ಆರೋಗ್ಯ

ಕೈ, ಕಾಲಿಗೆ ಮೆಹಂದಿ ಹಚ್ಚಿಕೊಳ್ಳುವ ಮೊದಲು ತಪ್ಪದೆ ಇವುಗಳನ್ನು ಪಾಲಿಸಿ

Pinterest LinkedIn Tumblr

ಹೆಣ್ಣು ಮಕ್ಕಳಿಗೆ ಕೈ ತುಂಬಾ ಮೆಹಂದಿ ಹಚ್ಚಿಕೊಳ್ಳುವುದು ಅಂದರೆ ಏನೋ ಒಂದು ರೀತಿಯ ಆನಂದ ಆ ಮೆಹಂದಿ ಒಣಗಿ ಬಣ್ಣ ಚೆನ್ನಾಗಿ ಬರಲು ಎಂಬ ಕಾರಣಕ್ಕೆ ಎಷ್ಟು ಸಮಯ ಬೇಕಾದರೂ ಅದನ್ನು ಕೈಯಲ್ಲಿ ಇಟ್ಟು ಕೊಂಡು ಇರುತ್ತಾರೆ. ಅದರಲ್ಲೂ ಶುಭ ಸಮಾರಂಭಗಳಲ್ಲಿ ಯಾವ ಹೆಣ್ಣು ಮಕ್ಕಳ ಕೈಯನ್ನು ನೋಡಿದರು ಅವರ ಕೈಯಲ್ಲಿ ಮೆಹಂದಿ ರರಾಜಿಸುತ್ತಿರುತ್ತದೆ ಹಾಗೆಯೇ ಮೆಹಂದಿ ಹಾಕಿಕೊಂಡಿರುವ ಹೆಣ್ಣು ಮಕ್ಕಳ ಕೈಯನ್ನು ನೋಡಲೇ ಒಂದು ಚಂದ. ಹಾಗೆಯೇ ಮದುವೆ ಆಗುವ ಹೆಣ್ಣು ಮಗಳಿಗೆ ಕೈ ತುಂಬಾ ಮೆಹಂದಿ ಹಾಕಿ ಅದು ತುಂಬಾ ಬಣ್ಣ ಬಂದರೆ ಅವರ ದಾಂಪತ್ಯದ ಜೀವನದಲ್ಲಿ ಅವರ ಗಂಡ ಅವರನ್ನು ತುಂಬಾ ಪ್ರೀತಿಸುತ್ತಾರೆ ಎಂದು ಕೂಡ ಹೇಳುತ್ತಾರೆ ಅದಕ್ಕಾಗಿ ಮದುವೆಯಲ್ಲಿ ಹೆಣ್ಣು ಮಗಳು ತನ್ನ ಅಲಂಕಾರದಲ್ಲಿ ಮೆಹಂದಿಗೂ ಕೂಡ ತುಂಬಾ ಪ್ರಾಮುಖ್ಯತೆ ನೀಡುತ್ತಾಳೆ ಅದಕ್ಕಾಗಿ ಮೆಹಂದಿಯನ್ನು ಕೈಗೆ ಮಾತ್ರ ಅಲ್ಲದೆ ಕಾಲಿಗೂ ಕೂಡ ಹಚ್ಚಿಕೊಳ್ಳುತ್ತಾರೆ.

ಆದರೆ ಮೆಹಂದಿಯನ್ನು ಹಚ್ಚಿಕೊಳ್ಳಬೇಕು ಎಂದು ಹೇಗೋ ಹೇಗೋ ಹಚ್ಚಿಕೊಳ್ಳಲು ಸಾಧ್ಯವಿಲ್ಲ ಮೆಹಂದಿ ಹಚ್ಚಿಕೊಳ್ಳಲು ಕೂಡ ಒಂದು ಕ್ರಮ ಇದೆ ಅದನ್ನು ಪಾಲಿಸಬೇಕು. ಹಿಂದಿನ ಕಾಲದಲ್ಲಿ ಮೆಹಂದಿಯನ್ನು ಮನೆಯಲ್ಲೇ ತಯಾರು ಮಾಡುತ್ತಿದ್ದರು ಮೆಹಂದಿ ಸೊಪ್ಪು ಸಿಗುತ್ತಿತ್ತು ಅದನ್ನು ನುಣ್ಣಗೆ ಅರೆದು ಅದು ಚೆನ್ನಾಗಿ ಬಣ್ಣ ಬರಲಿ ಎಂದು ಅದಕ್ಕೆ ಇನ್ನಿತರ ಪದಾರ್ಥಗಳನ್ನು ಬೆರೆಸಿ ಅದನ್ನು ಕೈಯಗೆ ಹಚ್ಚಿಕೊಳ್ಳುತ್ತಿದ್ದರು

