ಆರೋಗ್ಯ

ಈ ಕಾಯಿ ಕಪ್ಪಾಗಿದ್ದನ್ನು ಬೆಳ್ಳಗಾಗಿಸುತ್ತೆ, ಬೆಳ್ಳಗಾಗಿದ್ದನ್ನು ಕಪ್ಪಾಗಿಸುತ್ತೆ..!

Pinterest LinkedIn Tumblr

ನಿಮ್ಮ ಕೂದಲಿಗೆ ಮತ್ತು ನಿಮ್ಮ ಚರ್ಮಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ನಿಮ್ಮ ಕೂದಲನ್ನು ಕಪ್ಪಾಗಿ ಮಾಡುತ್ತದೆ ಮತ್ತು ದಪ್ಪ ಮಾಡುತ್ತದೆ. ಅದರ ಜೊತೆಗೆ ನಿಮ್ಮ ಮುಖವನ್ನು ಬೆಳ್ಳಗೆ ಹಾಗುವಂತೆ ಮಾಡುತ್ತದೆ ಈ ನೆಲ್ಲಿಕಾಯಿ. ಇದನ್ನು ಬಳಸುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ನೆಲ್ಲಿಕಾಯಿಯನ್ನು ಗ್ರೈಂಡ್‌ ಮಾಡಿ ಪೇಸ್ಟ್ ತಯಾರಿಸಿ ಅದನ್ನು ನೀರಿನೊಂದಿಗೆ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿ. ಹೀಗೆ ವಾರಕ್ಕೊಮ್ಮೆ ಮಾಡೋದರಿಂದ ಕೂದಲು ಉದುರುವುದು, ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

ನೆಲ್ಲಿಕಾಯಿಯನ್ನುಒಣಗಿಸಿ ಇದರ ಹುಡಿ ತಯಾರಿಸಿ ಒಂದು ಡಬ್ಬದಲ್ಲಿ ಹಾಕಿಡಿ, ಅಗತ್ಯವಿದ್ದಾಗ ಅದಕ್ಕೆ ಸ್ವಲ್ಪ ನೀರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ಬಿಳಿಯಾಗುತ್ತದೆ.

ಮೂರು ಚಮಚ ನೆಲ್ಲಿಕಾಯಿ ಹುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚೋದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ನೆಲ್ಲಿಕಾಯಿ ಜ್ಯೂಸ್‌ನ್ನು ಅಲವೇರಾ ಜ್ಯೂಸ್ ಅಥವಾ ಮುಳ್ಳು ಸೌತೆ ರಸದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚೋದರಿಂದ ಮುಖ ಬೆಳ್ಳಗಾಗುತ್ತದೆ. ಜೊತೆಗೆ ಪಿಂಪಲ್ಸ್ ನಿವಾರಣೆಯಾಗುತ್ತದೆ. ಮುಖಕ್ಕೆ ನೆಲ್ಲಿಕಾಯಿ ಜ್ಯೂಸ್ ಬಳಸೋವಾಗ, ತಾಜಾ ನೆಲ್ಲಿಕಾಯಿ ಜ್ಯೂಸ್‌ನ್ನೇ ಬಳಸಿ.

Comments are closed.