ಆರೋಗ್ಯ

ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಫಿಸಿಯೋಥೆರಪಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ…?

Pinterest LinkedIn Tumblr

ಸಾಮಾನ್ಯವಾಗಿ ಎಲ್ಲರೂ ಯಾವಾಗಲಾದರೊಮ್ಮೆ ಮೈ ಕೈ ನೋವು ಎಂದು ಹೇಳಿರುತ್ತೇವೆ ಮತ್ತು ಅನುಭವಿಸಿಯೂ ಇರುತ್ತೇವೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ತುಂಬಾ ಸಾಮಾನ್ಯವಾಗಿ ಗಾಯ, ಒತ್ತಡ ಅಥವಾ ಕ್ರೀಡಾ ಸಮಯದಲ್ಲಿ ಗಾಯ ಇರಬಹುದು. ಇದನ್ನು ಬಿಟ್ಟರೆ ನಮ್ಮ ಜೀವನಶೈಲಿ ಮತ್ತು ದಿನದ ಕೆಲಸದಿಂದಾಗಿಯೂ ಇರಬಹುದು. ಅದರಲ್ಲೂ ನೀವೇನಾದರೂ ದೈಹಿಕ ಚಟುವಟಿಕೆ ಇಲ್ಲದ ಜಡ ಜೀವನಶೈಲಿ ಹೊಂದಿದ್ದರೆ ಅಥವಾ ಮಾನಸಿಕ ಒತ್ತಡದ ಜೀವನವನ್ನು,ಸಾಗಿಸುತ್ತಿದ್ದರೆ ಅಥವಾ ದಿನದ ಹೆಚ್ಚು ಕಾಲ ಪುಸ್ತಕ ಅಥವಾ ಲ್ಯಾಪ್ಟಾಪ್ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಕೂಡ ನೋವು ಬರಬಹುದು.
ಕೆಲವೊಮ್ಮೆ ಕೆಲವು ನೋವು ನಿಮ್ಮ ಜೀವನದ ಪ್ರಮುಖ ದುಃಖವಾಗಿಬಿಡಬಹುದು. ಈ ರೀತಿಯ ನೋವಿಗಾಗಿ ಔಷಧಿಗಳ ಬದಲಿಯಾಗಿ ಫಿಸಿಯೋಥೆರಫಿ ಹೆಚ್ಚು ಸೂಕ್ತವಾಗಿದೆ.

ಫಿಸಿಯೋಥೆರಪಿಯಿಂದ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು
ವಯಸ್ಸಿನ ಸಂಬಂಧಿ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ
ನಮಗೆ ವಯಸ್ಸಾದಂತೆ, ನಾವುಗಳು ಅಸ್ಥಿರಂಧ್ರತೆ ಅಥವಾ ಸಂಧಿವಾತ ಶುರುವಾಗಿ ಮಂಡಿ ಚಿಪ್ಪಿನ ಬದಲಾವಣೆ ಮಾಡುವ ಸ್ಥಿತಿಗೆ ತಲುಪುತ್ತೇವೆ. ಈ ಸ್ಥಿತಿಯಲ್ಲಿ ನಮಗೆ ಫಿಸಿಯೋಥೆರಪಿ ತಜ್ಞರು ಶಸ್ತ್ರ ಚಿಕಿತ್ಸೆಯ ಅಗತ್ಯವನ್ನು ಕಡಿಮೆ ಮಾಡುವಲ್ಲಿ ಮತ್ತು ಅಸ್ಥಿರಂಧ್ರತೆ ಅಥವಾ ಸಂಧಿವಾತದ ನೋವಿನಿಂದ ಹೊರಬರಲು ಸಹಾಯ ಮಾಡುತ್ತಾರೆ.

