ಆರೋಗ್ಯ

ದಾಸವಾಳ ಹೂವಿನಲ್ಲಿರುವ ಹತ್ತಾರು ಪ್ರಯೋಜನಗಳು

Pinterest LinkedIn Tumblr

ದೇಹಕ್ಕೆ ತಂಪು ಕೊಡುವ ದಾಸವಾಳ ಅನೇಕ ಔಷಧಿ ಗುಣಗಳನ್ನು ಹೊಂದಿದೆ. ದಾಸವಾಳದ ಹೂವಿನಲ್ಲಿ ಹತ್ತಾರು ಪ್ರಯೋಜನಗಳಿವೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ ದಾಸವಾಳದ ಹೂವು ಕೂದಲಿಗೆ ಒಳ್ಳೆಯದು ಎಂಬುದು ಗೊತ್ತಿದೆ ಇದಲ್ಲದೆ ಮಹಿಳೆಯರಿಗೆ ಬಿಳುಪು ಹೋಗುವುದನ್ನು ತಡೆಯುವುದರಿಂದ ಹಿಡಿದು ಇನ್ನು ಅನೇಕ ಆರೋಗ್ಯಕರ ಗುಣಗಳನ್ನು ಇದು ಹೊಂದಿದೆ ದಾಸವಾಳ ಹೂವಿನಲ್ಲಿ ಅಂಟಿ ಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ ಈ ಹೂವಿನಿಂದ ನಮಗೆ ಸಿಗುವ ಅದ್ಭುತ ಆರೋಗ್ಯಕರ ಅಂಶಗಳ ಬಗ್ಗೆ ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಶೀತ ಕೆಮ್ಮು ತಲೆನೋವು ಕಾಣಿಸಿದಾಗ ದಾಸವಾಳದ ಹೂವನ್ನು ತಿಂದರೆ ಅಥವಾ ಆದ್ದರಿಂದ ಚಹಾ ಮಾಡಿಕೊಂಡು ಕುಡಿದರೆ ಇಂತಹ ಒಂದು ಸಣ್ಣ ಪುಟ್ಟ ಸಮಸ್ಯೆಗಳಿಂದ ನಾವು ನಮ್ಮನ್ನು ಕಾಪಾಡಿಕೊಳ್ಳಬಹುದು ಆಂಟಿ ಆಕ್ಸಿಡೆಂಟಗಳು ಅಧಿಕವಾಗಿ ಇರುವುದರಿಂದ ಇದು ನಮ್ಮ ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕುತ್ತದೆ ಶಕ್ತಿವರ್ಧಕವಾಗಿ ನಮ್ಮ ದೇಹದಲ್ಲಿ ಇದು ಕೆಲಸ ಮಾಡುತ್ತದೆ.

ಮಹಿಳೆಯರಿಗೆ ಮೋನೋಪಾ ಸಮಯದಲ್ಲಿ ಆಟಪ್ಲ್ಯಾಸ್ ಸಮಸ್ಯೆ ಕಂಡುಬರುತ್ತದೆ ತುಂಬಾ ಶೆಕೆಯಾದಂತೆ ಅನಿಸುವುದು ಮೈಯೆಲ್ಲ ಬೆವರುತ್ತದೆ ಇದರಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಚಹಾ ಮಾಡಿಕೊಂಡು ಕುಡಿಯುವುದೇ ಒಂದು ಉತ್ತಮ ಔಷಧಿಯಾಗಿದೆ. ವಯಸ್ಸು ಹೆಚ್ಚಾಗಿ ಸೌಂದರ್ಯ ಕಡಿಮೆಯಾಗುವುದನ್ನು ನಾವು ಯಾರು ಬಯಸುವುದಿಲ್ಲ ಆದರೆ ನಾವು ಸತ್ಯವನ್ನು ಒಪ್ಪಿಕೊಳ್ಳಲೇಬೇಕು ಆದರೆ ಈ ಹೂವನ್ನು ಚಹಾದ ರೂಪದಲ್ಲಿ ಬಳಸುವುದರಿಂದ ಯೌವನದ ಚೆಲುವು ಬೇಗನೆ ಕಡಿಮೆಯಾಗದಂತೆ ನಾವು ತಡೆಯಬಹುದು ಹಾಗೇನೇ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಲು ನಾವು ದುಬಾರಿ ಚಿಕಿತ್ಸೆಯನ್ನು ಪಡೆಯುತ್ತೇವೆ ಆದರೆ ಪ್ರತಿದಿನ ದಾಸವಾಳದ ಹೂವಿನ ರಸವನ್ನು ಕುಡಿಯುವುದರಿಂದ ಮೊಡವೆ ಆಗುವುದನ್ನು ತಡೆಯುತ್ತದೆ ಅಲ್ಲದೆ ಈ ಹೂವಿನ ರಸ ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ ಈ ದಾಸವಾಳದ ಹೂವಿನಲ್ಲಿ ಅಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುವುದರಿಂದ ರೋಗನಿರೋಧಕ ಸಾಮರ್ಥ್ಯ ನಮ್ಮಲ್ಲಿ ಹೆಚ್ಚಾಗುತ್ತದೆ

ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಇದು ನೋಡಿಕೊಳ್ಳುತ್ತದೆ ನೀರಿನಂಶದ ಕೊರತೆಯಿಂದ ಬಳಲುವವರು ಹಾಗೂ ಒಣಚರ್ಮ ಇರುವವರು ಇದರ ರಸವನ್ನು ಕುಡಿಯುವುದು ತುಂಬಾ ಉತ್ತಮ ಕೆಲವರಿಗೆ ಹೊಟ್ಟೆ ಹಸಿಯುವುದಿಲ್ಲ ಇದಕ್ಕೆ ದಾಸವಾಳದ ಹೂವನ್ನು ತಿನ್ನುವುದೇ ಇದಕ್ಕೆ ಪರಿಹಾರ ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆಮದ್ದು ಇದಾಗಿದೆ ಎಣ್ಣೆಯಲ್ಲಿ ದಾಸವಾಳದ ಹೂವನ್ನು ಹಾಕಿ ಕಾಯಿಸಬೇಕು ಆ ಎಣ್ಣೆಯನ್ನು ಹಚ್ಚುವುದರಿಂದ ನಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಉದುರುವುದನ್ನು ತಡೆಯುವುದಲ್ಲದೆ ಪ್ರತಿದಿನ ಈ ಎಣ್ಣೆಯನ್ನು ಹಚ್ಚಿದರೆ ಕಪ್ಪಾದ ಕುದಲಿನ ಸೌಂದರ್ಯ ಮತ್ತು ಕೂದಲು ಕಾಂತಿಯುತವಾಗಿ ಹೊಳೆಯುತ್ತವೆ. ಕೊಬ್ಬಿನಂಶವನ್ನು ಕಡಿಮೆಮಾಡಬೇಕು ಅಂದುಕೊಂಡರೆ ದಿನಕ್ಕೆ 2 ದಾಸವಾಳದ ಹೂವನ್ನು ಸೇವಿಸಿ ಸಾಕು ದೇಹ ಉಷ್ಣತೆಯಿಂದ ಕುಡಿದ್ದರೆ ಅದಕ್ಕೆ ಈ ದಾಸವಾಳ ಹೂವಿನ ರಸವನ್ನು ಕುಡಿಯಿರಿ ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಬಿಳಿಬಣ್ಣದ ದಾಸವಾಳದಲ್ಲಿ ತಂಪುನೀಡುವ ಅಂಶ ಹೆಚ್ಚಾಗಿರುತ್ತದೆ ನಮ್ಮ ಕಣ್ಣುಗಳನ್ನು ಆಯಾಸದಿಂದ ಮುಕ್ತಿ ನೀಡುತ್ತದೆ ನಮ್ಮ ದೇಹವನ್ನು ತಂಪಾಗಿಸುತ್ತದೆ ದಾಸವಾಳದ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಇದರ ಚಹಾ ಕುಡಿಯುವುದರಿಂದ ತುಂಬಾ ಒಳ್ಳೆಯದು ಮಹಿಳೆಯರಲ್ಲಿ ಕಾಣುವ ಅಧಿಕ ಬಿಳುಪು ಹೋಗುವ ಸಮಸ್ಯೆ ಇದ್ದರೆ ದಿನ ಒಂದು ಬಿಳಿ ದಾಸವಾಳದ ಹೂವನ್ನು ತಿಂದರೆ ಅದನ್ನು ಕಡಿಮೆ ಮಾಡಿಕೊಳ್ಳಬಹುದು. ಹೃದಯ ಸಂಬಂಧಿ ತೊಂದರೆಗೆ ದಾಸವಾಳದ ನೈಸರ್ಗಿಕ ಅಂಶ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಈ ಹೂವಿನ ರಸವನ್ನು ಕಷಾಯ ಮಾಡಿಕೊಂಡು ಕುಡಿಯುವುದರಿಂದ ದೇಹದಲ್ಲಿನ ಅತಿಯಾದ ರ ಕ್ತದೊತ್ತಡವನ್ನು ಇದು ನಿಯಂತ್ರಿಸುತ್ತದೆ ದೇಹದಲ್ಲಿ ಇರುವ ಬೇಡವಾದ ಕೊಬ್ಬನ್ನು ಕರಗಿಸುವಲ್ಲಿ ಈ ದಾಸವಾಳ ಎತ್ತಿದ ಕೈ ಇದರ ರಸವನ್ನು ಕುಡಿಯುವುದರಿಂದ ಹೃದಯ ಸ್ತಂಭನಕ್ಕೆ ಕಾರಣವಾದ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಈ ಮೂಲಕ ಹೃದಯಾಘಾತವಾಗದಂತೆ ಕಾಪಾಡುತ್ತದೆ.

