ಆರೋಗ್ಯ

ಬಿಸಿಲಿಗೆ ದೇಹ ಡಿ- ಹೈಡ್ರೇಟ್​ ಆಗೋದು ಕಾಮನ್​ ಪ್ರಾಬ್ಲಂ, ಅದಕ್ಕೆ ಇಲ್ಲಿದೆ ಸಿಂಪಲ್​ ಸಲ್ಯೂಷನ್​

Pinterest LinkedIn Tumblr

 ಬೇಸಿಗೆ ಕಾಲ ಚಳಿಗಾಲ, ಮಳೆಗಾಲಗೆ ತಕ್ಕಂತೆ ನಮ್ಮ ಫುಡ್​ ಹ್ಯಾಬಿಟ್​ ಕೂಡಾ ಬದಲಾಗುತ್ತೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಉಷ್ಣತೆಯಿಂದ ಕೂಡಿದ ಆಹಾರವನ್ನ ಹೆಚ್ಚಾಗಿ ಸೇವಿಸಿದ್ರೆ, ಬೇಸಿಗೆಯಲ್ಲಿ ಆದಷ್ಟು ತಂಪಾಗಿರುವ ಆಹಾರಗಳನ್ನ ಹೆಚ್ಚು ಸೇವಿಸ್ತೇವೆ. ಚಳಿಗಾಲದಲ್ಲಿ, ನಿಮ್ಮ ದೇಹಕ್ಕೆ ಬೆಚ್ಚಗಿನ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಂತಹ ಆಹಾರ ಬೇಕಾಗುತ್ತದೆ. ಆದರೆ ಬೇಸಿಗೆಯಲ್ಲಿ ತಣ್ಣಗಿರುವ ಆಹಾರಗಳನ್ನ ಸೇವಿಸಲು ಬಯಸುತ್ತೇವೆ. ಇನ್ನು ಬೇಸಿಗೆ ಕಾಲದಲ್ಲಿ ಎಷ್ಟೇ ನೀರು ಕುಡಿದರೂ ನಮ್ಮ ದೇಹ ಡೀ- ಹೈಡ್ರೇಟ್​ ಆಗೋದು ಕಾಮನ್​ ಪ್ರಾಬ್ಲಂ. ಅದಕ್ಕೆ ಏನ್​ ಮಾಡಬೇಕು ಇಲ್ಲಿದೆ ನೋಡ ಸಿಂಪಲ್​ ಸಲ್ಯೂಷನ್​

1. ಕಲ್ಲಂಗಡಿ: ಕಲ್ಲಂಗಡಿ ಹಣ್ಣು ತಿನ್ನೋಕೂ ರುಚಿ.. ಹಾಗೇ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನಲ್ಲಿ ಸಾಕಷ್ಟು ನೀರಿನಾಂಶವಿದ್ದು, ಬೇಸಿಗೆಯಲ್ಲಿ ನಿಮ್ಮನ್ನ ತಂಪಾಗಿರಿಸಲು ಬೆಸ್ಟ್​ ಸಲ್ಯೂಶನ್​. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನೀರಿನಾಂಶವನ್ನ ಒದಗಿಸಿ, ಡಿ-ಹೈಡ್ರೇಟ್​ ಆಗದಂತೆ ನೋಡಿಕೊಳ್ಳುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್​ ಎ ಸಮೃದ್ಧವಾಗಿದ್ದು, ಗ್ಲುಕೋಸ್ ಮತ್ತು ತುಳಸಿ ಎಲೆಗಳನ್ನ ಸೇರಿಸಿ ಸಲಾಡ್ ತಯಾರಿಸಿಕೊಂಡು ಮಾರ್ನಿಂಗ್​ ಬ್ರೇಕ್​ಫಾಸ್ಟ್​ ಮಾಡಬಹುದು.

2. ಮೊಸರು: ಬೇಸಿಗೆ ಬಂತು ಅಂದ್ರೆ ಸಾಕು ಮೊದಲು ಜನರು ಮೊಸರು ಮಜ್ಜಿಗೆಯ ಮೊರೆ ಹೋಗುತ್ತಾರೆ. ಯಾಕಂದ್ರೆ ಮಜ್ಜಿಗೆ ದೇಹದ ಉಷ್ಣತೆಯನ್ನ ಕಡಿಮೆ ಮಾಡಿ ತಂಪಾಗಿರಿಸುತ್ತದೆ. ಇನ್ನು ಮೊಸರಿನಲ್ಲಿ ಪ್ರೋಬಯಾಟಿಕ್ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ನಿಮ್ಮ ದೇಹಕ್ಕೆ ಅಗತ್ಯ ಪೌಷ್ಟಿಕಾಂಶವನ್ನ ಒದಗಿಸುತ್ತದೆ. ಮೊಸರು ಕರುಳಿನ ಆರೋಗ್ಯವನ್ನ ಸುಧಾರಿಸಿ, ಡೈಜೇಶನ್​ ವ್ಯವಸ್ಥೆಯನ್ನ ಉತ್ತಮಗೊಳಿಸುತ್ತದೆ.

