ಆರೋಗ್ಯ

ಮಹಿಳೆಯರಿಗೆ ಅಥವಾ ಪುರುಷರಿಗೆ ಕಿವಿ ಚುಚ್ಚುವುದರಿಂದ ಸಿಗುವ ಲಾಭಗಳು

Pinterest LinkedIn Tumblr

ಸಾಮಾನ್ಯವಾಗಿ ಮಹಿಳೆಯರು ಆಭರಣಗಳನ್ನು ತಮ್ಮ ಅಂದವನ್ನು ಹೆಚ್ಚಿಸಲು ಹಾಕುತ್ತಾರೆ ಆದರೆ ಆಯುರ್ವೇದದ ಪ್ರಕಾರ ಮಹಿಳೆಯ ರು ಮೂಗುತಿ ಮತ್ತು ಕಿವಿ ಓಲೆ ಗಳನ್ನು ಹಾಕುವುದರ ಮೂಲಕ ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಆಯುರ್ವೇದ ದ ಪ್ರಕಾರ ಮಹಿಳೆಯ ಎಡ ಬದಿಯ ಮೂಗು ಮಹಿಳೆಯ ಸಂತಾನೋತ್ಪತ್ತಿಯ ಅಂಗದ ಮೇಲೆ ಸಂಬಂಧ ಹೊಂದಿದೆ ಹೀಗಾಗಿ ಎಡ ಬದಿಯ ಮೂಗಿಗೆ ಮೂಗುತಿ ಹಾಕುವುದರಿಂದ ಅದು ಮಹಿಳೆಯ ಸಂತಾನೋತ್ಪತ್ತಿ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿದು ಬಂದಿದೆ. ಎಡ ಮೂಗಿಗೆ ಆಭರಣ ಧರಿಸುವುದರಿಂದ ಅದು ಮಗುವಿಗೆ ಜನ್ಮ ನೀಡಿದ ವೇಳೆ ಉಂಟಾಗುವ ನೋವು ಕಡಿಮೆ ಮಾಡುವುದು ಮೂಗಿನ ಆಭರಣಗಳು ಹೆರಿಗೆ ಸುಲಭ ಗೊಳಿಸುವುದು ಎಂದು ಭಾರತೀಯರು ನಂಬಿದ್ದಾರೆ.

ಮೂಗಿನ ಎಡ ಬಾಗಕ್ಕೆ ಆಭರಣ ಧರಿಸಿದರೆ ಅದರಿಂದ ಋತು ಸ್ರಾವದ ವೇಳೆ ಉಂಟಾಗುವ ನೋವು ಕಡಿಮೆ ಆಗುವುದು ಎಂದು ಆಯುರ್ವೇದವು ಹೇಳುತ್ತೆ. ಇದು ಮೂಗಿಗೆ ಆಭರಣ ಧರಿಸುವುದರಿಂದ ಆಗುವ ಅತ್ಯುನ್ನತ ಲಾಭ. ಇನ್ನು ಕಿವಿಗೆ ಆಭರಣ ಧರಿಸುವುದರಿಂದ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಆಗುವುದು ಮೆದುಳಿಗೆ ಸರಿಯಾಗಿ ರಕ್ತ ಸಂಚಾರ ಆಗಿ ಅದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು ಕಿವಿಯ ಮಧ್ಯದ ಭಾಗವು ರೋಗ ನಿರೋಧಕ ಶಕ್ತಿಯ ಭಾಗವಾಗಿದೆ ಇದರಿಂದ ಮಧ್ಯದ ಭಾಗಕ್ಕೆ ಆಭರಣ ನಡೆಸುವುದರಿಂದ ಹುಡುಗರು ಹಾಗೂ ಹುಡುಗಿಯರಿಗೆ ಒಳ್ಳೆಯದು ಅಸಾಮಾನ್ಯ ಋತು ಸ್ರಾವವನ್ನು ಇದು ತಡೆಗಟ್ಟುವಲ್ಲಿ ಇದು ಯಶಸ್ವಿ ಆಗಿದೆ.

