ಆರೋಗ್ಯ

ದ್ವಿಚಕ್ರ ವಾಹನ ಸವಾರರು ಬೇರೆಯವರ ಹೆಲ್ಮೆಟ್ ಧರಿಸುವ ಮುನ್ನ ತಿಳಿಯಬೇಕಾದ ವಿಷಯ..?

Pinterest LinkedIn Tumblr


ದ್ವಿ ಚಕ್ರ ವಾಹನವನ್ನು ಓಡಿಸುವಾಗ ತಪ್ಪದೆ ಹೆಲ್ಮೆಟ್ ಬಳಸಬೇಕು ಎಂದು ಸರ್ಕಾರ ಕಾನೂನು ಜಾರಿಗೆ ತಂದಿದೇ ಹೆಲ್ಮೆಟ್ ಎಂದರೆ ನಮ್ಮ ಶಿರವನ್ನು ಕಾಪಾಡಿಕೊಳ್ಳಲು ಬಳಸುವ ವಸ್ತು. ದ್ವಿ ಚಕ್ರ ವಾಹನ ಓಡಿಸುವಾಗ ಏನಾದರೂ ಅಪಘಾತ ಆಗಿ ಕೆಳಗೆ ಬಿದ್ದರೆ ತಲೆಗೆ ಯಾವುದೇ ರೀತಿಯ ಅಪಾಯ ಆಗದ ರೀತಿಯಲ್ಲಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮೊದಲು ವಾಹನ ಓಡಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಇತ್ತು ಅದರೆ ಇತ್ತೀಚೆಗೆ ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಕಾನೂನು ಜಾರಿಗೆ ತಂದಿದೆ ಏಕೆಂದರೆ ಮುಂಬದಿಯವರು ಬಿದ್ದರೆ ಅವರಿಗೆ ಅಪಾಯ ಆಗುತ್ತದೆ ಆದರೆ ಹಿಂಬದಿ ಕುಳಿತುಕೊಂಡವರು ಬಿದ್ದರೆ ಅವರಿಗೂ ಕೂಡ ಅಪಾಯ ಆಗುತ್ತದೆ ಅಲ್ಲವೇ ಹಾಗಾಗಿಯೇ ಅವರು ಕೂಡ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದ್ದಾರೆ.

ಆದರೆ ಹೆಲ್ಮೆಟ್ ಧರಿಸಬೇಕು ಎಂದು ಸರ್ಕಾರ ಕಾನೂನು ಜಾರಿ ಮಾಡಿದೆ ಹೆಲ್ಮೆಟ್ ಧರಿಸಿಲ್ಲ ಎಂದರೆ ದಂಡ ಕಟ್ಟಬೇಕಾಗುತ್ತದೆ ಅಲ್ಲವೇ ಆದರೆ ಮನೆಯಲ್ಲಿ ಮುರುನಾಲ್ಕು ಮಂದಿ ಇದ್ದಾಗ ಅವೆರಲ್ಲರು ಕೂಡ ಒಂದೊಂದು ಹೆಲ್ಮೆಟ್ ತೆಗೆದುಕೊಳ್ಳಲು ಆಗುವುದಿಲ್ಲ ಅಲ್ಲವೇ ಅದಕ್ಕೆ ಎರಡು ಹೆಲ್ಮೆಟ್ ಇಟ್ಟುಕೊಂಡು ಎಲ್ಲರೂ ಕೂಡ ಅದನ್ನೇ ಧರಿಸುತ್ತಾರೆ ಇನ್ನು ಸ್ನೇಹಿತರು ಕೂಡ ಹಾಗೆ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಸ್ನೇಹಿತರ ಹೆಲ್ಮೆಟ್ ಧರಿಸುತ್ತಾರೆ ಆದರೆ ಹೀಗೆ ಬೇರೆಯವರ ಹೆಲ್ಮೆಟ್ ಧರಿಸುವುದರಿಂದ ಎಷ್ಟೆಲ್ಲ ಅಪಾಯವನ್ನು ಎದುರಿಸಬೇಕಾಗುತ್ತದೇ ಗೊತ್ತೇ.

