ಆರೋಗ್ಯ

ಈ ಹೂವಿನ ಆರೋಗ್ಯಕರ ಲಾಭಗಳನ್ನು ತಿಳಿದರೆ ಖಂಡಿತ ನೀವು ಆಶ್ಚರ್ಯ ಪಡುತ್ತೀರಿ

Pinterest LinkedIn Tumblr

ನಿಮಗೆ ಆರೋಗ್ಯದ ಕಾಳಜಿ ಇದ್ದರೆ ಈ ಒಂದು ಸಲಹೆಯನ್ನು ಇಟ್ಟುಕೊಳ್ಳಿ ಸಾಕು. ನಾವು ಆರೋಗ್ಯವಾಗಿ ಇರಲು ಸಾಕಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ. ಮನುಷ್ಯನ ಆರೋಗ್ಯ ಎಂಬುದು ಅತೀ ಮುಖ್ಯ ಇದು ಸರಿಯಾಗಿದ್ದರೆ ಸಂತೋಷ ಕುಶಿ ನೆಮ್ಮದಿ ಎಲ್ಲವು ಇರುತ್ತದೆ ಸ್ವಲ್ಪ ಎಚ್ಚರಕೆ ತಪ್ಪಿದರು ನೆಮ್ಮದಿ ಎಂಬುದು ಹೊರಟು ಹೋಗುತ್ತದೆ. ಗುಲಾಬಿಯನ್ನು ಇಷ್ಟ ಪಡದ ವ್ಯಕ್ತಿಗಳು ಇರುವುದಿಲ್ಲ ಆದರೆ ಗುಲಾಬಿಯಲ್ಲಿ ಇರುವ ಆರೋಗ್ಯಕರ ಲಾಭಗಳನ್ನು ತಿಳಿದರೆ ಖಂಡಿತ ನೀವು ಆಶ್ಚರ್ಯ ಪಡುತ್ತೀರಿ ಗುಲಾಬಿ ಹೂ ತನ್ನದೇ ಆದ ಗುಣಗಳನ್ನು ಹೊಂದಿದೆ.

ಈ ಹೂವು ಅಂದರೆ ಎಲ್ಲರೂ ಇಷ್ಟ ಪಡುತ್ತಾರೆ ಆದರೆ ಈ ಹೂವು ಮುಡಿಯಲು ಅಷ್ಟೆ ಅಲ್ಲ ಕೆಲವು ಆರೋಗ್ಯಕಾರಿ ಗುಣಗಳು ಸಹಾ ಹೊಂದಿದೆ. ಅವುಗಳನ್ನು ನಾವು ಹೇಳುತ್ತೇವೆ ಈ ಲೇಖನ ಪೂರ್ತಿ ಓದಿ. ಗುಲಾಬಿ ಎಲೆಯನ್ನು ಮೆಂತ್ಯೆ ಸೊಪ್ಪಿನ ಹಾಕಿ ಪೇಸ್ಟ್ ಮಾಡಿ ಅದನ್ನು ತಲೆ ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಇನ್ನೂ ಗುಲಾಬಿ ಹೂವಿನ ಕಷಾಯದ ಜೊತೆ ಸ್ವಲ್ಪ ತುಪ್ಪ ಬೆರೆಸಿ ಸೇವನೆ ಮಾಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತೆ. ಗುಲಾಬಿ ಹೂವು ಅದಕ್ಕೆ ರೋಸ್ ವಾಟರ್ ಮತ್ತು ಜೇನು ತುಪ್ಪ ಸ್ವಲ್ಪ ಶ್ರೀ ಗಂಧದ ಪುಡಿ ಸೇರಿಸಿ ಅದನ್ನು ಮುಖದ ಮೊಡವೆಗಳಿಗೆ ಹಚ್ಚಿದರೆ ಮುಖದ ಮೊಡವೆಗಳು ನಿವಾರಣೆ ಆಗುತ್ತೆ. ಗುಲಾಬಿ ಯಿಂದ ತಯಾರಾದ ಗುಲ್ಕನ್ ತಿನ್ನುವುದರಿಂದ ಹೊಟ್ಟೆ ನೋವು ಮತ್ತು ದೇಹದ ಉಷ್ಣತೆ ನಿವಾರಣೆ ಆಗುವುದು ಅಲ್ಲದೆ ಗುಲಾಬಿ ಹೂವಿನ ಕಷಾಯ ಮಾಡಿ ಕುಡಿಯುವುದರಿಂದ ಹೊಟ್ಟೆ ಹುರಿ ಮತ್ತು ಅಲ್ಸರ್ ನಿವಾರಣೆ ಆಗುತ್ತೆ. ಗುಲಾಬಿ ಟೀ ಕುಡಿಯುವುದರಿಂದ ನೆಗಡಿ ಹಾಗೂ ಒತ್ತಡ ಸಮಸ್ಯೆ ನಿವಾರಣೆಯಾಗುತ್ತದೆ.

