ಆರೋಗ್ಯ

ಮಹಿಳೆಯರಿಗೆ ಮುಟ್ಟಿನ ನೋವಿನ ಸಮಯದಲ್ಲಿ ಈ ಹೂವಿನ ಚಹಾ ಕುಡಿದರೆ ಉತ್ತಮ

Pinterest LinkedIn Tumblr

ಅಲಂಕಾರಿಕ ಹೊವಿನಲ್ಲಿ ಸಾಕಷ್ಟು ರೀತಿಯ ಲಾಭ ಇದೆ ಅಂದ್ರೆ ನೀವು ನಂಬಲೇ ಬೇಕು. ನಮ್ಮ ಭಾರತ ದೇಶದಲ್ಲಿ ಹೊವಿಗೆ ವಿಶೇಷ ಸ್ಥಾನಮಾನ ಇದೆ. ನಮ್ಮ ಹಿಂದಿನ ಕಾಲದ ಜನರು ಕೆಲವು ಹೊವಿನಿಂದ ಆಯುರ್ವೇದ ಮದ್ದು ಮಾಡಿ ಖಾಯಿಲೆ ಬಂದಾಗ ಗುಣ ಮಾಡಿಕೊಳ್ಳುತ್ತಾ ಇದ್ದರು. ನಮ್ಮಲ್ಲಿ ಸೊಪ್ಪು ತರಕಾರಿಗೆ ಹೇಗೆ ವಿಶೇಷ ಸ್ಥಾನ ಮಾನ ನೀಡಿದ್ದೇವೆ ಅದೇ ರೀತಿ ಹೊವಿನ ಬಗ್ಗೆ ಸ್ವಲ್ಪ ಕಾಳಜಿ ತೆಗೆದುಕೊಂಡರೆ ಮತ್ತಷ್ಟು ಉಪಯೋಗ ಪಡೆಯಬಹುದು. ನಾವೂ ನಿಮಗೆ ಇಂದು ತಿಳಿಸುತ್ತಾ ಇರೋದು ಚಂಡು ಹೂವಿನ ಬಗ್ಗೆ ನೀವು ಈ ಹೂವು ಬಳಕೆ ಮಾಡಿಕೊಂಡು ಏನೆಲ್ಲಾ ಲಾಭ ಪಡೆಯಬಹುದು. ಒಂದು ರುಪಾಯಿ ಹಣ ಖರ್ಚು ಮಾಡದೆ ಈ ರೀತಿಯ ಹತ್ತು ಹಲವು ಲಾಭಗಳು ಪಡೆಯಿರಿ ನಾವು ತಿಳಿಸಿರುವ ಈ ಎಲ್ಲ ಮನೆ ಮದ್ದು ಮರೆಯದೇ ಓದಿ.

ನಮ್ಮಲ್ಲಿ ಯುವತಿಯರು ಬಿಸಿಲಿನ ತಾಪಕ್ಕೆ ಮುಖ ಬಾಡುತ್ತದೆ ಎಂದು ಸ್ಕಿನ್ ಬರ್ನ್ ಆಗದಂತೆ ಹಲವು ರೀತಿಯ ಕ್ರೀಮ್ ಹಚ್ಚುವುದು ನಿಮಗೆ ತಿಳಿದ ವಿಷ್ಯ. ಆದರೆ ನೀವು ಈ ಚಂಡು ಹೂವಿನ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಎರಡು ರೀತಿಯ ಲಾಭ ಪಡೆಯುತ್ತೀರಿ ಮೊದಲನೇದಾಗಿ ನಿಮ್ಮ ಮುಖಕ್ಕೆ ಸೂರ್ಯನ ಕಿರಣಗಳಿಂದ ಮುಕ್ತಿ ನೀಡಲಿದೆ ಮತ್ತೊಂದು ಅನೇಕ ವರ್ಷಗಳಿಂದ ಉಳಿದುಕೊಂಡಿರುವ ಮುಖದ ಮೇಲಿನ ಕಲೆಗಳು ಕಡಿಮೆ ಆಗಲಿದೆ. ಜೊತೆಗೆ ಮೊಡವೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹೇಳಬಹುದು.

