ಆರೋಗ್ಯ

ಅಸ್ತಮಾ, ಹೊಟ್ಟೆನೋವು, ಮೂತ್ರದ ಅಸ್ವಸ್ಥತೆ ಸಮಸ್ಯೆಗಳು ಮುಂತಾದ ರೋಗಗಳಿಗೆ ಈ ಸಸ್ಯ ಸಹಕಾರಿ

Pinterest LinkedIn Tumblr

ಕೆರೆಕಟ್ಟೆಗಳ ದಡದಲ್ಲಿ ಹೆಚ್ಚಾಗಿ ಕಂಡು ಬರುವ ಕೃಷ್ಣ ನೆಲ್ಲಿ ಬಂಜರುಭೂಮಿ ಹಾಗೂ ರಸ್ತೆಬದಿಗಳಲ್ಲೂ ಸಹ ಕಾಣಸಿಗುವಂತಹ ಒಂದು ಪೊದೆ ಸಸ್ಯ. ಕೆಲವರು ಈ ಸಸ್ಯದ ವೈಜ್ಞಾನಿಕ ಹೆಸರನ್ನು ಕಿರ್ಗನೆಲಿಯ ರಿಟಿಕೆಲೆಟ ಎಂದರೆ ಮತ್ತೆ ಕೆಲವರು ಪೈಲೆಂತಸ ರೇಟಿಕೆಲೆಟಸ್ ಎಂದು ಕರೆಯುತ್ತಾರೆ ಅದೇ ರೀತಿ ಈ ಸಸ್ಯದ ಕುಟುಂಬ ಯುಪೋರ್ಬಿಎಸಿಯೇ ಎಂದು ಮತ್ತೆ ಕೆಲವರು ಪೈಲಂತೆಸಿಯೇ ಎಂದು ಪ್ರತಿಪಾದಿಸಿದ್ದಾರೆ. ಸಂಸ್ಕ್ರುತದಲ್ಲಿ ಕೃಷ್ಣಕಾಂಬೋಜಿ ಪುಲಿಕ ಬಹುಪ್ರಜಾ ಮುಂತಾದ ಹೆಸರುಗಳಿದ್ದರೆ ಕನ್ನಡದಲ್ಲಿ ಕೃಷ್ಣನೇಲ್ಲಿ ಕರಿಹುಲಿ ಕರಿಸುಲಿ ಅನಸುಲಿ ಎಂದು ಕರೆಯುತ್ತಾರೆ.

ಆಂಗ್ಲಭಾಷೆಯಲ್ಲಿ ಬ್ಲ್ಯಾಕಬೇರಿಡ್ ಬ್ಲ್ಯಾಕಹನಿಷ್ರಬ್ ಪೊಟ್ಯಾಟೋ ಪ್ಲ್ಯಾಂನ್ಟ್ ಪೊಟ್ಯಾಟೋ ಬುಷ್ ಮುಂತಾದ ಹೆಸರುಗಳಿವೆ ಸುಮಾರು 10 ರಿಂದ 20 ಅಡಿ ಎತ್ತರಕ್ಕೆ ಬೆಳೆಯಬಲ್ಲ ಕೃಷ್ಣ ನೆಲ್ಲಿ ಹಲವಾರು ಕವಲುಗಳಾಗಿ ಬೆಳೆಯುವ ಗಟ್ಟಿಯಾದ ಕಾಂಡದಿಂದ ಕುಡಿದ ಪೊದೆ ಸಸ್ಯವಾಗಿದ್ದು ಸುಮಾರು 3 ಸೆಂಟಿಮೀಟರ್ ಉದ್ದ ಹಾಗೂ 1.7 ಸೆಂಟಿಮೀಟರ್ ಅಗಲವಾದ ಅಂಡಾಕಾರದ ಪುಟ್ಟ ಪುಟ್ಟ ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿವೆ. ಈ ಎಲೆಗಳ ಹಿಂಬಾಗದಲ್ಲಿ ಪುಟ್ಟದಾದ ಕೆಂಪು ಬಣ್ಣದ ಹೂವುಗಳು ಸಮಾನಾಂತರವಾಗಿ ಜೋಡನೆಗೊಂಡಿರುತ್ತವೆ. ನೆಲನೆಲ್ಲಿಯನ್ನು ಹೋಲುವ ತಿಳಿ ನೇರಳೆ ಬಣ್ಣದ ಕಾಯಿಗಳು ಎಲೆಗಳ ಹಿಂಬಾಗದಲ್ಲಿ ಜೋಡನೆಗೊಂಡಿರುತ್ತವೆ.

