ಆರೋಗ್ಯ

ಹಲವು ರೋಗಗಳ ಶಮನಕ್ಕೆ ರಾಮಬಾಣ ಈ ಏಲಕ್ಕಿ, ಇದನ್ನ ಏಕೆ ತಿನ್ನಬೇಕು ಗೊತ್ತೇ.?

Pinterest LinkedIn Tumblr

ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಏಲಕ್ಕಿ ಸಣ್ಣದಾದರು ಇದರ ಉಪಯೋಗಗಳು ಲೆಕ್ಕಕ್ಕೆ ಸಿಗದಷ್ಟು. ಸಣ್ಣದಾದ ಏಲಕ್ಕಿಯನ್ನು ನಾವು ಸಾಮಾನ್ಯವಾಗಿ ಆಹಾರದ ಸ್ವಾಧ ಹೆಚ್ಚಿಸಲು ಬಳಸಿಕೊಳ್ಳುವುದು ತಿಳಿದಿರುವ ವಿಚಾರ, ಇದರ ಜೊತೆಗೆ ಹಲವು ರೋಗಗಳ ಶಮನಕ್ಕೆ ಔಷಧಿಯ ರಾಮಬಾಣವಾಗಿರುದು ಇದರ ವಿಶೇಷ.

ಏಲಕ್ಕಿಯು ಪ್ರತಿನಿತ್ಯ ನಾವು ಬಳಸುವಂತಹ ಸಾಂಬಾರಪದಾರ್ಥ. ಅನೇಕ ಆರೋಗ್ಯ ಸಹಕಾರಿ ಗುಣಗಳನ್ನು ಹೊಂದಿರುವುದು ಇದರ ವೈಶಿಷ್ಟ್ಯ ಏಲಕ್ಕಿಯು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಲು ಬಹಳ ಸಹಕಾರಿ. ಅಜೀರ್ಣವಾಗುವ ಸಂಭವತೆಯಿದ್ದಲ್ಲಿ ಊಟವಾದ ನಂತರದಲ್ಲಿ ಅಥವಾ ಇನ್ನೇನೋ ಘನ ಆಹಾರಸೇವನೆಯ ನಂತರ ಏಲಕ್ಕಿಯನ್ನು ಸಿಪ್ಪೆಸಮೇತ ಜಗಿಯುವುದು ಉತ್ತಮ.

ಭಾರತೀಯ ಆಹಾರಪದ್ಧತಿಯ ಅಧ್ಯಯನಕಾರರು ಏಲಕ್ಕಿಯನ್ನು ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುವುದರ ಕುರಿತು ಸಂಶೋಧನೆ ನಡೆಸಿದ್ದು, ಏಲಕ್ಕಿಯು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೆ ಏಲಕ್ಕಿಯು ಭೇದಿಯನ್ನು ತಡೆಯಲು, ಆಮ್ಲೀಯತೆ ಹೆಚ್ಚಾಗುವುದನ್ನು ತಡೆಯಲೂ ಸಹಕಾರಿ. ಏಲಕ್ಕಿಯಲ್ಲಿನ ಆಂಟಿ ಆಕ್ಸಿಡೆಂಟ್​ಗಳು ಹೃದಯದ ಆರೋಗ್ಯವನ್ನು ವೃದ್ಧಿಸಲು ಸಹಕಾರಿ.

ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ, ಜೀರ್ಣಶಕ್ತಿ ವೃದ್ಧಿಸಿ, ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯ. ಅಲ್ಲದೆ ತಲೆಗೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೇಯದು..

ಲೈಂಗಿಕ ಆಸಕ್ತಿ ಹೆಚ್ಚಳಕ್ಕೆ ಏಲಕ್ಕಿ ಹಾಲಿನ ಸೇವನೆ : ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ ಇದಕ್ಕೆ ಸ್ವಲ್ಪ ಜೇನು ಸೇರಿಸಿ. ಪ್ರತಿ ದಿನ ರಾತ್ರಿ ನಿಯಮಿತವಾಗಿ ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ, ಜೊತೆಗೆ ಮಧುರ ದಾಂಪತ್ಯದ ಜೀವನ ನಿಮ್ಮದಾಗುತ್ತದೆ.

ರಕ್ತ ಕ್ಲೀನ್ ಆಗುತ್ತದೆ : ಏಲಕ್ಕಿಯಲ್ಲಿರುವ ರಾಸಾಯನಿಕ ಗುಣದಿಂದಾಗಿ ಶರೀರದಲ್ಲಿರುವ ಫ್ರೀ ರೆಡಿಕಲ್ ಮತ್ತು ಇತರ ವಿಷಯುಕ್ತ ಕಣಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧವಾಗುತ್ತದೆ.

ಒಟ್ಟಿನಲ್ಲಿ ಸರ್ವರೋಗಾನಿಕಿ ಸಾರಾಯಿ ಮಂದು ಎಂಬ ತೆಲುಗು ನಾನ್ನುಡಿಯಂತೆ ಪ್ರತಿ ದಿನ ಏಲಕ್ಕಿ ಸೇವಿಸುವುದರಿಂದ ಆರೋಗ್ಯ ವೃದ್ದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿಯಾಗಲಿದೆ ಎಂಬುದು ಸರ್ವಕಾಲಿಕ ಸತ್ಯ.

Comments are closed.