ಆರೋಗ್ಯ

ಮಳೆಗಾಲದಲ್ಲಿ ರೋಗಗಳ ವಿರುದ್ಧ ಆರೋಗ್ಯವನ್ನು ಕಾಪಾಡಲು ಕೆಲವು ಸಲಹೆ

Pinterest LinkedIn Tumblr

ಮಳೆ ಮತ್ತು ಆರ್ದ್ರತೆಯು ಕಡಿಮೆ ಆಂತರಿಕ ಶಕ್ತಿ ಇರುವವರಲ್ಲಿ ಇನ್ನಷ್ಟು ಸೋಂಕನ್ನು ಹೆಚ್ಚು ಮಾಡುತ್ತದೆ. ಈ ಕಾಲದಲ್ಲಿ ಕೆಳಗಿನ ಸೋಂಕುಗಳನ್ನು ಮತ್ತು ರೋಗಗಳನ್ನು ಹೆಚ್ಚಾಗಿ ಕಾಣಬಹುದುದಾಗಿದೆ.

ವೈರಲ್ ಜ್ವರ
ಲಕ್ಷಣಗಳು: ಇದರಲ್ಲಿ ಸ್ವಲ್ಪ ಅಥವಾ ತೀವ್ರ ಜ್ವರ ಇರಬಹುದು ಮತ್ತು ಜ್ವರದ ಜೊತೆಯಲ್ಲಿ ಕೆಮ್ಮು, ಗಂಟಲಲ್ಲಿ ನೋವು ಅಥವಾ ಕಿರಿಕಿರಿ ಉಂಟಾಗುವುದು, ಸೀನು ಇರುವ ನೆಗಡಿ ಮತ್ತು ಕಟ್ಟಿದ ಮೂಗು ಇರುತ್ತದೆ. ಕೆಲವೊಮ್ಮೆ ಕಣ್ಣುಗಳಲ್ಲಿ ಉರಿ, ಚುಚ್ಚಿದಂತಾಗುವುದು, ಮೈಕೈ ನೋವು ಸಹ ಇರುತ್ತದೆ. ಹಾಗೂ ಮಕ್ಕಳಲ್ಲಿ ಭೇದಿ ಮತ್ತು ಚರ್ಮದ ದದ್ದುಗಳಾಗುವುದನ್ನು ಕಾಣಬಹುದು.

ಮುಂಜಾಗ್ರತೆ ಮತ್ತು ಚಿಕಿತ್ಸೆ: ನಿಮ್ಮ ಕೈಗಳನ್ನು, ಮತ್ತು ಕಣ್ಣುಗಳನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ನಿಮ್ಮನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳಿ. ಸಾಧ್ಯವಾದಷ್ಟು ಹೆಚ್ಚು ದ್ರವವನ್ನು ಸೇವಿಸಿರಿ ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಲಿಂಬೆ ರಸವನ್ನು ಬೆರೆಸಿ ಕುಡಿಯಿರಿ. ಜಂಕ್ ಆಹಾರ, ಸೋಂಕಿನ ವ್ಯಕ್ತಿಯೊಂದಿಗೆ ಸಂಪರ್ಕ ಇವುಗಳನ್ನು ಮಾಡದಿರಿ. ಮಕ್ಕಳ ಕಟ್ಟಿದ ಮೂಗಿನ ಸಮಸ್ಯೆಗಾಗಿ ಸಲೈನ್ ಹನಿಗಳನ್ನು ಬಳಸಿ. ನಿಮ್ಮ ಕೈ ಚೀಲದಲ್ಲಿ ಸ್ಯಾನಿಟೈಝೆರ್ ಇರಲಿ, ಊಟದ ಮೊದಲು ಕೈಗಳನ್ನು ಇದರಿಂದ ಒರೆಸಿಯೇ ಊಟ ಮಾಡಿ. ಜ್ವರ ಅಧಿಕವಿದ್ದರೆ ಕ್ರೋಸಿನ್ ಮಾತ್ರೆಯನ್ನು ಅಥವಾ ಟಾನಿಕ್ ಅನ್ನು ಪ್ರತಿ ಕೆಜಿ ಗೆ 10 ಮಿಲಿ ಗ್ರಾಂ ನಂತೆ ರೋಗಿಯ ದೇಹದ ತೂಕದ ಪ್ರಕಾರ ಮತ್ತು ವಯಸ್ಸಿನನುಗುಣವಾಗಿ ದಿನಕ್ಕೆ 3 ಅಥವಾ 4 ಬಾರಿ ಕೊಡಿ.

ಶಿಲಿಂಧ್ರಗಳ ಸೋಂಕು
ಕಂಕಳುಗಳಲ್ಲಿ ಅಥವಾ ಚರ್ಮದ ಒಳ ಪದರಗಳಲ್ಲಿ ಆರ್ದ್ರತೆ ಅಥವಾ ತೇವಾಂಶ ಇರುವುದರಿಂದ ತುರಿಕೆ, ಉರಿ ಮತ್ತು ಚರ್ಮ ಕೆಂಪಗಾಗುವುದು ಹೆಚ್ಚಾಗುತ್ತದೆ.