ಆದರೆ ಇಂದು ಮೆಹಂದಿಯನ್ನು ಅಂಗಡಿಯಿಂದ ತರುತ್ತಾರೆ ಆದರೆ ಅದನ್ನು ತರುವ ಮುಂಚೆ ಅದರ ಗುಣಮಟ್ಟ ಹಾಗೂ ಎಕ್ಸ್ ಪೈರಿ ದಿನಾಂಕವನ್ನು ತಪ್ಪದೇ ನೋಡಿ ತರಬೇಕು. ಕೈಗಳಿಗೆ ಮೆಹೆಂದಿಯನ್ನು ಹಚ್ಚಿಕೊಳ್ಳುವ ಮುನ್ನ ನಿಮ್ಮ ಕೈಗೆ ಯಾವ ಡಿಸೈನ್ ಚೆನ್ನಾಗಿ ಕಾಣಿಸುತ್ತದೆ ಎಂದು ನಿರ್ಧಾರ ಮಾಡಿ ನಂತರ ಹಚ್ಚಿಕೊಳ್ಳಿ. ಮೆಹಂದಿ ಹಚ್ಚಿಕೊಳ್ಳುವ ಮೊದಲು ನಿಮ್ಮ ಕೈ ಮೇಲೆ ಜಿಡ್ಡು ಹಾಗೂ ಎಣ್ಣೆಯಂತಹ ಅಂಶವಿದ್ದರೆ ಮೊದಲು ಅದನ್ನು ಸ್ವಚ್ಛ ಮಾಡಿಕೊಂಡು ನಂತರ ಮೆಹಂದಿ ಹಚ್ಚಿಕೊಳ್ಳಿ.

ಮೆಹಂದಿ ಹಚ್ಚುವಾಗ ಕೆಲವೊಮ್ಮೆ ಡಿಸೈನ್ಗಳು ತಪ್ಪುವುದು ಸಾಮಾನ್ಯ ಆದ ಕಾರಣ ಒಂದು ಹತ್ತಿಯ ತುಣುಕನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು. ಮೆಹಂದಿ ಬಣ್ಣವು ಚೆನ್ನಾಗಿ ಬರಲು ಮೆಹಂದಿ ಹಚ್ಚಿದ ನಂತರ ಕನಿಷ್ಠ ಪಕ್ಷ ಎರಡು ಗಂಟೆಯಾದರೂ ಅದನ್ನು ಒಣಗಿಸಬೇಕು. ಮೆಹಂದಿಯ ಬಣ್ಣ ಗಾಢವಾಗಿ ಕಾಣಲು ಅದಕ್ಕೆ ನಿಂಬೆ ರಸಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡಿ ಸ್ವಲ್ಪ ಬಿಸಿ ಮಾಡಿ ಹತ್ತಿಯನ್ನು ಬಳಸಿ ಮೆಹೆಂದಿಯ ಮೇಲೆ ಲೇಪಿಸಬೇಕು,

ಮೆಹಂದಿಯನ್ನು ನೀರಿನಲ್ಲಿ ತೊಳೆಯುವ ಬದಲು ಅದನ್ನು ಹಾಗೆ ಉದುರಿಸಿ. ನಂತರ ಅದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೊಳ್ಳಿ ಇದರಿಂದಲೂ ಬಣ್ಣ ಗಾಢವಾಗುತ್ತದೆ. ನಿಮ್ಮ ಕೈಗೆ ಮೆಹಂದಿ ಹಚ್ಚಿ ಕೊಳ್ಳುವ ಮುಂಚೆ ನಿಮ್ಮ ಕೈಯಲ್ಲಿ ಕಪ್ಪು ಕೂದಲು ಹೆಚ್ಚು ಇದ್ದರೆ ಅದನ್ನು ಮೊದಲು ತೆಗೆದು ನಂತರ ಮೆಹಂದಿ ಹಚ್ಚಿಕೊಳ್ಳಿ. ಹೀಗೆ ಮಾಡಿದರೆ ಹಚ್ಚಿಕೊಳ್ಳುವ ಮೆಹಂದಿ ಸುಂದರವಾಗಿ ಕಾಣಿಸುತ್ತದೆ ಹಾಗೂ ಅದರ ಬಣ್ಣ ಕೂಡ ಗಾಢವಾಗಿ ಇರುತ್ತದೆ ಹಾಗೂ ಕನಿಷ್ಠ ಪಕ್ಷ ಒಂದರಿಂದ ಎರಡು ವಾರಗಳು ಈ ಮೆಹಂದಿ ಕೈಯಲ್ಲಿ ಹಾಗೆ ಇರುತ್ತದೆ ಹಾಗಾಗಿ ಮೆಹಂದಿ ಹಚ್ಚಿಕೊಳ್ಳುವ ಮೊದಲು ತಪ್ಪದೆ ಇವುಗಳನ್ನು ಪಾಲಿಸಿ.

Comments are closed.