ಆರೋಗ್ಯ

ಎದೆ ಹಾಲಿಗೂ ಬೇರೆ ಹಾಲುಗಳಿಗೆ ಇರುವ ವ್ಯತಾಸ ಏನು?

Pinterest LinkedIn Tumblr

“ಕೇವಲ ಸ್ತನಪಾನ” ಎಂದರೆ ಶಿಶು 6 ತಿಂಗಳು ಆಗುವವರೆಗೂ ಯಾವುದೇ ರೀತಿಯ ಆಹಾರ, ಪಾನೀಯಗಳು ಕೊಡದೆ ಕೇವಲ ತಾಯಿಯ ಎದೆ ಹಾಲು ಕುಡಿಸಬೇಕು ಮತ್ತು ಅದು ಬಿಟ್ಟರೆ ಓ ಆರ್ ಎಸ್, ಅಥವಾ ಔಷಧಿಗಳನ್ನು ಕೊಡಬಹುದು. ಮಗು ಜನಿಸಿದ ಮೊದಲ ಅರ್ಧ ಗಂಟೆಯಲ್ಲೇ ತಾಯಿಯ ಎದೆ ಹಾಲನ್ನು ಕೊಡಬೇಕು ಮತ್ತು ಮಗುವಿಗೆ ಬೇಕಾದಷ್ಟು ಹಾಲನ್ನು ಕೊಡಬೇಕು. ಮಗು ಬೆಳೆಯುತ್ತಾ ಹೋದಂತೆ ಎದೆ ಹಾಲು ಕುಡಿಯುವ ಸಮಯವೂ ಕಡಿಮೆಯಾಗುತ್ತದೆ. ಫಾರ್ಮುಲಾ ಹಾಲು ಕೊಡುವುದಕ್ಕಿಂತ, ಸ್ತನಪಾನವು ತಾಯಿ ಮತ್ತು ಮಗು, ಇಬ್ಬರ ಆರೋಗ್ಯಕ್ಕೂ ಒಳ್ಳೆಯದಾಗಿದೆ.

ಸ್ತನಪಾನದ ಪ್ರಾಮುಖ್ಯತೆ
ಸ್ತನಪಾನ ಮಾಡುವುದರಿಂದ ಪ್ರತಿ ವರ್ಷವೂ ವಿಶ್ವದಾದ್ಯಂತ ಆಗುತ್ತಿರುವ ದಶಲಕ್ಷಕ್ಕೂ ಹೆಚ್ಚಿನ ಸಾವುಗಳನ್ನು ತಡೆಗಟ್ಟಬಹುದು ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು ನಿಜವೂ ಆಗಿದೆ.

ಮೊಟ್ಟಮೊದಲ ಮತ್ತು ಮುಖ್ಯವಾದ ಪ್ರಮುಖ ಅಂಶವೆಂದರೆ ಸ್ತನಪಾನ ಮಾಡುವುದರಿಂದ ಮಗು ಮತ್ತು ತಾಯಿಯ ನಡುವೆ ಒಂದು ವಿಶೇಷ ಸರಿಸಾಟಿಯಲ್ಲದ ಬಂಧನವನ್ನು ಮತ್ತು ಸಂಬಂಧವನ್ನು ಸೃಷ್ಟಿಸುತ್ತದೆ ಮತ್ತು ಇದು ಶಿಶುವಿಗೆ ವಿಶೇಷ ಪೋಷಣೆಯನ್ನು ಒದಗಿಸುತ್ತದೆ. ನವ ತಾಯಂದಿರು ತನ್ನ ಮಗುವಿಗೆ ಎದೆ ಹಾಲುಣಿಸುವ ಬದಲು ಫಾರ್ಮುಲಾ ಹಾಲು ಶ್ರೇಷ್ಠವೆಂದು ತಿಳಿಯುತ್ತಾರೆ, ಆದರೆ ಏನೇ ಆದರೂ, ಎಷ್ಟೇ ವಿಟಮಿನ್ಸ್, ಖನಿಜಗಳು ಮತ್ತು ಪೂರಕಗಳನ್ನು ಹಾಕಿ ತಯಾರಿಸಿದರೂ ಹೊರಗಡೆ ಸಿಗುವ ಫಾರ್ಮುಲಾ ಆಹಾರಗಳು ತಾಯಿಯ ಎದೆ ಹಾಲಿಗೆ ಸಮನಾಗುವುದಿಲ್ಲ.

