ಆರೋಗ್ಯ

ಅಕ್ಕಿ ಹಿಟ್ಟಿನ ಈ ವಿಧಾನವನ್ನು ಬಳಸಿ, ಸ್ಕಿನ್ ಟೋನ್ ಹೆಚ್ಚಿಸಿಕೊಳ್ಳಿ…!

Pinterest LinkedIn Tumblr

ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಲಲು ಸಾಕಷ್ಟು ಮಂದಿ ಹಲವು ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಆದ್ರೆ ಮುಖ ಹೇಗೆ ಇರುತ್ತೋ ಹಾಗೆ ಇರುತ್ತದೆ ಹಾಗಾಗಿ ಈ ವಿಧಾನವನ್ನು ಬಳಸಿ ನೋಡಿ ನಿಮ್ಮ ಮುಖ ಹಲವು ರೀತಿಯ ಬದಲಾವಣೆಯನ್ನು ಕಾಣುತ್ತದೆ.

ನಿಮ್ಮ ಮುಖ ಕಪ್ಪಾಗಿದೆ ಅನ್ನೋ ಚಿಂತೆ ಬಿಡಿ ಈ ಅಕ್ಕಿ ಹಿಟ್ಟಿನ ವಿಧಾನವನ್ನು ಬಳಸಿ ನಿಮ್ಮ ಮುಖ ಬೆಳ್ಳಗಾಗುತ್ತೆ ಹೇಗೆ ಅನೋದು ಇಲ್ಲಿದೆ ನೋಡಿ.

ಅಕ್ಕಿ ಹಿಟ್ಟಿನಲ್ಲಿ ಚರ್ಮದ ಮೆಲನಿನ್ ಅಂಶವನ್ನು ಕಡಿಮೆ ಮಾಡುವ ತೈರೊಸೈನೇಸ ಅಂಶವಿದೆ. ಇದರಲ್ಲಿರುವ ವಿಟಮಿನ್ ಬಿ ಹೊಸ ಕೋಶಗಳ ಉತ್ಪತ್ತಿ ಮಾಡುತ್ತದೆ ಹಾಗೂ ಸುಕ್ಕಾಗುವುದನ್ನ ತಡೆಯುತ್ತದೆ. ಇದ್ದು ಹೆಚ್ಚಿನ ಎಣ್ಣೆ ಅಂಶವನ್ನು ತೆಗುದು ಹಾಕಿ ಮುಖವು ಕಾಂತಿಯುತವಾಗಿ ಕಾಣಲು ಸಹಕರಿಸುತ್ತದೆ. ಆಗಾಗಿ ನಿಮ್ಮ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದು.

ಅಕ್ಕಿ ಹಿಟ್ಟು ಮತ್ತು ಹಾಲು
ಮೊದಲು ಒಂದು ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ ಪೇಸ್ಟ್ ತಯಾರಿಸಿ ಕೊಳ್ಳಿ ನಂತರ ಇದನ್ನ ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣೀರಿನ ಸಹಾಯದಿಂದ ನಿದಾನವಾಗಿ ಮಸಾಜ್ ಮಾಡಿ ಸ್ವಚ್ಛಗೊಳಿಸಿ.

ಅಕ್ಕಿ ಹಿಟ್ಟು ಮತ್ತು ನಿಂಬೆ ರಸ
ನಾಲ್ಕು ಚಮಚ ಅಕ್ಕಿ ಹಿಟ್ಟಿಗೆ ಚಿಟಿಕೆ ಅರಿಶಿನ ಹಾಗೂ 3 ಚಮಚ ನಿಂಬೆರಸ ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿ ಕೊಳ್ಳಿ, 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಅಕ್ಕಿ ಹಿಟ್ಟು ಮತ್ತು ಲೋಳೆರಸ
ಲೋಳೆರಸ ಹಾಗೂ ಅಕ್ಕಿ ಹಿಟ್ಟನ್ನ ಮಿಶ್ರಣಮಾಡಿ ಸ್ವಲ್ಪ ಹೊತ್ತು ಬಿಟ್ಟು ಮುಖಕ್ಕೆ ಹಚ್ಚಿಕೊಳ್ಳಿ ಅದು ಒಣಗಿದ ನಂತರ ತಣ್ಣೀರಿನಿಂದ ಮುಖತೊಳೆಯಿರಿ.

Comments are closed.