ಆರೋಗ್ಯ

ಕಡಿಮೆ ಹಸಿವಿಗೆ ಕಾರಣವಾದ ಕೆಲವು ರೋಗಗಳ ಪಟ್ಟಿ..?

Pinterest LinkedIn Tumblr

ಹೆಚ್ಚಿನ ವೈದ್ಯಕೀಯ ಸಮಸ್ಯೆಗಳಲ್ಲಿ ಮತ್ತು ಎಲ್ಲ ರೋಗಗಳಲ್ಲಿ ತುಂಬಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ಮಾರಕವಾದ ಲಕ್ಷಣವೆಂದರೆ ಕಡಿಮೆ ಹಸಿವು. ಊಟವನ್ನು ಸರಿಯಾಗಿ ತಿನ್ನದೇ ಇರುವ ಜನರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಕಾಣಬಹುದು. ಹಸಿವು ಇಲ್ಲದಿರುವುದರಿಂದ ಅನುದ್ದೇಶಿತ ತೂಕ ಇಳಿಕೆಗೆ ಕೂಡ ಕಾರಣವಾಗಬಹುದು.

ಹಸಿವು ಇಲ್ಲದಿರುವುದು ಅಥವಾ ಅನೋರೆಕ್ಸಿಯಾ ಎಂದರೇನು?
ಕಡಿಮೆ ಹಸಿವು ಎಂದರೆ ನಿಮ್ಮ ತಿನ್ನುವ ಆಸೆ ಕಡಿಮೆಯಾಗುವುದು. ಇದನ್ನು ವೈದ್ಯಕೀಯವಾಗಿ ಅನೋರೆಕ್ಸಿಯಾ ಎಂದು ಕರೆಯುತ್ತಾರೆ. ಇದು ರೋಗದ ಸ್ಥಿತಿಯಲ್ಲ ಆದರೆ ಇದು ಹಲವು ರೋಗಗಳಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಲಕ್ಷಣ. ಸಾಮಾನ್ಯವಾಗಿ ಕಡಿಮೆ ಹಸಿವಿಗೆ ಕಾರಣವಾದ ರೋಗವೂ ನಮಗೆ ತಿಳಿದಿರುತ್ತದೆ. ಅನೋರೆಕ್ಸಿಯಾ ಅನ್ನು ಸಾಮಾನ್ಯವಾಗಿ ಹಸಿವು ಇಲ್ಲದಿರುವುದು ಎಂದು ಸಹ ಕರೆಯುತ್ತಾರೆ. ಆದರೆ ಇದನ್ನು ಅನೋರೆಕ್ಸಿಯಾ ನೆರ್ವೋಸ ಎಂಬ ಸ್ಥಿತಿಗೆ ಹೋಲಿಸಬೇಡಿ. ಅನೋರೆಕ್ಸಿಯಾ ನೆರ್ವೋಸ ಇದು ತಿನ್ನುವ ಕಾಯಿಲೆಯಾಗಿದ್ದು, ಇದರಲ್ಲಿ ತೂಕ ಹೆಚ್ಚಾಗುವ ಭಯದಿಂದ ತೀರಾ ಕಡಿಮೆ ತಿನ್ನುತ್ತಾರೆ.

ಲಕ್ಷಣಗಳು ಮತ್ತು ಇದರ ಅಪಾಯಗಳು
ಹಸಿವು ಇಲ್ಲದಿರುವವರು ಸಾಮಾನ್ಯವಾಗಿ ಕಡಿಮೆ ಆಹಾರ ಸೇವನೆ ಮಾಡುವರು, ಅಥವಾ ಸ್ವಲ್ಪ ಊಟಕ್ಕೆ ಹೊಟ್ಟೆ ತುಂಬಿದಂತಾಗುತ್ತದೆ ಅಥವಾ ತಿನ್ನಬೇಕು ಎಂದು ಅವರಿಗೆ ಅನಿಸುವುದೇ ಇಲ್ಲ. ಈ ಸ್ಥಿತಿಯು ಹೀಗೆ ಮುಂದುವರಿದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮಾಡುತ್ತದೆ. ಇದರಿಂದ ತೂಕ ಇಳಿಕೆ, ದೇಹಕ್ಕೆ ಅವಶ್ಯಕ ಪೋಷಕಾಂಶಗಳು ಸಿಗದೇ ಇರುವುದು ಮತ್ತುಸ್ನಾಯುಗಳ ಬಲ ಮತ್ತು ಸಮೂಹವನ್ನು ಕಳೆದುಕೊಳ್ಳುವುದು.