ಸ್ತನಪಾನದ ವಿವಿಧ ಹಂತಗಳೇನು?
ಹಾಲುಣಿಸುವ ತಾಯಿಯರಲ್ಲಿ ಬರುವ ಹಾಲನ್ನು ಎದೆ ಹಾಲೆಂದು ಕರೆಯುತ್ತಾರೆ ಮತ್ತು ಇದು ಶಿಶು ಜನಿಸಿದ ಕೆಲವೇ ನಿಮಿಷಗಳಲ್ಲಿ ಬರಲು ಶುರುವಾಗುತ್ತದೆ ಮತ್ತು ಪ್ರತಿ 24 ಗಂಟೆಗಳಲ್ಲಿ 1-3 ಗಂಟೆಗಳು(8-12 ಸಲ) ಸತತವಾಗಿ ಉತ್ಪತ್ತಿಯಾಗುತ್ತವೆ. ಶಿಶುಗಳು ಜನಿಸಿದ ಮೊದಲು 6 ತಿಂಗಳು ಕೇವಲ ಸ್ತನಪಾನ ಮಾತ್ರ ಮಾಡಿಸಬೇಕು ಮತ್ತು ಸಾಧ್ಯವಾದರೆ ಹಾಲು ಬಿಡಿಸುವ ಸಮಯ(ವೀನಿಂಗ್) ಅಂದರೆ 12 ತಿಂಗಳುಗಳವರೆಗೂ, ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಸಹ ಕೊಡಬಹುದು.

ಎದೆಹಾಲನ್ನು ಅದರ ಉತ್ಪಾದನೆಯ ಸಮಯ ಮತ್ತು ಅದರ ಸಂಯೋಜನೆಯ ಆಧಾರದ ಮೇಲೆ ಹಲವು ಹೆಸರುಗಳಿಂದ ಕರೆಯಲಾಗಿದೆ
ಕೊಲೊಸ್ಟ್ರಮ್: ಮಗು ಜನಿಸಿದ ನಂತರ ಬರುವ ಮೊದಲ ಹಾಲನ್ನು ಕೊಲೊಸ್ಟ್ರಮ್ ಎಂದು ಕರೆಯುತ್ತಾರೆ ಮತ್ತು ಇದು ಶಿಶುವಿಗೆ ಅತ್ಯಂತ ಒಳ್ಳೆಯ ಮತ್ತು ಆರೋಗ್ಯಕಾರಿ ಹಾಲಾಗಿದೆ. ಇದು ಸಾಮಾನ್ಯವಾಗಿ ಮೊದಲ 5 ಅಥವಾ 6 ತಿಂಗಳವರೆಗೆ ಇರುತ್ತದೆ. ಶಿಶು ಜನಿಸಿದ ಮೊದಲ 3 ದಿನಗಳು ಮಗುವಿನ ಚಿಕ್ಕ ಹೊಟ್ಟೆಯನುಗುಣವಾಗಿ ಸ್ವಲ್ಪ ಸ್ವಲ್ಪ ಬರುತ್ತದೆ. ಇದು ಸ್ವಲ್ಪ ಗಟ್ಟಿ ಇದ್ದು ತೆಳು ಹಳದಿ ಬಣ್ಣದ್ದಾಗಿರುತ್ತದೆ. ಇದರಲ್ಲಿರುವ ಅಧಿಕ ಪ್ರೋಟೀನ್ ಮತ್ತು ಕಡಿಮೆ ಕೊಬ್ಬು ಮತ್ತು ಸಕ್ಕರೆ ಮತ್ತು ಇತರೆ ಅಧಿಕ ಪೌಷ್ಟಿಕಾಂಶಗಳು ಮಗುವಿನ ದೇಹದ ಆಂತರಿಕ ಶಕ್ತಿಯನ್ನು ವೃದ್ಧಿಸಬಲ್ಲದು. ಮೆಕೋನಿಯಂ ಎಂದು ಕರೆಯಲ್ಪಡುವ ಮಗುವಿನ ಮೊದಲ ಮಲವನ್ನು ಸಹ ಹಾದುಹೋಗಲು ಇದು ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸಿ ಸಹಾಯ ಮಾಡುತ್ತದೆ.
ಬಲಿತ ಹಾಲು: ಕೊಲೊಸ್ಟ್ರಮ್ ಬಂದ ಮೊದಲ ೪೮ ರಿಂದ 72 ಗಂಟೆಗೊಳಗಾಗಿ ಬಲಿತ ಹಾಲು ಬರಲು ಶುರುವಾಗುತ್ತದೆ. ಆದಾಗಿಯೂ ಕೆಲವು ಸಲ ಇದು ತಡವಾಗಿಯೂ ಮತ್ತು ಸ್ತನಪಾನ ಮಾಡಿದ ಸಮಯ ಮತ್ತು ಹಾಲು ಕೊಟ್ಟಿರುವ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಬಲಿತ ಹಾಲಿನಲ್ಲಿ ಎರಡು ಮುಖ್ಯ ಅಂಶಗಳಿವೆ :