ಮಹಿಳೆಯರಿಗೆ ಮುಟ್ಟಿನ ನೋವು ಸಮಸ್ಯೆಗಳು ತುಂಬಾ ಇರುತ್ತದೆ. ಹಲವು ರೀತಿಯ ಸೂಕ್ತ ವೈದ್ಯಕೀಯ ಮದ್ದು ಮಾಡಿದರು ಸಹ ಈ ಮುಟ್ಟಿನ ನೋವು ಮಾತ್ರ ಕಡಿಮೆ ಆಗುವುದಿಲ್ಲ ಈ ಒಂದು ಸಮಸ್ಯೆಗಳು ಕಡಿಮೆ ಆಗಬೇಕು ನೋವು ಹತೋಟಿಗೆ ಬರಬೇಕು ಅಂದ್ರೆ ಚಂಡು ಹೂವನ್ನು ನೀರಿನಲ್ಲಿ ಎರಡು ಗಂಟೆ ನೆನೆಸಿ ನಂತರ ಬಿಸಿಲಿನಲ್ಲಿ ಒಣಗಿಸಿ ಇದರ ಪುಡಿಯಿಂದ ಒಂದಿಷ್ಟು ಚಹಾ ಮಾಡಿಕೊಂಡು ಮುಟ್ಟಿನ ನೋವಿನ ಸಮಯದಲ್ಲಿ ಕುಡಿದರೆ ಸಾಕಷ್ಟು ಪರಿಣಾಮ ಬೀರಲಿದೆ. ಇದರ ಜೊತೆಗೆ ಕೈಕಾಲು ಸೆಳೆತದ ಸಮಸ್ಯೆಗಳು ಇದ್ದರೆ ಅವುಗಳು ಸಹ ಕಡಿಮೆ ಆಗಲಿದೆ.

ಚಂಡು ಹೂವು ನೀರಿನಲ್ಲಿ ನೆನೆಸಿಟ್ಟು ಹಾಗೆಯೇ ಅರ್ಧ ದಿನ ಬಿಟ್ಟು ನಂತರ ಆ ನೀರನ್ನು ನೀವು ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಇರುವ ಜಂತುಹುಳು ಸಮಸ್ಯೆಗಳು ಕಡಿಮೆ ಆಗಲಿದೆ. ಹಲವು ದಿನಗಳಿಂದ ಗಾಯದ ಸಮಸ್ಯೆಗಳು ಇದ್ದರೆ ಅವುಗಳು ಒಣಗುತ್ತಾ ಇಲ್ಲ ಅಂದ್ರೆ ಚಂಡು ಹೂವಿನ ಎಣ್ಣೆ ಗ್ರಂಧಗಿ ಅಂಗಡಿಯಲ್ಲಿ ದೊರೆಯುತ್ತದೆ ಅದನ್ನ ನೀವೂ ಬಳಕೆ ಮಾಡಿಕೊಂಡು ಒಣಗದೇ ಇರೋ ಗಾಯವನ್ನ ಸಂಪೂರ್ಣವಾಗಿ ಗುಣ ಮಾಡಿಕೊಳ್ಳಬಹುದು. ಹಾಗೆಯೇ ಚಂಡು ಹೂವು ನೆನೆಸಿದ ನೀರಿಂದ ಬಾಯಿ ಮುಕ್ಕಲಿಸಿದ್ರೆ ಬಾಯಲ್ಲಿ ಬ್ಯಾಕ್ಟಿರಿಯ ಸಮಸ್ಯೆಗಳು ಕಡಿಮೆ ಆಗುತ್ತದೆ. ವಸುಡಿಗೆ ತೊಂದ್ರೆ ಆಗುತ್ತಾ ಇದ್ದರೆ ಈ ಸಮಸ್ಯೆಗಳನ್ನ ಸಹ ಕಡಿಮೆ ಮಾಡಲಿದೆ.

Comments are closed.