ನರರೋಗದ ಸಮಸ್ಯೆಗಳನ್ನು ನಿಯಂತ್ರಣ ಮಟ್ಟದಲ್ಲಿಡುತ್ತಾರೆ
ಒಬ್ಬ ವ್ಯಕ್ತಿಯು ವಯಸ್ಸಾಗುತ್ತಿದಂತೆ, ನರಗಳ ದೌರ್ಬಲ್ಯಕ್ಕೆ ಮತ್ತು ನರಸಂಬಂಧಿ ರೋಗಗಳಿಗೆ ತುತ್ತಾಗುತ್ತಾನೆ, ಅವು ಯಾವುವೆಂದರೆ ಪಾರ್ಕಿನ್ಸನ್ ಕಾಯಿಲೆ, ದೀರ್ಘಾವಧಿಯ ಆಯಾಸ , ಬುದ್ಧಿ ಭ್ರಮಣೆ, ಪಾರ್ಶ್ವವಾಯು ಇತ್ಯಾದಿ. ಈ ರೀತಿಯ ಪ್ರಕರಣಗಳಲ್ಲಿ ಫಿಸಿಯೋಥೆರಪಿ ತನ್ನ ನರಸ್ನಾಯುಗಳ ಮತ್ತು ಸ್ನಾಯುಅಸ್ಥಿಗಳ ಚಿಕಿತ್ಸಾ ವಿಧಾನದಿಂದ ರೋಗ ಇನ್ನಷ್ಟು ಹದಗೆಡುವುದನ್ನು ತಡೆಗಟ್ಟುತ್ತದೆ ಮತ್ತು ಆಗಿರುವ ಗಾಯವನ್ನು ಸುಧಾರಿಸುತ್ತದೆ. ಬಾಧಿತ ಅಂಗಗಳ ಫಿಸಿಯೋಥೆರಪಿ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ, ಆ ಅಂಗಗಳಲ್ಲಿ ಸುಧಾರಣೆ ಕಂಡುಬಂದು ಚಲನೆಗಳು ಪುನರಾರಂಭಿಸುತ್ತದೆ.

ಶಸ್ತ್ರ ಚಿಕಿತ್ಸೆಯ ಮುನ್ನ ಮತ್ತು ನಂತರ
ಎಷ್ಟೋ ಸಲ ಫಿಸಿಯೋಥೆರಪಿ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ತಪ್ಪಿಸಿದೆ ಮತ್ತು ಇದನ್ನು ಕೆಲವು ಶಸ್ತ್ರಚಿಕಿತ್ಸೆಯ ಮೊದಲು ಅಥವಾ ನಂತರ ಕೂಡ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ತೊಂದರೆ ಉಂಟಾಗುವ ಅಪಾಯವನ್ನು ನಿರ್ಣಯಿಸುವಲ್ಲಿ ಶಸ್ತ್ರಕ್ರಿಯೆಯ ಮುನ್ನ ಮಾಡಿದ ಫಿಸಿಯೋಥೆರಪಿ ಸಹಾಯ ಮಾಡುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ನೀವು ವೇಗವಾಗಿ ಚೇತರಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಹೃದಯ ಮತ್ತು ಎದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ತಮ್ಮ ಗಾಯದಿಂದ ಹೇಗೆ ಬೇಗ ಚೇತರಿಸಿಕೊಳ್ಳುವುದು ಎಂದು ಹೇಳಿಕೊಡಲಾಗುತ್ತದೆ. ಒಬ್ಬ ಫಿಸಿಯೋಥೆರಪಿ ತಜ್ಞ ಶಸ್ತ್ರಕ್ರಿಯೆಯ ನಂತರ ತನ್ನ ರೋಗಿಗೆ ಎಲ್ಲ ವ್ಯಾಯಾಮಗಳ ವಿಧಾನಗಳನ್ನು ಹೇಳಿಕೊಡುತ್ತಾನೆ.