*ಮುಂಭಾಗದ ಹಾಲು: ಮಗು ಹಾಲು ಕುಡಿಯುವಾಗ ಎಳೆಯುವ ಬರುವ ಹಾಲನ್ನು ಮುಂಭಾಗದ ಹಾಲು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ನೀರಿನಂತೆ ತೆಳುವಾಗಿ ಮತ್ತು ಸ್ವಲ್ಪ ನೀಲಿ ಬಣ್ಣದ್ದಾಗಿರುತ್ತದೆ ಇದು ಹೆಚ್ಚಾಗಿ ನೀರು, ಕಡಿಮೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ಇದು ಮಗುವಿನ ಬಾಯಾರಿಕೆ ನೀಗಿಸುವುದಕ್ಕೆ ಸಹಾಯ ಮಾಡುತ್ತದೆ.

*ಹಿಂಭಾಗದ ಹಾಲು: ಮಗು ಮುಂಭಾದ ಹಾಲು ಎಳೆದ ಹಲವು ನಿಮಿಷಗಳ ನಂತರ ಬರುವ ಹಾಲನ್ನು ಹಿಂಭಾಗದ ಹಾಲು ಎಂದು ಕರೆಯುತ್ತಾರೆ ಮತ್ತು ಇದು ಕೊಬ್ಬು ಸಮೃದ್ಧವಾಗಿಯೂ ಇರುತ್ತದೆ. ಇದು ಕೆನೆಯಂತೆ ಗಟ್ಟಿಯಾಗಿಯೂ ಮತ್ತು ಮಗುವಿಗೆ ನಿದ್ದೆ ಬರಿಸುತ್ತದೆ. ಇದು ಮಗುವಿಗೆ ಹಾಲು ಕುಡಿದ ತೃಪ್ತಿಗಾಗಿ ಹಾಗು ತೂಕ ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆ.

