ಆರೋಗ್ಯ

ನಗುವುದರಿಂದ ಹಲವು ಬಗೆಯ ಖಾಯಿಲೆಗಳು ಗುಣಮುಖ

Pinterest LinkedIn Tumblr

ಮನುಷ್ಯ ಜೋರಾಗಿ ನಕ್ಕರೆ ಈ ರೋಗಗಳು ಗುಣವಾಗುತ್ತದೆ ಅಂತೆ. ಇದೇನಪ್ಪ ವಿಚಿತ್ರ ಅಂತ ಅನ್ನಿಸಬಹುದು. ಇದನ್ನು ಕೇಳಿ ಕೆಲವರಿಗೆ ನಗು ಸಹ ಬರಬಹುದು. ಆದರೆ ಇತ್ತೀಚೆಗೆ ಅಮೇರಿಕಾದ ಫ್ಲೋರಿಡದ ವಿಜ್ಞಾನಿಗಳು ಒಂದು ಸಂಶೋಧನೆಯನ್ನು ನಡೆಸಿದ್ದಾರೆ. ನಗುವುದರಿಂದ ಸಹ ಹಲವು ಬಗೆಯ ಖಾಯಿಲೆಗಳನ್ನು ಗುಣಪಡಿಸಬಹುದು. ಅದರಲ್ಲಿ ಅತೀ ಹೆಚ್ಚಿನ ರೀತಿಯಲ್ಲಿ ನಾವು ಮಲಬದ್ಧತೆ ಖಾಯಿಲೆಯನ್ನು ನಿವಾರಿಸಿಕೊಳ್ಳಬಹುದಂತೆ. ಅದು ಏಕೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಲೇಬೇಕು. ನಗು ಪ್ರತಿಯೊಬ್ಬರ ಜೀವನದಲ್ಲೂ ಅತೀ ಮುಖ್ಯ ಭಾಗವಾಗಿರುತ್ತದೆ.

ಕೆಲವರಿಗಂತೂ ನಾವು ಎಷ್ಟೇ ನಗಿಸಲು ಪ್ರಯತ್ನಿಸಿದರೂ ಸಹ ಗಂಟುಮುಖ ಮಾಡಿ ಕುಳಿತುಕೊಂಡಿರುತ್ತಾರೆ. ನಾವು ಏನೇ ಹೇಳಿದರೂ ಸಹ ಕೆಲವರಿಗೆ ನಗು ಬರುವುದೇ ಇಲ್ಲ. ಮತ್ತಷ್ಟು ಜನ ಹೇಗೆಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಹ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. ನೀವು ಈಗಾಗಲೇ ಕೇಳಿರಬಹುದು. ಯಾರು ಹೆಚ್ಚು ಸಂತೋಷದಿಂದ ಇರುತ್ತಾರೆಯೋ ಅವರಿಗೆ ಆಯುಷ್ಯ ಹೆಚ್ಚು ಹಾಗು ನಗುವೇ ಆರೋಗ್ಯಕ್ಕೆ ಮದ್ದು ಎಂಬುದು. ಆದರೆ ಇದು ಅಕ್ಷರಸಹ ನಿಜ. ಈಗಾಗಲೇ ನಮ್ಮ ಭಾರತದ ವಿಜ್ಞಾನಿಗಳು ಸಹ ಅನೇಕ ಕಡೆ ಈ ಸಂಶೋಧನೆ ಮಾಡಿ ನಗುವಿನಿಂದ ಹಲವು ರೀತಿಯ ಖಾಯಿಲೆಗಳನ್ನು ಗುಣ ಪಡಿಸಿಕೊಳ್ಳಬಹುದು ಎಂಬುದನ್ನು ಖಚಿತ ಪಡಿಸಿದ್ದಾರೆ.

