ಆರೋಗ್ಯ

ದೇಹಕ್ಕೆ ಯಾವುದೇ ರೀತಿಯ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇವುಗಳಿಗಿದೆ.

Pinterest LinkedIn Tumblr

ನಮ್ಮ ಭಾರತೀಯ ಅಡುಗೆಯಲ್ಲಿ ಪ್ರಮುಖ ಪಾತ್ರವನ್ನು ಪಡೆದಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಔಷಧಿ ಗುಣಗಳು ಇರುತ್ತವೆ ಎಂದು ಎಲ್ಲರಿಗೂ ಗೊತ್ತಿದೆ. ಹಲವಾರು ಶತಮಾನಗಳಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸುತ್ತಿದ್ದಾರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಕೆಲವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಇದರ ಒಂದು ಘಾಟುವಾಸನೆ ಇಷ್ಟವಾಗುವುದಿಲ್ಲ ಅಲಿಯುಮ್ಸ್ ಪ್ರಭೇಧಕ್ಕೆ ಸೇರಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ತಡೆಯುವ ಗುಣಗಳು ಇವೆಯಂತೆ ಇದರಲ್ಲಿ ಇರುವ ಕೆಲವು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್ ಗಳನ್ನು ತಡೆಯುತ್ತವೆ ಕ್ಯಾನ್ಸರ್ ಬರುವ ಮೊದಲೇ ಅದನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವ ವಿಧವಾದ ಕ್ಯಾನ್ಸರ್ ತಡೆಯುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟಗಳು ಡಿ ಎನ್ ಯ ಕೋಶಗಳಿಗೆ ಹಾನಿಯುಂಟು ಮಾಡುವ ಫ್ರಿಯಾರ್ಟಿಕಲಸನ್ನು ತಡೆಯುತ್ತದೆ

ಇದರಲ್ಲಿ ಕ್ಯಾನ್ಸರ್ ನ್ನು ತಡೆಯುವ ಹಲವಾರು ಗುಣಗಳು ಇರುತ್ತವೆ. ಕೆಲವೊಂದು ಕಿಣ್ವಗಳಿಗೆ ಶಕ್ತಿಯನ್ನು ನೀಡುವಂತಹ ಅಂಶಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇವೆ. ಇವು ಕ್ಯಾನ್ಸರ್ ಅಂಶಗಳನ್ನು ದುರ್ಬಲಗೊಳಿಸುತ್ತದೆ ಅಲ್ಲದೆ ಕ್ಯಾನ್ಸರ್ ಅಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಇದು ನೆರವಾಗುತ್ತದೆ. ಕ್ಯಾನ್ಸರ್ ಕೋಶಗಳು ಬೆಳೆಯುವ ಪ್ರಕ್ರಿಯೆಯನ್ನು ಇದು ನಿಧಾನಗೊಳಿಸುತ್ತದೆ. ಇರುಳ್ಳಿಯು ಕರುಳಿನ ಕ್ಯಾನ್ಸರ್ ನ್ನು 56% ರಷ್ಟು ಹಾಗೂ ಸ್ತನಕ್ಯಾನ್ಸರನ್ನು 25% ರಷ್ಟು ಅಪಾಯದಿಂದ ಕಡಿಮೆಮಾಡುತ್ತದೆ. ಬೆಳ್ಳುಳ್ಳಿಯು ಜನನಾಂಗ ಗ್ರಂಥಿ ಮತ್ತು ಸ್ತನಕ್ಯಾನ್ಸರನ್ನು ಹೊರತು ಪಡಿಸಿ ಇತರ ಹಲವಾರು ಕ್ಯಾನ್ಸರ್ ಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿರುವ ಅಂಶಗಳು ಕರುಳಿನ ಕ್ಯಾನ್ಸರ್ ಹೊಟ್ಟೆಕ್ಯಾನ್ಸರ್ ಮೂತ್ರಪಿಂಡದ ಕ್ಯಾನ್ಸರ್ ಜನನಾಂಗದ ಗ್ರಂಥಿ ಕ್ಯಾನ್ಸರ್ ಸ್ತನಕ್ಯಾನ್ಸರ್ ಅನ್ನನಾಳದ ಕ್ಯಾನ್ಸರ್ ಬಾಯಿ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಮತ್ತು ಯಕೃತ್ ಕ್ಯಾನ್ಸರ್ ನ್ನು ತಡೆಯುವಂತಹ ಅಂಶಗಳನ್ನು ಹೊಂದಿರುತ್ತದೆ.