ಸ್ತನಪಾನದಿದ ತಾಯಿಯಾಗುವ ಲಾಭಗಳು
ಸ್ತನಪಾನ ಮಾಡುವುದರಿಂದ ತಾಯಿಗೆ ಆಗುವ ಪ್ರಯೋಜನಗಳೆಂದರೆ ಪ್ರಸವದ ನಂತರವಾಗುವ ರಕ್ತಸ್ರಾವ ಕಡಿಮೆಯಾಗುವುದು, ಗರ್ಭಾಶಯ ಪುನಃ ಹಳೆಯ ಗಾತ್ರಕ್ಕೆ ಬರುವುದು, ತೂಕ ಇಳಿಕೆ ಮತ್ತು ಪ್ರಸವದ ನಂತರ ಬರುವ ಖಿನ್ನತೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದರ ಜೊತೆಯಲ್ಲಿ ಲ್ಯಾಕ್ಟೇಶನಲ್ ಅಮೆನೋರಿಯಾ ಅಂದರೆ ಹೆರಿಗೆಯ ನಂತರ ಬರುವ ತಡವಾದ ತಿಂಗಳ ಮುಟ್ಟು ಕೂಡ ನಿಯಮಿತವಾಗಿ ಮತ್ತೆ ಬರಲಾರಂಭಿಸುತ್ತದೆ. ಮತ್ತು ಧೀರ್ಘಾವಧಿಯ ಸ್ತನಪಾನದಿಂದ ಸ್ತನ ಕ್ಯಾನ್ಸರ್, ಹೃದಯಿ ಸಂಬಂಧಿ ಸಮಸ್ಯೆಗಳು ಮತ್ತು ಸಂಧಿವಾತದಂತಹ ಕಾಯಿಲೆಗಳ ಸಾಧ್ಯತೆಗಳನ್ನು ಕಡಿಮೆಮಾಡುತ್ತದೆ. ಎದೆಹಾಲು ಉಣಿಸುವುದು ಫಾರ್ಮುಲಾ ಆಹಾರಕ್ಕಿಂತ ಅತಿ ಕಡಿಮೆ ವೆಚ್ಚದ ಪೌಷ್ಟಿಕ ಆರೋಗ್ಯಕರ ಆಹಾರವಾಗಿದೆ.

ಮಗುವಿನಲ್ಲಿ ಸ್ತನಪಾನದ ಲಾಭಗಳು
ಎದೆಹಾಲು ಕುಡಿಯುವ ಶಿಶುಗಳಲ್ಲಿ ಈ ಕೆಳಗಿನ ಸಮಸ್ಯೆಗಳು ಬರುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ:
ಜೀರ್ಣಾಂಗವ್ಯೂಹದ ಕಾಯಿಲೆಗಳು
ಅಲ್ಲರ್ಜಿಗಳು
ಅಸ್ತಮಾ
ಮಧುಮೇಹ
ಬೊಜ್ಜು
ಮಕ್ಕಳ ಕ್ಯಾನ್ಸರ್ ಕಾಯಿಲೆಗಳು
ಶ್ವಾಸಕೋಶದ ಸೋಂಕುಗಳು
ಮೂತ್ರನಾಳದ ಸೋಂಕುಗಳು
ಎಸ್ ಐ ಡಿ ಸ್(ಮಗು ಇದ್ದಕ್ಕಿದ್ದ ಹಾಗೆ ಸಾಯುವ ಸಿಂಡ್ರೋಮ್ ಅಥವಾ ಕಾಟ್ ಸಾವು)

ಪರಿಪೂರ್ಣ ಆಹಾರ
ಮಗುವಿನ ಆಂತರಿಕ ಶಕ್ತಿಯನ್ನು ಬೆಳೆಸಲು ಬೇಕಾಗಿರುವ ಪದಾರ್ಥಗಳು ತಾಯಿಯ ಎದೆಹಾಲು ಅಲ್ಲದೆ ಯಾವುದೇ ಫಾರ್ಮುಲಾ ಆಹಾರದಲ್ಲಿ ಸಿಗುವುದಿಲ್ಲ. ಪ್ರತಿ ಮಗುವಿನ ವಿಶಿಷ್ಟ ಅಗತ್ಯಗಳ ಅನುಸಾರವಾಗಿ ಎದೆಹಾಲು ಸಹ ಬದಲಾಗುತ್ತದೆ, ಇದರಿಂದ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತದೆ.