ಕಾರಣಗಳು
ಕಡಿಮೆ ಹಸಿವನ್ನು ನಾವು ಸಾಮಾನ್ಯವಾಗಿ ಹಿರಿಯ ವಯಸ್ಕರಲ್ಲಿ ಕಾಣಬಹುದಾಗಿದೆ, ಆದರೆ ಇದಕ್ಕೆ ಹೆಚ್ಚಿನ ಕಾರಣಗಳು ಇರುವುದಿಲ್ಲ. ಆದರೂ ದುಃಖ ಮಾನಸಿಕ ಖಿನ್ನತೆ ಕೊರಗು ಅಥವಾ ಹೆದರಿಕೆ ಅಂತಹ ಕಾರಣಗಳು ಅದು ಮುಖ್ಯವಾಗಿ ವೃದ್ಧರಲ್ಲಿ ಕಾಣಬಹುದಾಗಿದೆ. ಹಲವು ಕಾಯಿಲೆಗಳಲ್ಲಿ ಕಡಿಮೆ ಹಸಿವು ಇರುವುದರಿಂದ, ಆ ಸಮಸ್ಯೆಗೆ ಅಥವಾ ರೋಗಕ್ಕೆ ಚಿಕಿತ್ಸೆ ನೀಡಿದರೆ ಹಸಿವು ಸರಿಯಾಗುತ್ತದೆ.

ಕಡಿಮೆ ಹಸಿವಿಗೆ ಕಾರಣವಾದ ಕೆಲವು ರೋಗಗಳ ಪಟ್ಟಿ ಈ ಕೆಳಗಿನಂತಿವೆ:
ಸುಧೀರ್ಘಯಕೃತ್ತುವಿನ ಸಮಸ್ಯೆಅಥವಾ ಮೂತ್ರಪಿಂಡದ ವೈಫಲ್ಯ
ಹೃದಯ ವೈಫಲ್ಯ
ಹೆಪಟೈಟಿಸ್
ಎಚ್ ಐ ವಿ
ಬುದ್ಧಿ ಭ್ರಮಣೆ
ಹೈಪೋಥೈರಾಯಿಡಿಸಂ , ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕಡಿಮೆಯಿರುವ ಸ್ಥಿತಿ
ಕರುಳು, ಹೊಟ್ಟೆ, ಅಂಡಾಶಯ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇದ್ದರು ಸಹ ಹಸಿವು ಇರುವುದಿಲ್ಲ.
ಗರ್ಭಿಣಿ ಮಹಿಳೆಯರಲ್ಲಿ ಮೊದಲ ಮೂರು ತಿಂಗಳಲ್ಲಿ ಹಸಿವು ಕಡಿಮೆ ಇರುವುದನ್ನು ಕಾಣಬಹುದು.
ಕೆಲವು ಅಕ್ರಮ ಮಾದಕ ದ್ರವ್ಯಗಳಾದ ಕೊಕೇನ್, ಹೆರಾಯಿನ್ ಮತ್ತು ಆಂಫೆಟಾಮಿನ್ಗಳ ಸೇವನೆ ಮಾಡುವುದರಿಂದಲೂ ಸಹ ಹಸಿವು ಕಡಿಮೆ ಆಗುತ್ತದೆ. ಇದರ ಜೊತೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು, ಮಾರ್ಫೀನ್, ಕೆಲವು ಆಂಟಿಬಯೋಟಿಕ್ ಗಳು ಮತ್ತು ಕೊಡೈನ್ ನಂತಹ ಔಷಧಿಗಳು ಸಹ ಈ ಪಟ್ಟಿಯಲ್ಲಿ ಸೇರುತ್ತವೆ.