ತಲೆಗೆ ಮತ್ತು ತಲೆಯ ಕೂದಲಿಗೆ ಸಂಭಂದಿಸಿದ ಕಾಯಿಲೆಗಳಲ್ಲಿ ಫಂಗಲ್ ಇನ್ಫೆಕ್ಷನ್ ಆಗುತ್ತದೆ. ತಲೆಯ ನೆತ್ತಿಯ ಮೇಲೆ ಕೆಲವು ಶಿಲೀಂಧ್ರಗಳು ಇರುತ್ತವೆ ಮತ್ತು ಇವು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಆದರೆ ಕೊಳಕು, ಮಾಲಿನ್ಯ, ಎಣ್ಣೆ ಮತ್ತು ಸತ್ತ ಕೋಶಗಳು ಅದರ ರಂಧ್ರಗಳನ್ನು ಮುಚ್ಚಿಬಿಡುತ್ತವೆ ಹಾಗ ಫಂಗಲ್ ಇನ್ಫೆಕ್ಷನ್ ಸಮಸ್ಯೆ ಶುರುವಾಗುತ್ತದೆ. ಬೇರೆಯವರ ಹೆಲ್ಮೆಟ್ ಗಳನ್ನೂ ಬಳಸುವುದರಿಂದ ನಮ್ಮ ತಲೆ ಕೂದಲಿಗೆ ಸಮಸ್ಯೆಯಾಗಬಹುದು. ಬೇರೆಯವರ ಹೆಲ್ಮೆಟ್ ಧರಿಸುವುದರಿಂದ ತಲೆನೋವಿನ ಸಮಸ್ಯೆ ಕೂಡ ಎದುರಾಗುತ್ತದೆ.

ಅದಕ್ಕಾಗಿ ಬೇರೆಯವರ ಹೆಲ್ಮೆಟ್ ಧರಿಸಬಾರದು.ಅಕಸ್ಮಾತ್ ಧರಿಸುವ ಪರಿಸ್ಥಿತಿ ಬಂದಿದೆ ಎಂದರೆ ಏನಾದರೂ ಬಟ್ಟೆಯನ್ನು ಮೊದಲು ನಿಮ್ಮ ತಲೆಗೆ ಸುತ್ತಿಕೊಂಡು ನಂತರ ಹೆಲ್ಮೆಟ್ ಧರಿಸುವುದು ಒಳ್ಳೆಯದು. ಹಾಗೆಯೇ ಬೇರೆಯವರ ಹೆಲ್ಮೆಟ್ ಧರಿಸಿ ಫಂಗಲ್ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ ಅದಕ್ಕೆ ಸುಲಭ ವಿಧಾನ ಇದೆ ಅದು ಏನು ಅಂದರೆ. ಒಂದು ಲೋಟ ನೀರಿಗೆ 5 ಸ್ಪುನ್ ಅಷ್ಟು ನಿಂಬೆ ರಸ ಸೇರಿಸಿ ಅದನ್ನು ಸ್ನಾನ ಮಾಡಿದ ನಂತರ ತಲೆಯ ಕೂದಲಿಗೆ ಹಚ್ಚಿಕೊಂಡು ನಂತರ ತಣ್ಣೀರು ಹಾಕಿ ತೊಳೆಯಬೇಕು ಹೀಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಬೇಕು.

ವಾರದಲ್ಲಿ ಎರಡು ದಿನ ಆದರೂ ತಲೆಗೆ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಹೀಗೆ ಮಾಡುತ್ತ ಬಂದರೆ ಫಂಗಲ್ ಸಮಸ್ಯೆ ದೂರ ಆಗುತ್ತದೆ. ಜೊತೆಗೆ ಬೇರೆಯವರ ಹೆಲ್ಮೆಟ್ ಅನ್ನು ಬಳಸುವುದನ್ನು ನಿಲ್ಲಿಸಬೇಕು ಹಾಗೆ ಮಾಡಿದರೆ ಫಂಗಲ್ ಸಮಸ್ಯೆ. ತಲೆ ಕೂದಲು ಉದುರುವುದು. ತಲೆ ನೋವಿನ ಸಮಸ್ಯೆ ಎಲ್ಲವೂ ಕೂಡ ದೂರ ಆಗುತ್ತದೆ. ಬಳಸಲೇ ಬೇಕು ಎಂದಾದರೆ ಮೊದಲು ತಲೆಗೆ ಬಟ್ಟೆಯನ್ನು ಸುತ್ತಿ ನಂತರ ಹೆಲ್ಮೆಟ್ ಬಳಸುವುದು ಒಳ್ಳೆಯದು.

Comments are closed.