ಮಧುಮೇಹ ಮತ್ತು ಕಿಡ್ನಿ ಸಮಸ್ಯೆ ಇರುವವರಿಗೆ ದಾಸವಾಳದ ರಸ ಉತ್ತಮ ಪರಿಹಾರ. ಕೆಂಪುದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ ರಕ್ತಹೀನತೆ ಇರುವವರಿಗೆ ಇದು ಉತ್ತಮ. ಇದರ ರಸ ಕೂದಲಿಗೆ ಹೊಳಪು ನೀಡುತ್ತದೆ ತಲೆಹೊಟ್ಟು ನಿವಾರಿಸುತ್ತದೆ ಕೂದಲನ್ನು ಕಪ್ಪಾಗಿಸುತ್ತದೆ. ಈ ಹೂವಿನ ಎಣ್ಣೆ ಬಳಸುವುದರಿಂದ ಚರ್ಮದ ಹೊಳಪನ್ನು ಪಡೆಯಬಹುದು ಈ ಹೂವು ಮತ್ತು ಎಲೆಗಳನ್ನು ಒಣಗಿಸಿ ಸುಟ್ಟು ಅದರ ಬೂದಿಯನ್ನು ಹಚ್ಚಿದರೆ ಕಣ್ಣು ಹುಬ್ಬುಗಳು ಹೊಳಪನ್ನು ಪಡೆಯುತ್ತವೆ ಈ ದಾಸವಾಳಗಳಲ್ಲಿ ಅತಿ ಒಳ್ಳೆಯದು ಬಿಳಿದಾಸವಾಳ. ನಮ್ಮ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಈ ಹೂವು ಸಹಕರಿಸುತ್ತದೆ.

ಹಾಗಾಗಿ ಆವಾಹಿ ದೇಶದ ಜನರು ಈ ಹೂವುಗಳನ್ನು ತಿನ್ನುತ್ತಾರೆ ಚೀನಾದಲ್ಲಿ ಈ ಹೂವುಗಳನ್ನು ಉಪ್ಪಿನಕಾಯಿ ಮಾಡಿ ತಿನ್ನುತ್ತಾರೆ ದಾಸವಾಳ ಸಸ್ಯದ ಕಂಡಗಳಲ್ಲಿ ಫೈಬರ್ ಒಳ್ಳೆಯ ಗುಣಗಳನ್ನು ಹೊಂದಿರುತ್ತದೆ ಬಟ್ಟೆ ಬಲೆ ಹಾಗೂ ಕಾಗದ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿಹಾಕಿ ಚನ್ನಾಗಿ ಕುದಿಸಿ ಇದನ್ನು ಗಾಯಗಳಿಗೆ ಹಚ್ಚಿದರೆ ಗಾಯ ಗುಣವಾಗುತ್ತದೆ. ಬೇವಿನ ಮರದ ಅಡಿಯಲ್ಲಿ ಬಿಳಿ ದಾಸವಾಳದ ಹೂವನ್ನು ಒಣಗಿಸಿ ಪುಡಿ ಮಾಡಿ ಸೇವಿಸಿದರೆ ಕ್ಯಾನ್ಸರ್ ಕಾರಕ ರೋಗಗಳಿಂದ ಮುಕ್ತಿ ಪಡೆಯಬಹುದು.
==========

Comments are closed.