ಆಂಟಿ ಇಂಪ್ಲೊಮೇಟರಿ ಆಂಟಿ ಆಕ್ಸಿಡೆಂಟ್ ಆಂಟಿ ಮೈಕ್ರೊಬಾಯ್ಲ್ ಹೆಫೋಟೋಪ್ರೊಟೆಕ್ಟಿವ್ ಗುಣಗಳಿಂದ ಕೂಡಿರುವ ಕೃಷ್ಣನೆಲ್ಲಿ ಬೀಟಾಸಿತಸ್ಟರಾಲ್ ಪ್ರಿಡೆಲ್ಲಿಂಗ್ ಗ್ಲೋಕೊಡ್ಯನೇಲ್ ಬೆಟ್ಯುಲಿನಿಕ್ ಆಸಿಡ್ ಆಕ್ಟೊಕೊಸೇನಾಲ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿದ್ದು ಆಯುರ್ವೇದ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಈ ಸಸ್ಯವನ್ನು ಬಳಸಲಾಗುತ್ತದೆ ಪ್ರಾಚೀನ ಕಾಲದಲ್ಲಿ ಈ ಸಸ್ಯದ ಹಣ್ಣುಗಳಿಂದ ಶಾಹಿಯನ್ನು ತಯಾರಿಸುತ್ತಿದ್ದರೆಂಬ ಉಲ್ಲೇಖವಿದ್ದು

ಅಸ್ತಮಾ ಹೊಟ್ಟೆನೋವು ಮೂತ್ರದ ಅಸ್ವಸ್ಥತೆಗಳು ಲೈಂಗಿಕ ಸಮಸ್ಯೆಗಳು ಮುಂತಾದ ರೋಗಗಳಿಗೆ ಈ ಸಸ್ಯದಿಂದ ಔಷದೋಪಚಾರ ಮಾಡಲಾಗುತ್ತಿತ್ತು. ಪ್ರಸ್ತುತವಾಗಿ ಈ ಸಸ್ಯದ ಬಳಕೆ ಚಾಲ್ತಿಯಲ್ಲಿಲ್ಲ ಆದಾಗ್ಯೂ ಈ ಸಸ್ಯದ ಸಾಮಾನ್ಯ ಉಪಯೋಗವೆಂದರೆ ರಕ್ತಸ್ರಾವ ನಿರೋಧಕ ಗುಣಗಳಿಂದ ಕೂಡಿರುವ ಈ ಎಲೆಗಳನ್ನು ಅರೆದು ಆ ಪೇಸ್ಟನ್ನು ಅಥವಾ ರಸವನ್ನು ಆಯುಧಗಳಿಂದಾದ ಗಾಯಗಳಿಗೆ ಅಥವಾ ಸುಟ್ಟ ಗಾಯಗಳಿಗೆ ಲೇಪಿಸುವುದು ಶೀಘ್ರ ಉಪಶಮನವಾಗುತ್ತದೆ. ಈ ಸಸ್ಯದ ಹಣ್ಣುಗಳನ್ನು ಜಜ್ಜಿ ಯಾವುದೇ ಉದಿಕೊಂಡಿರುವ ಜಾಗದಲ್ಲಿ ಪಟ್ಟುಹಾಕುವುದರಿಂದ ನೋವಿನಿಂದ ಉಪಶಮನ ಪಡೆಯಬಹುದಾಗಿದೆ. ಈ ಸಸ್ಯದ ಬಳಕೆಯೇ ಇಲ್ಲದ ಕಾರಣ ಈ ಸಸ್ಯದ ಅಡ್ಡಪರಿಣಾಮಗಳ ಯಾವುದೇ ವರದಿಗಲಿಲ್ಲ.

Comments are closed.