ಮನೆ ಮದ್ದಿನ ಚಿಕಿತ್ಸೆ
ಕ್ಯಾನ್ಸರ್ ಅಥವಾ ಯಾವುದೇ ಸುಧೀರ್ಘ ಕಾಯಿಲೆಯಿಂದ ಹಸಿವು ಕಡಿಮೆ ಇದ್ದರೆ, ಅದನ್ನು ಸರಿಪಡಿಸುವುದು ಕಷ್ಟ.
ಹಾಗಿದ್ದರೂ ಮನೆಯವರ ಜೊತೆಯಲ್ಲಿ ಅವರಿಗಿಷ್ಟವಾದ ಆಹಾರವನ್ನು ಅಡುಗೆ ಮಾಡಿ ಅಥವಾ ಅಪರೂಪಕ್ಕೊಮ್ಮೆ ಹೊರಗಡೆ ಹೋಗಿ ಊಟಮಾಡುವುದರಿಂದಲೂ ಸಹ ಅವರನ್ನು ತಿನ್ನಲು ಪ್ರೇರೇಪಿಸಬಹುದು.
ಅವರ ಹಸಿವನ್ನು ಉತ್ತೇಜಿಸಲು ಮನೆಯವರು ಅವರ ಇಷ್ಟವಾದ ಅಡುಗೆಯನ್ನು ಮಾಡಬೇಕು ಅಥವಾ ತಂದು ಕೊಡಬೇಕು.
ಲಘು ವ್ಯಾಯಾಮಗಳು ಕೆಲವೊಮ್ಮೆ ಹೊಟ್ಟೆ ಹಸಿವನ್ನು ಹೆಚ್ಚಿಸಬಹುದು, ಇಲ್ಲವಾದಲ್ಲಿ ದಿನಕ್ಕೆ ಒಂದೇ ಬಾರಿ ಒಳ್ಳೆಯ ಮತ್ತು ಹೆಚ್ಚು ಆಹಾರವನ್ನು ತಿಂದು ನಂತರ ಲಘು ತಿಂಡಿಯನ್ನು ಮಧ್ಯೆ ಮಧ್ಯೆ ತಿನ್ನಬಹುದು.
ಆಗಾಗ್ಗೆ ಮತ್ತು ಸ್ವಲ್ಪ ಆಹಾರ ತಿನ್ನುವುದು ಕೂಡ ಸಹಕಾರಿಯಾಗಬಹುದು. ಇದು ಸಾಮಾನ್ಯವಾಗಿ ಹೆಚ್ಚು ಆಹಾರ ಒಂದೇ ಸಲ ತಿನ್ನುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ರೋಗಿಗೆ ಎಲ್ಲ ಪೌಷ್ಟಿಕಾಂಶಗಳು ಕೊಡಬೇಕೆಂದರೆ ಪ್ರೋಟೀನ್ ಮತ್ತು ಕ್ಯಾಲೋರಿಗಳು ಹೆಚ್ಚಿರುವ ಆಹಾರವನ್ನು ಕೊಡಿ. ಪ್ರೊಟೀನ್ಯುಕ್ತ ಪಾನೀಯಗಳು ಸಹ ಅವರ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಬಹುದು.
ಒಂದು ವಾರದವರೆಗೆ ಮತ್ತು ಪ್ರತಿ ದಿನ ನೀವು ಏನನ್ನು ತಿನ್ನುತ್ತಿದ್ದೀರಿ ಎಂದು ಬರೆದಿಟ್ಟುಕೊಳ್ಳಿ. ಇದನ್ನು ನಾವು ಆಹಾರ ಕ್ರಮ ವಿವರ ಎಂದು ಕರೆಯುತ್ತೇವೆ, ಇದು ನಿಮ್ಮ ವೈದ್ಯರಿಗೆ ನೀವು ತೆಗೆದುಕೊಳ್ಳುತ್ತಿರುವ ಪೌಷ್ಟಿಕಾಂಶಗಳು ಮತ್ತು ನಿಮ್ಮ ತೊಂದರೆಯ ತೀವ್ರತೆಯನ್ನು ತಿಳಿಯಲು ಸಹಾಯ ಮಾಡುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು?
