ಆರೋಗ್ಯ

ದೇಹದಲ್ಲಿ ಕಬ್ಬಿಣದ ಕೊರತೆಯು ರಕ್ತಹೀನತೆಗೆ ಮೂಲ ಕಾರಣ ಗೋತ್ತೆ..?

Pinterest LinkedIn Tumblr

ಕ್ಯಾಲ್ಸಿಯಂ ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಆಧಾರವಾಗಿದೆ. ಇದು ರಕ್ತನಾಳಗಳು, ಸ್ನಾಯುಗಳು, ನರಗಳು ಮತ್ತು ಹಾರ್ಮೋನುಗಳನ್ನು ಬೆಂಬಲಿಸುತ್ತದೆ. ಇದರ ಜೊತೆಯಲ್ಲಿ ಸ್ನಾಯುವಿನ ಕಾರ್ಯಚಟುವಟಿಕೆ, ರಕ್ತ ಹೆಪ್ಪುಗಟ್ಟುವಿಕೆ, ರಕ್ತದೊತ್ತಡ ನಿಯಂತ್ರಣ, ಇತ್ಯಾದಿಗಳಿಗೆ ಇದು ಮುಖ್ಯವಾಗಿದೆ.

ಪ್ರಮಾಣ : ನಮ್ಮ ದೇಹಕ್ಕೆ 800-1300 ಮಿಲಿಗ್ರಾಮ್ ರಷ್ಟು ಕ್ಯಾಲ್ಸಿಯಂ ಒಂದು ದಿನಕ್ಕೆ ಬೇಕಾಗುತ್ತದೆ, ಇದರಲ್ಲಿ ಶೇಖಡಾ 99% ಕ್ಯಾಲ್ಸಿಯಂ ಹಲ್ಲು ಮತ್ತು ಮೂಳೆಗಳಲ್ಲಿ ಸಂಗ್ರಹವಾಗಿದೆ.
ಕೊರತೆ: ದೀರ್ಘಕಾಲದವರೆಗೆ ಕ್ಯಾಲ್ಸಿಯಂ ಕೊರತೆ ಕಡಿಮೆ ಮೂಳೆ ಖನಿಜ ಸಾಂದ್ರತೆ (ಆಸ್ಟಿಯೋಪೆನಿಯಾ) ಮತ್ತು ಅದನ್ನು ಶೀಘ್ರ ಚಿಕಿತ್ಸೆ ನೀಡದೆ ಇದ್ದಲ್ಲಿ, ಅದು ಅಸ್ಥಿರಂಧ್ರತೆ ಗೆ ಕಾರಣವಾಗುತ್ತದೆ.
ಅತಿಯಾದ ಪ್ರಮಾಣ: ರಕ್ತದಲ್ಲಿನ ಹೆಚ್ಚಿನ ಕ್ಯಾಲ್ಸಿಯಂ ಮಟ್ಟಗಳು ಹೈಪರ್ ಕ್ಯಾಲ್ಸೆಮಿಯಾಗೆ ಕಾರಣವಾಗುತ್ತವೆ ಮತ್ತು ಮೂತ್ರಪಿಂಡದ ಕಡಿಮೆ ಕಾರ್ಯಚಟುವಟಿಕೆಗೆ ಸಹ ಕಾರಣವಾಗಬಹುದು. ಹೈಪರ್ ಕ್ಯಾಲ್ಸೆಮಿಯ ಇದ್ದಾಗ ಆಯಾಸ, ವಾಕರಿಕೆ, ಮಂದಗತಿ, ಮೂಳೆ ನೋವು ಮತ್ತು ಖಿನ್ನತೆಯ ಲಕ್ಷಣಗಳು ಇರುತ್ತವೆ.
ಮೂಲಗಳು:ಹಾಲು, ಮೊಸರು, ಚೀಸ್, ಹಸಿರು ಎಲೆಗಳ ತರಕಾರಿಗಳು, ಬಾದಾಮಿ, ಒಣ ಬೀಜಗಳು, ಬೀಟ್ರೂಟ್, ಸೋಯಾ, ಹಸಿರು ಬಟಾಣಿ, ಧಾನ್ಯಗಳು ಇತ್ಯಾದಿ.
ಕಬ್ಬಿಣ
ಮನುಷ್ಯನ ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಕಬ್ಬಿಣ ಮಹತ್ತರ ಪಾತ್ರ ವಹಿಸುತ್ತದೆ. ಇದು ಆಮ್ಲಜನಕ ಮತ್ತು ಹಿಮೋಗ್ಲೋಬಿನ್ ಎರಡನ್ನು ಜೊತೆಯಾಗಿಸಿ ದೇಹದಾದ್ಯಂತ ಚಲಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಶಕ್ತಿಯನ್ನಾಗಿ ಬದಲಿಸುತ್ತದೆ.

