆನೋವು ಕಡಿಮೆಯಾಗುತ್ತದೆ.

ಮುಖದ ಚರ್ಮ ಸುಕ್ಕಾಗಿದ್ದರೆ ಹಸಿ ಆಲೂಗಡ್ಡೆಯನ್ನು ಪೇಸ್ಟ್‌ ಮಾಡಿ ಅದಕ್ಕೆ ಮೊಸರು ಕಲಸಿ 30 ನಿಮಿಷ ನೆನೆಸಿಡಿ. ನಂತರ ಅದನ್ನು ಮುಖಕ್ಕೆ ಲೇಪ ಮಾಡಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಸುಕ್ಕು ಕ್ರಮೇಣ ನಿವಾರಣೆಯಾಗುತ್ತದೆ.

Comments are closed.