ಬಾದಾಮಿ ಮತ್ತು ಗುಲಾಬಿ ಹೂವನ್ನು ನೀರಿನಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಅವುಗಳಿಂದ ಪೇಸ್ಟ್ ತಯಾರಿಸಿ ಅದನ್ನು ನಿರ್ಜೀವ ಚರ್ಮದ ಮೇಲೆ ಹಚ್ಚಿ ತಿಕ್ಕಿದರೆ ಅವು ಉದುರಿ ಹೋಗುತ್ತವೆ. ಗುಲಾಬಿಯ ಗುಲ್ಕಂದ್ ಸೇವಿಸುವುದರಿಂದ ಉರಿಮೂತ್ರ ಗಂತಲುನೋವು ಅಧಿಕ ರಕ್ತ ಸ್ರಾವ ರಕ್ತ ಮೂಲವ್ಯಾಧಿ ಹಾಗೂ ಬಾಯಿ ಹುಣ್ಣು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕಣ್ಣಿನ ಸುತ್ತಲೂ ಕಪ್ಪು ವರ್ತುಲ ಮೂಡಿದ್ದರೆ ಇದು ಮುಖದ ಸೌಂದರ್ಯಕ್ಕೆ ಅಡ್ಡಿಯಾಗುತ್ತದೆ. ಈ ಕಪ್ಪು ವರ್ತುಲವನ್ನು ನಿವಾರಿಸಿಕೊಳ್ಳಲು ಗುಲಾಬಿ ಎಣ್ಣೆಯನ್ನು ಕಪ್ಪಾಗಿರುವ ಜಾಗಕ್ಕೆ ಹಚ್ಚಿದರೆ ನಿವಾರಣೆ ಆಗುತ್ತದೆ.

ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಸರಿಯಾಗಿ ನಿದ್ದೇನೆ ಬರುವುದಿಲ್ಲ ಅನ್ನೋರಿಗೆ ಗುಲಾಬಿಯ ಈ ಬಳಕೆ ಸಹಕಾರಿ ಯಾಗಿದೆ. ಮಲಗುವ ಮುನ್ನ ದಿಂಬಿಗೆ ಅಥವಾ ಹಾಸಿಗೆಗೆ ಗುಲಾಬಿ ಎಣ್ಣೆಯನ್ನು ಸಿಂಪಡಿಸಿ ಮಲಬೇಕು ಅತಿವೇಗ ನಿದ್ರೆ ಬರುವುದರ ಜೊತೆಗೆ ಸುಖ ನಿದ್ರೆ ನಿಮ್ಮದಾಗುವುದು. ಒಟ್ಟಿನಲ್ಲಿ ಗುಲಾಬಿಯಲ್ಲಿ ನಮಗೆ ತಿಳಿಯದ ಅದೆಷ್ಟೋ ಆರೋಗ್ಯಕಾರಿ ಪ್ರಯೋಜನಗಳು ಇದ್ದು ಅವುಗಳನ್ನು ನಾವು ಪಡೆಯುವಲ್ಲಿ ವಿಫಲರಾಗಿದ್ದೇವೆ. ಇನ್ನೂ ಮುಂದೆ ಆದರೂ ಗುಲಾಬಿಯ ಆರೋಗ್ಯಕರ ಪ್ರಯೋಜನಗಳು ತಿಳಿದುಕೊಳ್ಳಿ.

Comments are closed.