ಪ್ರಸವ ಪೂರ್ವ ಮತ್ತು ಪ್ರಸವದ ನಂತರ
ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಪ್ರಸೂತಿಯ ನಂತರ ಒಂದು ಮಹಿಳೆಯು ತನ್ನ ದೇಹದ ಕಡೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಈ ಸಮಯದಲ್ಲಾಗುವ ಎಷ್ಟೋ ಹಾರ್ಮೋನುಗಳ ಏಕಾಏಕಿ ಬದಲಾವಣೆ ಬೆನ್ನುಗಳನ್ನು ಹಿಡಿಯಬೇಕಿದ್ದ ಸ್ನಾಯುಗಳನ್ನು ಮೃದು ಮಾಡಿ ಹಿಗ್ಗಿಸಲು ಶುರುಮಾಡುತ್ತದೆ. ನಿಮ್ಮ ಪಕ್ಕೆಲುಬುಗಳ ಸ್ನಾಯು ಮತ್ತು ಹೊಟ್ಟೆಯ ಸ್ನಾಯುಗಳು ಹಿಗ್ಗಲು ಶುರು ಮಾಡುತ್ತದೆ. ಆಗ ನಿಮ್ಮ ಫಿಸಿಯೋಥೆರಪಿ ತಜ್ಞರು ನಿಮಗೆ ಕೆಲವು ಸರಿಯಾದ ವಿಧಾನಗಳನ್ನು ಮತ್ತು ವ್ಯಾಯಾಮಗಳಾದ ಕೆಗೆಲ್ ವ್ಯಾಯಾಮಗಳು, ಹಿಗ್ಗುವಿಕೆಯ ವ್ಯಾಯಾಮಗಳು ಇತ್ಯಾದಿಯನ್ನು ಕಲಿಸುವುದರಿಂದ ನಿಮ್ಮ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಿ ನಿಮ್ಮ ದೇಹದಲ್ಲಾಗುವ ಅಥವಾ ಆಗಿರುವ ಬದಲಾವಣೆಗಳಿಂದ ಬೇಗ ಗುಣವಾಗಲು ಸಹಾಯ ಮಾಡುತ್ತಾರೆ.

ಹೃದಯಾಶ್ವಾಸಕೋಶದ ಸಂಬಂಧಿ ಸಮಸ್ಯೆಗಳನ್ನು ಸರಿಪಡಿಸುತ್ತದೆ
ಫಿಸಿಯೋಥೆರಪಿ ಕೇವಲ ಬಾಧಿತ ಅಂಗಾಗಗಳಲ್ಲಿ ಮಾತ್ರ ಕೆಲಸ ಮಾಡದೆ ಪೂರ್ಣ ದೇಹದ ಮೇಲೆ ಗಮನಕೊಡುತ್ತದೆ. ಹಾಗಾಗಿ ಇದು ಉಸಿರಾಟದ ತೊಂದರೆಗಳು, ಹೃದಯ ಮತ್ತು ಶ್ವಾಸಕೋಶದ ತೊಂದರೆಗಳನ್ನು ಪೂರ್ಣವಾಗಿ ಗುಣಪಡಿಸುತ್ತದೆ. ಧೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೂ ಫಿಸಿಯೋಥೆರಪಿ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ವೃತ್ತಿಪರ ಫಿಸಿಯೋಥೆರಪಿ ತಜ್ಞರ ಮಾರ್ಗದರ್ಶನದಡಿಯಲ್ಲಿ ವ್ಯಾಯಾಮ ಮಾಡುವುದರಿಂದ ನೀವು ಶೀಘ್ರದಲ್ಲೇ ಗುಣವಾಗಲು ಸಹಾಯ ಮಾಡುತ್ತದೆ ಮತ್ತು ನೀವು ಒಂದು ಸಲ ಸಂಪೂರ್ಣ ತರಬೇತಿ ಪಡೆದ ನಂತರ ನಿಮ್ಮ ಮನೆಯಲ್ಲಿಯೇ ಅಭ್ಯಾಸ ಮಾಡಬಹುದು.
ಸಮಗ್ರತೆಯ ಚಿಕಿತ್ಸೆಗೆ ಮುಖ್ಯವಾದ ಭಾವನಾತ್ಮಕ ಮತ್ತು ಮಾನಸಿಕ ಸಮತೋಲನವನ್ನು ಮರುಸ್ಥಾಪಿಸುವಲ್ಲಿ ಸಹಾಯ ಮಾಡುತ್ತದೆ

