ಆರೋಗ್ಯ

ಸೌಂದರ್ಯದ ಜೊತೆ ಆರೋಗ್ಯವನ್ನು ಕಾಪಾಡುವ ವಿಧಾನಗಳು

Pinterest LinkedIn Tumblr

ಸೌಂದರ್ಯ ನೋಡುವ ಕಣ್ಣಿನಲ್ಲಿರುತ್ತದೆ ಅಂತ ಹೇಳ್ತಾರೆ ಆದರೂ ಎಲ್ಲರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿವಹಿಸುತ್ತಾರೆ …. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಕೆಮಿಕಲ್ ನಿಂದ ಕೂಡಿದ ಸೌಂದರ್ಯ ವರ್ದಕಗಳನ್ನು ಬಳಸಿ ತ್ವಚೆಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗದರೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ಸೌಂದರ್ಯದ ಜೊತೆ ಆರೋಗ್ಯವನ್ನು ಕಾಪಡುವ ಬಯಕೆಯೇ ಹಾಗದರೆ ಮುಂದೆ ಓದಿ..

1)ಎಣ್ಣೆ ಚರ್ಮದ ಮುಖದವರಿಗೆ ಮೊಡವೆಗಳದೆ ಸಮಸ್ಯೆ ಅದನ್ನು ಹೋಗಿಸಲು ಒಂದು ಚಮಚ ಬೇಕಿಂಗ್ ಸೋಡಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ ಮೊಡವೆಗಳಿಗೆ ಹಚ್ಚಿ ಹದಿನೈದು ನಿಮಿಷದ ನಂತರ ಒದ್ದೆ ಬಟ್ಟೆಯಿಂದ ಒರೆಸಿ ಇದರಿಂದ ಕಲೆಗಳಿಲ್ಲದಂತೆ ಮೊಡವೆಗಳು ವಾಸಿಯಾಗುತ್ತದೆ.

2)ಬಾಳೆಹಣ್ಣಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಹೇರಳವಾಗಿದೆ ನಿಯಮಿತವಾಗಿ ಬಾಳೆಹಣ್ಣು ತಿನ್ನುವುದರಿಂದ ಬಡಕಲು ಶರೀರ ಪುಷ್ಟಿಗೊಳ್ಳುವುದು.

3)ಬಾಳೆಹಣ್ಣಿನ ಸಿಪ್ಪೆಯನ್ನು ನಿಯಮಿತವಾಗಿ ಉಜ್ಜಿದರೆ ನರೋಲಿ ಉದುರುತ್ತದೆ.

4)ಮುಖದಲ್ಲಿ ಅಲರ್ಜಿಯಿಂದ ಕೆಂಪು ಕಲೆಗಳಾಗಿ ತುರಿಕೆ ಉಂಟು ಮಾಡುತ್ತಿದ್ದರೆ ಸ್ವಲ್ಪ ಓಟ್ಸ್ ಪುಡಿಯನ್ನು ಜೇನುತುಪ್ಪದಲ್ಲಿ ಕಲೆಸಿ ಮೃದುವಾಗಿ ಹಚ್ಚಿ ಹದಿನೈದು ನಿಮಿಷದ ನಂತರ ತೊಳೆಯಿರಿ.

6)ಭಂಗು ಬೆಳ್ಳನೆಯ ಮುಖದ ಸೌಂದರ್ಯವನ್ನು ಹಾಳುಮಾಡುತ್ತದೆ ಆ ಜಾಗಕ್ಕೆ ಒಂದು ಚಮಚ ಬೆಲ್ಲ ಒಂದು ಚಮಚ ಬೆಣ್ಣೆ ಸೇರಿಸಿ ಹಚ್ಚುತ್ತ ಬಂದರೆ ಅದು ಕ್ರಮೇಣ ಮಾಯವಾಗುತ್ತದೆ.

Comments are closed.