ರಾಷ್ಟ್ರೀಯ

ಬ್ಯಾಂಕ್ ಸಿಬ್ಬಂದಿಗಳಿಗೆ ಸಿಹಿ ಸುದ್ದಿ : ದೀಪಾವಳಿಗೂ ಮುನ್ನವೆ ಸಿಗಲಿದೆ ಬೋನಸ್.

Pinterest LinkedIn Tumblr

ದೇಶದ 14 ಲಕ್ಷ ಬ್ಯಾಂಕ್ ಸಿಬ್ಬಂದಿಗೆ ಸಿಹಿ ಸುದ್ದಿಯಿದೆ. ದೀಪಾವಳಿಗೂ ಮುನ್ನವೆ ಬ್ಯಾಂಕ್ ಸಿಬ್ಬಂದಿಗೆ ಬೋನಸ್ ಸಿಗ್ತಿದೆ. ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಎಲ್ಲ ಸರ್ಕಾರಿ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಆದಷ್ಟು ಬೇಗ ಬ್ಯಾಂಕ್ ಸಿಬ್ಬಂದಿಗೆ ಬೋನಸ್ ನೀಡುವಂತೆ ಹೇಳಿದೆ.

ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬೋನಸ್ ರೂಪದಲ್ಲಿ ಸಿಗ್ತಿರುವ ಒಂದು ತಿಂಗಳ ಮುಂಗಡ ಹಣ ನವೆಂಬರ್ 1, 2017 ಕ್ಕಿಂತ ಮೊದಲಿನಿಂದಲೂ ಬ್ಯಾಂಕ್ ಉದ್ಯೋಗದಲ್ಲಿ ಕೆಲಸ ಮಾಡುತ್ತಿರುವ ಮತ್ತು ಇನ್ನೂ ನಿವೃತ್ತಿ ಹೊಂದಿರದ ನೌಕರರಿಗೆ ಸಿಗಲಿದೆ. ನವೆಂಬರ್ 1, 2017 ರ ನಂತರ ಮತ್ತು ಮಾರ್ಚ್ 31,2019 ರ ಮೊದಲು ಸೇರ್ಪಡೆಗೊಂಡ ನೌಕರರಿಗೆ ಅರ್ಧದಷ್ಟು ವೇತನವನ್ನು ಮುಂಗಡವಾಗಿ ನೀಡಲಾಗುವುದು.

ಬ್ಯಾಂಕ್ ನೌಕರರಿಗೆ ದೀಪಾವಳಿಗೆ ಮುನ್ನವೇ ಬೋನಸ್ ಸಿಗುವುದು ಅವ್ರ ಮುಖದಲ್ಲಿ ಖುಷಿ ನೀಡಿದೆ. ಇದು ದೀಪಾವಳಿಗೆ ಕೈಬಿಚ್ಚಿ ಖರ್ಚು ಮಾಡಲು ನೆರವಾಗಲಿದೆ. ಮಾರುಕಟ್ಟೆಯಲ್ಲಿ ಇದ್ರಿಂದ ಹಣದ ಹರಿವು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.