ಆರೋಗ್ಯ

ಶುಷ್ಕ ಕೂದಲು ಮತ್ತು ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಈ ರೀತಿ ಮಾಡುವುದು ಉತ್ತಮ.

Pinterest LinkedIn Tumblr

ಈಗಿನ ಯುವ ಪೀಳಿಗೆಗೆ ಕೂದಲಿನ ಬಗ್ಗೆ ಚಿಂತೆ ಯಾಕೆಂದರೆ ಬದಲಾದ ಹವಾಮಾನದಲ್ಲಿ ಹಲವಾರು ಕಾರಣಗಳಿಂದ ಕೂದಲುಗಳು ಉದುರುತ್ತಲಿವೆ ಅವುಗಳನ್ನು ತಡೆಯುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ ಆದ್ದರಿಂದ ಅದಕ್ಕೆ ಸುಲಭವಾದ ಉಪಾಯವನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಕೂದಲನ್ನು ಹೆಚ್ಚಾಗಿ ತೊಳೆಯುವುದರಿಂದ ಕೂದಲಿನ ಮಾಯಿಶ್ಚರ್‌ ಆರಿ ಹೋಗುತ್ತದೆ. ಇದರಿಂದ ತಲೆಹೊಟ್ಟು ಹೆಚ್ಚುತ್ತದೆ. ಆದುದರಿಂದ ವಾರದಲ್ಲಿ 2-3 ಬಾರಿ ಮಾತ್ರ ಕೂದಲು ತೊಳೆದುಕೊಳ್ಳುವುದರಿಂದ ಉದುರುವಿಕೆಯನ್ನು ಕಡಿಮೆ ಮಾಡಬಹುದು. ಚಳಿ ಆರಂಭವಾದಾಗ ತಲೆ ಕೂದಲನ್ನು ತೊಳೆಯುವ ಮುನ್ನ ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್‌ ಮಾಡಬೇಕು,ಇದರಿಂದ ಕೂದಲು ಡ್ರೈ ಆಗುವುದು ಮತ್ತು ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ವಾರದಲ್ಲಿ 2-3 ಬಾರಿ ಮಾಡುವುದು ಉತ್ತಮ.

ಹೀಟರ್ ಬ್ಲೋ ಡ್ರೈಯರ್‌ ಸ್ಟ್ರೇಟ್ನಿಂಗ್ ಕರ್ಲಿಂಗ್‌ ಮೊದಲಾದ ಸ್ಟೈಲಿಂಗ್‌ ಸಲಕರಣೆಗಳ ಬಳಕೆ ಮಾಡುವುದು ಕೂದಲಿಗೆ ಅಷ್ಟೊಂದು ಆರೋಗ್ಯಕರವಲ್ಲ, ಒಂದು ವೇಳೆ ಬಳಕೆ ಮಾಡಿದರೂ ಹೀಟ್‌ ಪ್ರೊಟೆಕ್ಟೆಂಟ್‌ ಹಚ್ಚುವುದನ್ನು ಮರೆಯಬೇಡಿ. ಇದಾದ ನಂತರ ಸ್ವಲ್ಪ ಆಲಿವ್‌ ಆಯಿಲ್‌ ಕೈಯಲ್ಲಿ ತೆಗೆದುಕೊಂಡು ಕೂದಲಿಗೆ ಹಚ್ಚಿ. ಇದರಿಂದ ಕೂದಲು ಡ್ರೈ ಆಗೋದಿಲ್ಲ ಮತ್ತು ಉದುರುವುದಿಲ್ಲ.

ಒಣ ಕೂದಲಿಗೆ ಡೀಪ್‌ ನರೀಶ್‌ಮೆಂಟ್‌ ಮತ್ತು ಮಾಯಿಶ್ಚರ್‌ನ ಅಗತ್ಯವಿದೆ. ಅದಕ್ಕಾಗಿ ರೆಗ್ಯುಲರ್‌ ಆಗಿ ಕಂಡೀಶನ್‌ ಮಾಡಿ. ಇದಕ್ಕಾಗಿ ನೀವು ಮೊಟ್ಟೆ, ಮೊಸರು, ಅವಕಾಡೋ ಬಳಕೆ ಮಾಡಿ ಕೂದಲಿಗೆ ಪೋಷಣೆ ನೀಡಿ ಮತ್ತು ಚಳಿಗಾಲದಲ್ಲಿ ಸಾಧ್ಯವಾದಷ್ಟು ಹರ್ಬಲ್‌ ಪ್ರಾಡಕ್ಟ್‌‌ಗಳ ಬಳಕೆ ಮಾಡಿ. ಯಾಕೆಂದರೆ ಇತರ ಪ್ರಾಡಕ್ಟ್‌ಗಳಲ್ಲಿ ಕೆಮಿಕಲ್‌ ಇರುತ್ತದೆ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಇದರ ಜೊತೆಗೆ ಜೇನು ಒಂದು ಪ್ರಾಕೃತಿಕ ಮಾಯಿಶ್ಚರೈಸರ್‌ ಎನ್ನಬಹುದು. ಇದು ಚಳಿಗಾಲದಲ್ಲಿ ನಿಮ್ಮ ಕೂದಲು ತೇವವನ್ನು ಹೊಂದಲು ಸಹಾಯ ಮಾಡುತ್ತದೆ. ಸ್ನಾನ ಮಾಡುವ ಒಂದು ಗಂಟೆಯ ಮೊದಲು ಇದನ್ನು ಕೂದಲಿಗೆ ಹಚ್ಚಿ, ನಂತರ ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಕೂದಲು ಸದೃಢವಾಗುತ್ತದೆ.

Comments are closed.