3. ಸೌತೆಕಾಯಿ: ಸೌತೆಕಾಯಿಯಲ್ಲಿ ನೀರಿನ ಅಂಶ, ಅತ್ಯಗತ್ಯ ಜೀವಸತ್ವಗಳು ಮತ್ತು ಖನಿಜಾಂಶಗಳಲ್ಲಿ ಹೆಚ್ಚಿರುತ್ತದೆ ಮತ್ತು ಬಿಸಿಲಿನ ದಾಹವನ್ನ ತಣಿಸುತ್ತದೆ. ಅದಕ್ಕಾಗಿ ಸೌತೆಕಾಯಿಯನ್ನ ಚೂರುಗಳಾಗಿ ಕತ್ತರಿಸಿ ನೀರಿನಲ್ಲಿ ಹಾಕಿಟ್ಟುಕೊಂಡು ಸೇವಿಸುತ್ತಿರಿ. ಈ ರೀತಿ ಮಾಡುವುದರಿಂದ ನಿಮ್ಮ ದೇಹ ಡೀ-ಹೈಡ್ರೇಟ್​ ಆಗದಂತೆ ನೋಡಿಕೊಳ್ಳಬಹುದು.

4. ಸಿಟ್ರಸ್ ಹಣ್ಣುಗಳು: ನಿಂಬೆ ಹಣ್ಣುಗಳು, ದ್ರಾಕ್ಷಿ ಹಣ್ಣುಗಳು ಮತ್ತು ಕಿತ್ತಳೆಗಳಂತಹ ಸಿಟ್ರಸ್ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ತಿನ್ನೋಕೆ ಈ ಹಣ್ಣುಗಳು ತುಂಬಾ ಸಿಹಿಯಾಗಿದ್ದು ಸಖತ್​ ಟೇಸ್ಟಿಯಾಗಿರುತ್ತೆ ಜೊತೆಗೆ ಈ ಸಿಟ್ರಸ್​ ಹಣ್ಣುಗಳು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನ ಹೊಂದಿದೆ. ಇನ್ನು ಈ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆ.

5. ಪುದೀನ ಎಲೆಗಳು: ಪುದೀನ ಎಲೆಗಳನ್ನು ಸಾಮಾನ್ಯವಾಗಿ ಮೊಸರು ಬಜ್ಜಿ, ಬಿರಿಯಾನಿ, ಸಾಂಬಾರು, ಚಟ್ನಿಗಳು ಸೇರಿದಂತೆ ಇನ್ನಿತರ ಅಡುಗೆಯಲ್ಲಿ ಬಳಸುತ್ತಾರೆ. ಇನ್ನು ಬೇಸಿಗೆ ಕಾಲದಲ್ಲಿ ಪುದೀನವನ್ನ ಹೆಚ್ಚಾಗಿ ಬಳಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದು. ನೀರಿನಲ್ಲಿ ಪುದೀನವನ್ನ ಸೇರಿಸಿಕೊಂಡು ಕುಡಿಯುವುದರಿಂದ ಬೇಸಿಗೆಯ ದಣಿವು ಕಡಿಮೆಯಾಗಿ ನಿಮಗೆ ರಿಫ್ರಶಿಂಗ್​ ಅನುಭವ ನೀಡುತ್ತದೆ.

6. ಈರುಳ್ಳಿ: ಬೇಸಿಗೆಯಲ್ಲಿ ಹೆಚ್ಚಾಗಿ ಈರುಳ್ಳಿ ಬಳಸುವುದರಿಂದ ಸನ್​ ಸ್ಟ್ರೋಕ್​ ಆಗುವುದನ್ನ ತಡೆಯಬಹುದು. ಇನ್ನು ಈರುಳ್ಳಿ ದೇಹದ ಉಷ್ಣತೆಯನ್ನ ಕಡಿಮೆ ಮಾಡುವ ಸಾಮರ್ಥ್ಯವನ್ನ ಹೊಂದಿರುವುದರಿಂದ ಕೆಂಪು ಈರುಳ್ಳಿಗಳನ್ನ ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಿ. ಸಾಂಬಾರ್​, ಚಟ್ನಿ, ಸಲಾಡ್​ಗಳಲ್ಲಿ ಹೆಚ್ಚಾಗಿ ಈರುಳ್ಳಿ ಬಳಸುವುದರಿಂದ ಇದರ ಲಾಭವನ್ನ ಪಡೆಯಬಹುದು.

Comments are closed.