ಎದೆ ಹಾಲಿಗೂ ಬೇರೆ ಹಾಲುಗಳಿಗೆ ಇರುವ ವ್ಯತಾಸ ಏನು?
ಬೇರೆ ಪಾಶ್ಚೀಕರಿಸಿದ ಹಾಲುಗಳಿಗೆ ಹೋಲಿಸಿದರೆ ಎದೆಹಾಲು ಅಧಿಕ ಶ್ರೇಷ್ಠ ಮತ್ತು ಉತ್ಕೃಷ್ಟವಾಗಿದೆ, ಏಕೆಂದರೆ ಇದರಲ್ಲಿರುವ ಪದಾರ್ಥಗಳು ಇದನ್ನು ಬೇರೆ ಹಾಲುಗಳಿಂದ ಬೇರ್ಪಡಿಸುತ್ತದೆ. ಅದು ಯಾವುವೆಂದರೆ

ಕ್ಯಾಲ್ಸಿಯಂ ಹೀರಿಕೊಳ್ಳುವುದಕ್ಕೆ ಲ್ಯಾಕ್ಟೋಸ್
ಪಾಲಿ ಅನ್ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಅವಶ್ಯಕ ಕೊಬ್ಬಿನಾಮ್ಲಗಳು (ಲಿನೋಲಿಕ್, ಲಿನೊಲೆನಿಕ್ ಮತ್ತು ಅರಕಿದೋಣಿಕ್)
ವಿಟಮಿನ್ ಎ, ಡಿ, ಇ, ಕೆ, ಬಿ-ಕಾಂಪ್ಲೆಕ್ಸ್ ಮತ್ತು ಸಿ
ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಸತು ನಂತಹ ಖನಿಜಗಳು
ವೆ ಪ್ರೋಟೀನ್
ಕೊಬ್ಬನ್ನು ಜೀರ್ಣ ಮಾಡಲು ಪಿತ್ತ ಉಪ್ಪುಗಳಿಂದ ಉತ್ತೇಜಿಸಿದ ಲಿಪೇಸ್
ಸಿಸ್ಟಿನ್ ಮತ್ತು ಟೌರಿನ್ ನಂಥ ಅಮೈನೊ ಆಸಿಡ್ಗಳು
ಲ್ಯಾಕ್ಟೋಫೆರ್ರೀನ್ (ಕಬ್ಬಿಣವನ್ನು ಬಂಧಿಸಿ ಬ್ಯಾಕ್ಟೇರಿಯಾಗಳನ್ನು ದೂರವಿಡುತ್ತದೆ)
ಸೆಕ್ರೆಟೆರಿ ಇಮ್ಯೂನೊಗ್ಲೊಬ್ಯೂಲಿನ್ ಎ (sIgA)
ಲಿಸೋಜಿಮ್ ಬಿಫಿಡಾಸ್ ಅಂಶ (ಆಮ್ಲಜನಯುಕತ ಮಲವನ್ನು ಉತ್ಪಾದಿಸಿ, ಹಾನಿಕಾರ ಬ್ಯಾಕ್ಟೇರಿಯಾ ಬೆಳವಣಿಗೆಯನ್ನು ತಡೆಗಟ್ಟುತ್ತದೆ)

ಎದೆಹಾಲು ಕುಡಿಯುವ ಮಕ್ಕಳು ಅತಿ ವಿರಳವಾಗಿ ಮಲಬದ್ಧತೆಯಿಂದ ಮತ್ತು ಭೇದಿಯಿಂದ ಬಳಲುತ್ತಾರೆ. ಇದು ಫಾರ್ಮುಲಾ ಆಹಾರಗಳಿಗೆ ಹೋಲಿಸಿದರೆ ಬೇಗ ಜೀರ್ಣವಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ತ್ಯಾಜ್ಯ ಇರುವುದಿಲ್ಲ ಅಥವಾ ಸಮಸ್ಯೆಗಳನ್ನು ಮಾಡುವುದಿಲ್ಲ. ಇದರ ಜೊತೆಯಲ್ಲಿ ಎದೆಹಾಲು ಕುಡಿದ ಮಕ್ಕಳ ಬುದ್ಧಿಶಕ್ತಿ ಇತರೆ ಮಕ್ಕಿಳಿಗಿಂತ ಹೆಚ್ಚಾಗಿರುತ್ತದೆ.

Comments are closed.