ಆರೋಗ್ಯ

ಊಟಕ್ಕೆ ಮುಂಚೆ ಮತ್ತು ಊಟದ ನಂತರ ಜೀರಿಗೆ ಸೇವನೆ ಅರೋಗ್ಯಕ್ಕೆ ಉತ್ತಮ ಯಾಕೆ..?

Pinterest LinkedIn Tumblr

ಜೀರಿಗೆ ಕೇವಲ ಒಂದು ಸಾಂಬಾರ ಪದಾರ್ಥವಾಗಿರದೆ ಹಲವು ಚಿಕ್ಕಪುಟ್ಟ ಬೇನೆಗಳಿಗೆ ಮನೆಯ ಮದ್ದಾಗಿ ಸಹ ಉಪಯೋಗಿಸ ಲಾಗುತ್ತಿದೆ. ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ, ಕಹಿಜೀರಿಗೆ ಎಂಬ ಮೂರು ವಿಧಗಳಿವೆ. ಅವುಗಳಲ್ಲಿ ಬಿಳಿಜೀರಿಗೆಯನ್ನೇ ಹೆಚ್ಚಾಗಿ ಪಾಚಕಾಂಗಗಳ ಕಾಯಿಲೆಯಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ.ಇದೇ ಜೀರಿಗೆಯನ್ನು ನಾವು ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಿರುವುದು ಕೂಡ.

ಜೀರಿಗೆಯ ಔಷಧೀಯ ಉಪಯೋಗಗಳು

*ಅತಿಯಾಗಿ ಬೆವರು ಬರುತ್ತಿದ್ದರೆ, ಬೆಳಿಗ್ಗೆ ಸಂಜೆ ಜೀರಿಗೆ ಪುಡಿಯನ್ನು ಬಿಸಿ ನೀರಿನ ಜೊತೆ ಕುಡಿಯುತ್ತಾ ಬಂದರೆ ಬೆವರುವುದು ಕಡಿಮೆಯಾಗುತ್ತದೆ.

*ಪಿತ್ತ ವಿಕಾರದಿಂದ ತಲೆದೋರುವ ವಾಕರಿಕೆ, ಹೊಟ್ಟೆ ತೊಳಸುವಿಕೆ, ತಲೆ ಸುತ್ತವಿಕೆ ಇತ್ಯಾದಿ ತೊಂದರೆಗಳಿಗೆ, ಜೀರಿಗೆ, ಬೆಲ್ಲ ಮತ್ತು ಹುಣಸೆಹಣ್ಣನ್ನು ಸಮಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಕುಟ್ಟಿ, ಒಂದು ಹೆಬ್ಬೆಟ್ಟು ಗಾತ್ರ ತೆಗೆದುಕೊಂಡು ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ರಸ ಹೀರುವುದರಿಂದ ಮೇಲಿನ ತೊಂದರೆ ಉಪಶಮನವಾಗುತ್ತದೆ.

*ಮಲಬದ್ಧತೆಯುಂಟಾದಾಗ ಮತ್ತು ಅಜೀರ್ಣವಾದಾಗ ಊಟಕ್ಕೆ ಮುಂಚೆ ಮತ್ತು ಊಟದ ನಂತರ ಜೀರಿಗೆಯನ್ನು ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.

*ಚೇಳು ಕಡಿದಾಗ ಜೀರಿಗೆ ಪುಡಿಗೆ ಸ್ವಲ್ಪ ಸೈಧವಲವಣವನ್ನು ತುಪ್ಪದಲ್ಲಿ ಕಲೆಸಿ ಕಡಿದ ಜಾಗಕ್ಕೆ ಹಚ್ಚಿದರೆ ಕಡಿತದ ನೋವು ಉಪಶಮನವಾಗುತ್ತದೆ.

Comments are closed.