ಒಬ್ಬ ಫಿಸಿಯೋಥೆರಪಿ ತಜ್ಞ ತನ್ನ ರೋಗಿಯಲ್ಲಿರುವ ಮಾನಸಿಕ ಭಾವನೆಗಳಾದಭಯ ಹತಾಶೆ ಮತ್ತು ಮಾನಸಿಕ ಖಿನ್ನತೆ ಯನ್ನು ಹೇಗೆ ಸುಧಾರಿಸುವುದು ಎಂದು ತಿಳಿದಿರುತ್ತಾನೆ. ಅವರು ನಿಮ್ಮ ವಿಶ್ವಾಸವನ್ನು ಗೆದ್ದು ನಿಮ್ಮ ಸಹಾಯದಿಂದ ನಿಮ್ಮ ಮಾನಸಿಕ ನೋವು ಮತ್ತು ನಿಮ್ಮ ದೇಹಕ್ಕೆ ಆಗಿರುವ ಗಾಯ ಮತ್ತು ನೋವನ್ನು ತನ್ನ ಚಿಕಿತ್ಸೆ ಮತ್ತು ವ್ಯಾಯಾಮದ ವಿಧಾನಗಳಿಂದ ಸರಿಪಡಿಸುತ್ತಾರೆ. ಕೆಲವೊಮ್ಮೆ ತನ್ನ ರೋಗಿಯ ಆಶಾವಾದಿ ಮತ್ತು ಮನೋಭಾವದ ಸ್ಥಿತಿಯನ್ನು ನಿರ್ಮಿಸುವಲ್ಲಿ ಫಿಸಿಯೋಥೆರಪಿ ತಜ್ಞರ ಈ ಪಾತ್ರವು ವ್ಯಾಯಾಮದ ವರ್ತನೆಗಿಂತ ಹೆಚ್ಚು ಮುಖ್ಯವಾಗಿದೆ.

ಪೂರ್ಣ ದೇಹ ವ್ಯಾಯಾಮದ ಲಾಭಗಳು
ಫಿಸಿಯೋಥೆರಪಿ ವ್ಯಾಯಾಮಗಳು ದೇಹವನ್ನು ಸಡಿಲಗೊಳಿಸಲು ಮತ್ತು ಯೋಗ್ಯ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಫಿಸಿಯೋಥೆರಪಿ ತಜ್ಞ ಶಿಫಾರಸು ಮಾಡಿದ ವ್ಯಾಯಾಮವನ್ನು ಮಾಡುವಾಗ, ಕೆಲವು ಸ್ನಾಯು ಬಲಪಡಿಸುವ ಮತ್ತು ವಿಸ್ತರಿಸುವ ವ್ಯಾಯಾಮಗಳು, ನಿಮ್ಮ ದೇಹದ ಸ್ನಾಯುಗಳನ್ನು ವಿವಿಧ ಕೋನಗಳಲ್ಲಿ ಚಲಿಸುವಂತೆ ಮಾಡಿ ಅದರ ಮೂಲಕ ರಕ್ತ ಚಲಾವಣೆಯನ್ನು ಹೆಚ್ಚು ಮಾಡುತ್ತದೆ. ಇದು ನಿಮಗೆ ಶಸ್ತ್ರಚಿಕಿತ್ಸೆ ನಂತರ ಆದ ಗಾಯದಿಂದ ಚೇತರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ನಿಮ್ಮ ನೋವು ಮತ್ತು ಗಾಯ ನಿಮ್ಮ ಜೀವನಶೈಲಿಯ ಮೇಲೆ ನಿರ್ಬಂಧ ಹೇರದೆ ಇರುವಂತೆ ನೋಡಿಕೊಳ್ಳಿ ಮತ್ತು ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯವಾಗಿರಿ.

Comments are closed.