ಇನ್ನು ಪುರುಷರು ಕಿವಿಗೆ ಆಭರಣ ಚುಚ್ಚಿಸಿದರೆ ಅದರಿಂದ ವೀರ್ಯವು ಹೆಚ್ಚಾಗುವುದು ಭಾರತದ ಕೆಲವೊಂದು ಭಾಗದಲ್ಲಿ ಪುರುಷರು ಕಿವಿಗೆ ಆಭರಣ ಚುಚ್ಚಿಸಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ. ಇನ್ನು ಅಕ್ಯುಪ್ಯಾಕ್ಚರ ಪ್ರಕಾರ ಕಿವಿಯ ಮಧ್ಯ ಭಾಗವು ಸಂಪೂರ್ಣವಾಗಿ ಕಣ್ಣಿನ ದೃಷ್ಟಿಯ ಮೇಲೆ ಪ್ರಭಾವ ಬೀರುತ್ತದೆ ಆಭರಣ ಚುಚ್ಚಿಸಿಕೊಳ್ಳುವುದರಿಂದ ಈ ಜಾಗದಲ್ಲಿ ಒತ್ತಡ ಬಿದ್ದು ಅದು ನೇರವಾಗಿ ಕಣ್ಣಿಗೆ ನೆರವಾಗುವುದು ಇದು ಆಭರಣ ಚುಚ್ಛಿಸಿಕೊಳ್ಳುವ ಅಧ್ಬುತ ಲಾಭಗಳು. ಇನ್ನು ಕಿವಿಯ ರಂಧ್ರವನ್ನು ಅಕ್ಯೂಪಂಕ್ಚರೆ ಮಾಸ್ಟರ್ ಸೆನ್ಸಾರ್ ಮತ್ತು ಮಾಸ್ಟರ್ ಸೆರಬ್ರೈನ್ ನೀಡುವುದು ಈ ಕೇಂದ್ರಗಳಿಂದ ಕಿವಿಗೆ ಕೇಳುವ ಶಕ್ತಿ ನೀಡಲಾಗುತ್ತದೆ. ತಜ್ಞರ ಪ್ರಕಾರ ಕಿವಿಯನ್ನು ಚುಚ್ಚಿಸುವ ಮೂಲಕ ಈ ಭಾಗಗಳಲ್ಲಿ ಇರುವ ನರಗಳು ಕೆಲವು ಭಾಗಗಳಿಗೆ ಅದ್ಭುತವಾಗಿ ಪ್ರಚೋದನೆ ನೀಡುತ್ತದೆ.

ಇನ್ನು ಚೀನಿಯರು ಕಂಡುಕೊಂಡ ಅಕ್ಯುಪಂಕ್ಚರೆ ಪ್ರಕಾರ ಕಿವಿಗೆ ಚುಚ್ಚುವ ಭಾಗದಲ್ಲಿ ದೃಷ್ಟಿಯ ಕೇಂದ್ರದ ನೆರವು ಹಾದು ಹೀಗಿದೆ ಆದ್ದರಿಂದ ಈ ಭಾಗದಲ್ಲಿ ಕೊಂಚ ಒತ್ತಡ ಅಥವಾ ಪ್ರಚೋದನೆ ನೀಡುವ ಮೂಲಕ ಕಣ್ಣಿನ ದೃಷ್ಟಿ ಉತ್ತಮವಾಗಿ ಇರುತ್ತೆ ಇದೆ ವಿಷಯವನ್ನು ಆಯುರ್ವೇದದಲ್ಲಿ ಬಹಳ ಹಿಂದೆಯೇ ಹೇಳಲಾಗಿತ್ತು ಹಾಗಾಗಿ ಕಿವಿಯ ಆಭರಣಗಳು ಮತ್ತು ಮೂಗನ್ನು ಚುಚ್ಚುವ ವೇಳೆ ನಿಮ್ಮ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮವಾಗಿ ಚುಚ್ಚಿಸಿಕೊಳ್ಳಿ.

Comments are closed.