ಹಾಗೆಯೇ ಅಮೇರಿಕಾದ ಫ್ಲೋರಿಡಾದ ವಿಜ್ಞಾನಿಗಳು ಸುಮಾರು ಹದಿನೈದು ಸಾವಿರ ಜನರ ಮೇಲೆ ಈ ಸಂಶೋಧನೆಯನ್ನು ನಡೆಸಿ ಪ್ರಯೋಗವನ್ನು ಮಾಡಿದ್ದಾರೆ. ಹಾಗಾದರೆ ನಾವು ಹೆಚ್ಚು ಹೆಚ್ಚು ನಗುವುದರಿಂದ ಯಾವೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ. ಮೊದಲನೆಯದಾಗಿ ನಾವು ಹೊಟ್ಟೆ ಹುಣ್ಣಾಗುವಷ್ಟು ನಗುವುದರಿಂದ ನಮ್ಮ ಕರುಳಿಗೆ ಅದು ಮಸಾಜ್ ಮಾಡಿದಂತೆ ಆಗುತ್ತದೆ. ಈ ಒಂದು ಕ್ರಿಯೆ ನಡೆಯುವುದರಿಂದ ಅದು ಉತ್ತಮವಾಗಿ ಮಲಬದ್ಧತೆ ನಿವಾರಣೆ ಮಾಡುವ ಔಷಧಿಯಾಗಿ ಕೆಲಸ ಮಾಡುತ್ತದೆಯಂತೆ. ನಗು ನಮ್ಮ ಜೀವನದ ಒತ್ತಡವನ್ನು ನಮಗೆ ಗೊತ್ತಿಲ್ಲದ ಹಾಗೆ ಕಡಿಮೆ ಮಾಡುತ್ತದೆ. ನಗುವು ನಮ್ಮ ಆರೋಗ್ಯವನ್ನು ಮತ್ತು ನಮ್ಮ ಆಯುಷ್ಯವನ್ನು ಸಹ ಹೆಚ್ಚಿಸುತ್ತದೆ.

ನಮ್ಮ ಚರ್ಮ ಸುಕ್ಕುಗಟ್ಟುವ ಸಮಸ್ಯೆಯನ್ನು ಸಹ ನಗುವುದರಿಂದ ನಾವು ದೂರಮಾಡಬಹುದು. ನೀವು ಕೆಲವರನ್ನು ನೋಡಿರುತ್ತೀರಾ, ಅವರು ಹಸನ್ಮುಖಿಯಾಗಿ ನಗುತ್ತಲೇ ಇರುತ್ತಾರೆ. ಇದರ ಉದ್ದೇಶ ಏನೆಂದರೆ ಅವರು ಎಲ್ಲಾ ವಿಷಯಗಳನ್ನು ಸಹ ತಿಳಿಯಾಗಿ ತೆಗೆದುಕೊಂಡು ಎಲ್ಲರೊಂದಿಗೆ ಬೆರೆತಿರುತ್ತಾರೆ. ಇಂತವರು ಯಾವುದೇ ಆರೋಗ್ಯ ಸಮಸ್ಯೆಗೆ ಒಳಗಾಗುವುದಿಲ್ಲ. ಸ್ನೇಹಿತರೇ ತಿಳಿಯಿತಲ್ಲವೇ, ನಗುವುದರಿಂದ ನಮಗೆ ಎಷ್ಟೆಲ್ಲಾ ರೀತಿಯ ಲಾಭಗಳು ಇದೆ ಎಂಬುದು. ಇನ್ನಾದರೂ ನಿಮಗೆ ಗಂಟು ಮುಖ ಹಾಕಿಕೊಂಡಿರುವ ಅಭ್ಯಾಸವಿದ್ದರೆ, ಸಣ್ಣ ಪುಟ್ಟ ಸಂತೋಷಗಳಿಗೂ ಸಹ ಹೆಚ್ಚಿನ ನಗುವನ್ನು ತಂದುಕೊಳ್ಳಿರಿ ಮತ್ತು ಸ್ನೇಹಿತರೊಂದಿಗೆ ಬೆರೆತು ತಮಾಷೆಯಾಗಿರಿ.

Comments are closed.