ಬಹಳಷ್ಟು ಜನರು ತಮ್ಮ ಕಡಿಮೆ ಹಸಿವಿನ ತೊಂದರೆಯನ್ನು ಕಡೆಗಣಿಸುತ್ತಾರೆ, ಆದರೆ ಇದು ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಆದ್ದರಿಂದ ನೀವು ಯಾವಾಗ ವೈದ್ಯರನ್ನು ತಪ್ಪದೇ ಭೇಟಿಯಾಗಬೇಕೆಂದರೆ:
ನಿಮಗೆ ಗೊತ್ತಿಲ್ಲದೆಯೇ ಅಥವಾ ನೀವು ಶ್ರಮ ಪಡದೆ ನಿಮ್ಮ ತೂಕ ಕಡಿಮೆಯಾಗುತ್ತಿದ್ದರೆ.
ಕಡಿಮೆ ಹಸಿವಿನ ಜೊತೆ ಮಾನಸಿಕ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಮಾದಕ ದ್ರವ್ಯಗಳ ವ್ಯಸನ ಅಥವಾ ಮದ್ಯ ಸೇವನೆ ಅಥವಾ ತಿನ್ನುವ ಅಸ್ವಸ್ಥತೆ ಇದ್ದರೆ.
ನೀವು ತೆಗೆದುಕೊಳ್ಳುವ ಯಾವುದಾದರೂ ಔಷಧಿಗಳಿಂದ ನಿಮ್ಮ ಹಸಿವು ಕಡಿಮೆಯಾಗಿದ್ದರೆ ನಿಮ್ಮ ವೈದ್ಯರನ್ನು ಭೇಟಿಯಾಗಿ ನಿಮ್ಮ ಔಷಧ ಪ್ರಮಾಣವನ್ನು ಬದಲಾಯಿಸಲು ತಿಳಿಸಿ ನಿಮ್ಮ ವೈದ್ಯರಿಗೆ ತಿಳಿಸದೇ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಬಿಡಬೇಡಿ.
ಸಮಸ್ಯೆಯನ್ನು ಪತ್ತೆಮಾಡುವುದು
ಕೆಲವು ವಿವರವಾದ ಮಾಹಿತಿಗಳನ್ನು ನಿಮ್ಮಿಂದ ತಿಳಿದ ನಂತರ ವೈದ್ಯರು ನಿಮಗೆ ಕೆಲವು ಪರೀಕ್ಷೆಗಳನ್ನು ಮಾಡಿಸಬಹುದು. ಈ ಪರೀಕ್ಷೆಗಳು ನಿಮ್ಮ ಹಸಿವಿನ ಸಮಸ್ಯೆಯ ಮೂಲ ಕಾರಣವನ್ನು ತಿಳಿಯುವುದಕ್ಕಾಗಿರುತ್ತದೆ. ಅವುಗಳು ಹೀಗಿವೆ:
ಹೊಟ್ಟೆ ಭಾಗದ ಸ್ಕ್ಯಾನ್
ಬೇರಿಯಮ್ ಎನಿಮಾ, ಸಿಗ್ಮಾಇಡೋಸ್ಕೋಪಿ ಅಥವಾ ಕೊಲೊನೋಸ್ಕೋಪಿ (ಕರುಳು ಕ್ಯಾನ್ಸರ್ ಸ್ಥಿತಿಯಿದ್ದರೆ)
ಸಂಪೂರ್ಣ ರಕ್ತ ಪರೀಕ್ಷೆ
ಎರಿಥ್ರೋಸೈಟ್ ಸಂಚಯದ ದರ
ಎಚ್ ಐ ವಿ ಪರೀಕ್ಷೆ
ಮೂತ್ರಪಿಂಡದ ಕಾರ್ಯ ಪರೀಕ್ಷೆಗಳು(ಆರ್ ಎಫ್ ಟಿ)
ಯಕೃತ್ತು ಕಾರ್ಯ ಪರೀಕ್ಷೆಗಳು (ಎಲ್ ಎಫ್ ಟಿ)
ಗರ್ಭಿಣಿ ಪರೀಕ್ಷೆ
ಥೈರಾಯಿಡ್ ಪರೀಕ್ಷೆ
ಮೇಲ್ಭಾಗದ ಹೊಟ್ಟೆಯ ಪರೀಕ್ಷೆ
ಮೂತ್ರದಲ್ಲಿ ಔಷಧಗಳ ಇರುವಿಕೆಗಾಗಿ ಪರೀಕ್ಷೆ
ಕಡಿಮೆ ಹಸಿವಿನಿಂದ ಕುಪೋಷಣೆ ಅಥವಾ ಅಪೌಷ್ಟಿಕತೆಯ ಸಮಸ್ಯೆಯಾದಲ್ಲಿ ಅಂತಹವರಿಗೆ ಗ್ಲುಕೋಸ್ ಹಾಕಿ ಒಂದೆರಡು ದಿನಗಳು ಆಸ್ಪತ್ರೆಯಲ್ಲಿ ಇರುವಂತೆ ಹೇಳುತ್ತಾರೆ.

Comments are closed.