ಪ್ರಮಾಣ: ನಮ್ಮ ದೇಹಕ್ಕೆ ದಿನಾಲು 10 ರಿಂದ 18 ಮಿಲಿಗ್ರಾಮ್ನಷ್ಟು ಕಬ್ಬಿಣ ಬೇಕಾಗುತ್ತದೆ. ಮತ್ತು ಶೇಖಡಾ 70% ಕಬ್ಬಿಣ ನಮ್ಮ ಹಿಮೋಗ್ಲೋಬಿನ್ ಮತ್ತು 26 % ಯಕೃತ್ತು, ಸ್ಪ್ಲೀನ್ ಮತ್ತು ಮೂಳೆಗಳಲ್ಲಿ ಸಂಗ್ರಹವಾಗಿದೆ.
ಕೊರತೆ: ಕಬ್ಬಿಣದ ಕೊರತೆಯು ರಕ್ತಹೀನತೆ ಗೆ ಕಾರಣಮಾಡುತ್ತದೆ. ನಮ್ಮ ದೇಹವು ಕಬ್ಬಿಣವನ್ನು ಮೂತ್ರ, ಬೆವರು, ರಕ್ತ ಸ್ರಾವ ಮತ್ತು ಹಲವಾರು ಬೇರೆ ರೀತಿಯಾಗಿಯೂ ಕಳೆದುಕೊಳ್ಳಬಹುದು. ಇದರಿಂದ ಕೆಂಪು ರಕ್ತಕಣಗಳು ಕಡಿಮೆ ಆಗಿ ಅಂಗಾಂಗಗಳಿಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ.ರಕ್ತಹೀನತೆ ನಮ್ಮಲ್ಲಿ ಆಯಾಸ ಮತ್ತು ಸುಸ್ತಾಗಿ ಮಾಡಿ ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಂತೆ ಮಾಡಿಬಿಡುತ್ತದೆ.
ಅಧಿಕ ಪ್ರಮಾಣ:ಕಬ್ಬಿಣದ ಅಧಿಕ ಪ್ರಮಾಣವು ಕೂಡ ದೇಹದ ಮೇಲೆ ಒತ್ತಡವನ್ನು ಹೇರಬಹುದು. ಇದು ಯಕೃತ್ತು ಮತ್ತು ಹೃದಯದ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅನುವಂಶಿಕವಾಗಿಯೂ ಬರಬಹುದು ಅಥವಾ ಅಧಿಕ ರಕ್ತ ಚಿಕಿತ್ಸೆ ಅಥವಾ ಕಬ್ಬಿಣ ಪೂರಕಗಳನ್ನು ಅಧಿಕವಾಗಿ ತೆಗೆದುಕೊಳ್ಳುವುದರಿಂದಲೂ ಸಹ ಆಗುತ್ತದೆ.
ಮೂಲಗಳು: ಧಾನ್ಯಗಳು, ಮೊಟ್ಟೆ, ಒಣ ಹಣ್ಣುಗಳು, ಕೆಂಪು ಮಾಂಸ, ಹಸಿರು ಎಲೆ ತರಕಾರಿಗಳು, ಕಾಳು, ಜೀರಿಗೆ, ಶತಾವರಿ, ಒಲಿವ್ಗಳು, ಟೊಮೇಟೊ, ಮೀನು, ಸಿಗಡಿ ಇತ್ಯಾದಿ ಗಳು ಕಬ್ಬಿಣ ಸಮೃದ್ಧ ಆಹಾರಗಳಾಗಿವೆ.

Comments are closed.