ಆರೋಗ್ಯ

ಮೆಕ್ಕೆ ಜೋಳ ತಿನ್ನುವ ಜನರಿಗಾಗಿ ಈ ವಿಶೇಷವಾದ ಆರೋಗ್ಯ ಮಾಹಿತಿಗಳು

Pinterest LinkedIn Tumblr

ಮುಸುಕಿನ ಜೋಳ ಅಂದರೆ ಸಾಕು ಬಾಯಿಯಲ್ಲಿ ನೀರು ಬರುತ್ತದೆ ಆ ಮುಸುಕಿನ ಜೋಳವನ್ನು ಬೇಯಿಸಿಕೊಂಡು ಅಥವಾ ಸುಟ್ಟಿಕೊಂಡು ತಿಂದರೆ ಆ ರುಚಿಯೇ ಬೇರೆ. ಮುಸುಕಿನ ಜೋಳವನ್ನು ಮೆಕ್ಕೆ ಜೋಳ ಅಥವಾ ಕಾರ್ನ್ ಅಂತಾ ಕೂಡ ಕರೆಯುತ್ತಾರೆ. ಇದನ್ನು ಭೂಮಿಯ ಮೇಲೆ ವ್ಯಾಪಕವಾಗಿ ಬೆಳೆಯುವಂತಹ ಏಕದಳ ಬೆಳೆಯಾಗಿದೆ. ಇದನ್ನು ಬೆಳೆಯುವುದರಿಂದ ಲಾಭ ಕೂಡ ಸಿಗುತ್ತದೆ ಜೊತೆಗೆ ಇದನ್ನು ಸೇವಿಸುವುದರಿಂದ ಕೂಡ ಹಲವಾರು ಉಪಯೋಗವನ್ನು ಪಡೆಯಬಹುದು ಈ ಮುಸುಕಿನ ಜೋಳದಿಂದ ಹಲವಾರು ರೀತಿಯ ಸೂಪ್ ಅನ್ನು ತಯಾರಿಸಬಹುದು ಜೊತೆಗೆ ಇದರಿಂದ ಪಲ್ಯ ಕೂಡ ಮಾಡುತ್ತಾರೆ. ಪಿಜ್ಜಾ ಗು ಕೂಡ ಇದನ್ನು ಬಳಕೆ ಮಾಡುತ್ತಾರೆ.

ಇದರ ಜೊತೆಗೆ ಮುಸುಕಿನ ಜೋಳದ ತರಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಇದನ್ನು ಬಳಕೆ ಮಾಡುವುದರಿಂದ ಎಷ್ಟೆಲ್ಲ ರೀತಿಯ ಲಾಭವನ್ನು ಪಡೆಯಬಹುದು ಎಂದು ನೋಡೋಣ ಬನ್ನಿ. ಮುಸುಕಿನ ಜೋಳದ ತರಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಬಿ ಇದ್ದು. ಇದು ನಮ್ಮ ದೇಹವನ್ನು ಲವಲವಿಕೆಯಿಂದ ಇರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣವನ್ನು ಉತ್ಪತ್ತಿಯಾಗಲು ನೆರವಾಗುತ್ತದೆ. ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗುವ ರೋಗಗಳನ್ನು ತಡೆಯುತ್ತದೆ. ಮುಸುಕಿನ ಜೋಳದ ತರಿಯಲ್ಲಿ ಕ್ಯಾಲೋರಿ ಅಂಶ ಕಡಿಮೆ ಇದ್ದು ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಮುಸುಕಿನ ಜೋಳದ ತರಿಯಲ್ಲಿ ನಾರಿನಂಶ ಅಧಿಕವಾಗಿದ್ದು ಇದು ದೇಹಕ್ಕೆ ಅಗತ್ಯವಿರುವ ನಾರಿನಂಶವನ್ನು ಪೂರೈಸುತ್ತದೆ. ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವುದರ ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಮುಸುಕಿನ ಜೋಳದ ತರಿಯು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಮುಸುಕಿನ ಜೋಳದ ತರಿಯು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ದೇಹದಲ್ಲಿ ಅರಿಯುವ ರಕ್ತ ಸಂಚಾರವನ್ನು ನಿಯಂತ್ರಿಸುತ್ತದೆ, ಮದುಮೇಹ ಹಾಗು ಕೊಬ್ಬನ್ನು ನಿಯಂತ್ರಿಸುತ್ತದೆ, ಚರ್ಮದಲ್ಲಿ ಆಗುವ ಅಲರ್ಜಿಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ದೇಹದಲ್ಲಿ ಅಲರ್ಜಿ,ತುರಿಕೆ. ಸನ್ಬರ್ನ್ ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡಾಗ ಮುಸುಕಿನ ಜೋಳದ ತರಿಯನ್ನು ನುಣ್ಣಗೆ ಪೇಸ್ಟ್ ಮಾಡಿ ಹಚ್ಚಿದರೆ ಬೇಗ ಗುಣ ಆಗುತ್ತದೆ. ಮಲಬದ್ಧತೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಮುಸುಕಿನ ಜೋಳದ ತರಿಯಲ್ಲಿ ಇರುವ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡುತ್ತದೆ. ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಪೂರೈಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ನೋಡಿ ಮುಸುಕಿನ ಜೋಳವನ್ನು ಸೇವನೆ ಮಾಡುವುದರಿಂದ ಎಷ್ಟೆಲ್ಲ ರೀತಿಯ ಆರೋಗ್ಯದ ಅಂಶಗಳನ್ನು ಪಡೆಯಬಹುದು. ಬಳ್ಳಾರಿ ಧಾರವಾಡ ಕಡೆಯಲೆಲ್ಲ ಹೆಚ್ಚಾಗಿ ಮುಸುಕಿನ ಜೋಳದ ತರಿಯನ್ನು ಬಳಕೆ ಮಾಡಿ ಜೋಳದ ರೊಟ್ಟಿ ಎಂದು ಮಾಡುತ್ತಾರೆ. ಇತ್ತೀಚೆಗೆ ಎಲ್ಲ ಕಡೆಯಲ್ಲೂ ಕೂಡ ಇದನ್ನು ಮಾಡುತ್ತಾರೆ. ಹಳ್ಳಿಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆದು ಆ ಮುಸುಕಿನ ಕಾಳುಗಳನ್ನು ಬಿಡಿಸಿ ಅದನ್ನು ಮಾರಾಟ ಮಾಡುತ್ತಾರೆ ಇದರಿಂದ ಅವರಿಗೆ ಒಳ್ಳೆಯ ಆದಾಯ ಸಿಗುತ್ತದೆ ಹಾಗೆಯೇ ಆ ಮುಸುಕಿನ ಕಾಳುಗಳನ್ನು ಬಿಡಿಸಿದ ನಂತರ ಅದರಿಂದ ಸಿಗುವ ದಿಂಡುಗಳನ್ನು ಸೌದೆಯಾಗಿ ಬಳಕೆ ಮಾಡುತ್ತಾರೆ ಒಟ್ಟಾರೆ ಇದರ ಒಂದು ಭಾಗ ಸಹ ವೆಸ್ಟ್ ಆಗುವುದಿಲ್ಲ. ಇನ್ನೊಂದು ಮುಖ್ಯವಾದ ಗಮನಿಸಬೇಕಾದ ವಿಷಯ ಎಂದರೆ ಅತಿಯಾಗಿ ಕೂಡ ಸೇವಿಸಬಾರದು ಅತಿಯಾದರೆ ಅಮೃತ ಕೂಡ ವಿಷ ಅಲ್ಲವೇ ಹಾಗೆ.

Comments are closed.