ಈರುಳ್ಳಿಯ ಲಾಭಗಳನ್ನು ಪಡೆಯಬೇಕಾದರೆ ಅದನ್ನು ಯಾವ ರೀತಿ ತಿನ್ನಬೇಕು ಅಂತ ನೋಡಿದರೆ ಈರುಳ್ಳಿಯನ್ನು ಕತ್ತರಿಸಿಕೊಂಡು ಹಸಿಯಾಗಿ ತಿಂದರೆ ತುಂಬಾ ಒಳ್ಳೆಯದು ಈರುಳ್ಳಿಯನ್ನು ಕತ್ತರಿಸಿಕೊಂಡು 15 ನಿಮಿಷದ ಒಳಗೆ ತಿಂದರೆ ಕ್ಯಾನ್ಸರ್ ವಿರೋಧಿ ಗುಣಗಳು ನಮ್ಮ ದೇಹಕ್ಕೆ ಲಭ್ಯವಾಗುತ್ತವೆ. ವಾರದಲ್ಲಿ ಒಂದು ಎಸಳು ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ 30% ರಷ್ಟು ಕರುಳಿನ ಕ್ಯಾನ್ಸರ್ ಅಪಾಯವನ್ನು ನಾವು ತಡೆಯಬಹುದು ಎಂದು ಕೆಲವೊಂದು ಅಮೆರಿಕ ಸಂಶೋಧನೆಗಳು ತಿಳಿಸುತ್ತಿವೆ. ವಾರದಲ್ಲಿ 5 ಎಸಳು ಬೆಳ್ಳುಳ್ಳಿ ತಿಂದರೆ ಹೊಟ್ಟೆಯಲ್ಲಿನ ಕ್ಯಾನ್ಸರ್ 50%ರಷ್ಟು ಕಡಿಮೆ ಆಗುತ್ತದೆ ಅಂತ ಚೀನಾದ ಕೆಲವು ಸಂಶೋಧನೆಗಳು ತಿಳಿಸಿವೆ ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿ ತಿಂದರೆ ಶ್ವಾಶಕೋಶದ ಕ್ಯಾನ್ಸರ್ ಅಪಾಯವನ್ನು 44% ರಷ್ಟು ತಪ್ಪಿಸಬಹುದು. ಒಂದೆರಡು ಬೆಳ್ಳುಳ್ಳಿಯ ಎಸಳನ್ನು ಹಸಿಯಾಗೆ ತಿಂದರೆ ತುಂಬಾ ಒಳ್ಳೆಯದು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಮತ್ತು 5 ನಿಮಿಷದ ಕಾಲ ಗಾಳಿಯಲ್ಲಿ ಇರಿಸಿಬೇಕು ಹೀಗೆ ಗಾಳಿಯಲ್ಲಿ ಬೆರೆಯಲು ಬಿಟ್ಟರೆ ಅದರ ಪರಿಣಾಮ ಹೆಚ್ಚಾಗುತ್ತದೆ.

ಈರುಳ್ಳಿಯನ್ನು ಬೇಯಿಸಿದರೆ ಅದರ ನೀರನ್ನು ಬಿಸಡಬೇಡಿ ಏಕೆಂದರೆ ಇರುಳ್ಳಿಯಲ್ಲಿರುವ ಕೆಲವೊಂದು ಅಂಶಗಳು ನೀರಿನಲ್ಲಿ ಬೆರೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಇಷ್ಟೆಲ್ಲ ಉಪಯೋಗವಿರುವ ಈ ಈರುಳ್ಳಿ ಬೆಳ್ಳುಳ್ಳಿಯನ್ನು ಎಷ್ಟು ತಿನಬೇಕು ಎಂದರೆ ಒಂದು ಈರುಳ್ಳಿಯಲ್ಲಿ ಅರ್ಧ ಭಾಗವನ್ನು ತಿನ್ನುವುದು ತುಂಬಾ ಒಳ್ಳೆಯದು ಇನ್ನು ಹೇಳಬೇಕೆಂದರೆ ಅರ್ಧ ಇರುಳ್ಳಿಯನ್ನು ಪ್ರತಿದಿನ ಸೇವಿಸಿದರೆ ಬೆಳ್ಳುಳ್ಳಿಯನ್ನು ವಾರದಲ್ಲಿ 5 ಎಸಲು ತಿನ್ನಿ ಹೀಗೆ ಮಾಡುವುದರಿಂದ ಕೆಲವು ಬಗೆಯ ವಿವಿಧ ಕ್ಯಾನ್ಸರ್ ಗಳನ್ನು ನಾವು ತಡೆಯಬಹುದು. ಅಷ್ಟೇ ಅಲ್ಲದೆ ನಮ್ಮ ದೇಹಕ್ಕೆ ಯಾವುದೇ ರೀತಿಯ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಈ ಈರುಳ್ಳಿ ಬೆಳ್ಳುಳ್ಳಿಯಲ್ಲಿ ಇದೆ.

Comments are closed.