ಮುಂಜಾಗ್ರತೆ ಕ್ರಮಗಳು: ನಿಮ್ಮ ಚರ್ಮದ ಮೇಲೆ ಹೆಚ್ಚು ನೀರು ಅಥವಾ ತೇವಾಂಶ ಇರದಂತೆ ನೋಡಿಕೊಳ್ಳಿ, ನಿಮ್ಮ ಕೂದಲುಗಳನ್ನು ಒಣಗಿಸಿ, ಒದ್ದೆ ಬಟ್ಟೆಗಳನ್ನು ಒಣಗಿಸಿಕೊಳ್ಳಿ, ಒದ್ದೆಯಿರುವ ಅಥವಾ ಸ್ವಲ್ಪ ತೇವ ಇರುವ ಒಳಉಡುಪುಗಳನ್ನು ಹಾಕಿಕೊಳ್ಳಬೇಡಿ, ಗಾಳಿಯಾಡುವ ಬಟ್ಟೆ ಮತ್ತು ಚಪ್ಪಲಿಗಳನ್ನೇ ಧರಿಸಿ. ಶಿಲಿಂಧ್ರ ನಿವಾರಕ ಪೌಡರ್ ಗಳನ್ನು ಬಳಸಿ.
ನೀರಿನಿಂದ ಹರಡುವ ಕಾಯಿಲೆಗಳು
ಮಳೆಗಾಲದಲ್ಲಿ ನೀರು ಮತ್ತು ಆಹಾರ ಎರಡೂ ಬೇಗ ಕಲುಷಿತಗೊಳುತ್ತದೆ, ಮತ್ತು ಬೀದಿ ಬದಿಯ ಆಹಾರ ಮಾರಾಟಗಾರರ ಅನಾರೋಗ್ಯಕರ ಆಹಾರಗಳಿಂದ ಹೆಚ್ಚಾಗಿ ಆಗುತ್ತದೆ.

ಬೇಧಿ
ಲಕ್ಷಣಗಳು: 3-4 ಸಾರಿ ಆಗಾಗ್ಗೆ ಹೋಗಬೇಕಾದ ನೀರಿನಂತಹ ಮಲ ವಿಸರ್ಜನೆ. ಮಲ ನೀರಿನ ತರಹ ಅಥವಾ ಸ್ವಲ್ಪ ಗಟ್ಟಿಯಾಗಿ ಇರುತ್ತದೆ, ಇದರ ಜೊತೆಯಲ್ಲಿ ಮೈಕೈ ನೋವು, ಜ್ವರ, ವಾಕರಿಕೆ ಮತ್ತು ವಾಂತಿ ಇರುತ್ತದೆ.

ಚಿಕಿತ್ಸೆ:ಬೇಧಿಯಿಂದಾಗುವ ನಿರ್ಜಲೀಕರಣವನ್ನು ಸುಧಾರಿಸಲು ದ್ರವ ರೂಪದ ಆಹಾರಗಾಳದ ಎಳನೀರು, ಲಿಂಬೆಹಣ್ಣಿನ ಶರಬತ್ತು(ಒಂದು ಲೀಟರ್ ನೀರಿಗೆ, ಲಿಂಬೆ ರಸ, 6-8 ಚಮಚ ಸಕ್ಕರೆಯೊಂದಿಗೆ ಒಂದು ಚಿಟಿಕೆ ಉಪ್ಪು ಹಾಕಿರಬೇಕು) ಅಥವಾ ಓ ಆರ್ ಎಸ್ ತೆಗೆದುಕೊಳ್ಳಬಹುದು.

ಟೈಫಾಯಿಡ್ ಜ್ವರ
ಲಕ್ಷಣಗಳು: ಒಂದೇ ಸಮನೆ ತೀವ್ರ ಜ್ವರ, ತಲೆನೋವು, ಆಯಾಸ, ಸುಸ್ತು, ಮೈ ನೋವು, ಹೊಟ್ಟೆ ನೋವು, ಬೇಧಿ ಅಥವಾ ಮಲಬದ್ಧತೆ. 10 % ಪ್ರಕರಣಗಳು ಗಂಭೀರ ಸ್ವರೂಪ ತೆಗೆದುಕೊಳ್ಳಬಹುದು ಆಗ ವೈದ್ಯರನ್ನು ಭೇಟಿ ಮಾಡಿ.

ಲಸಿಕೆ: ಟೈಫಾಯಿಡ್ ಲಸಿಕೆ ಯನ್ನು 2 ವರ್ಷ ಮೇಲ್ಪಟ್ಟವರಲ್ಲಿ ಮತ್ತು ಪ್ರತಿ 3 ವರ್ಷಕ್ಕೊಮ್ಮೆ ಪುನಃ ಲಸಿಕೆಯನ್ನು ಹಾಕಿಸುತ್ತಿರಬೇಕು.

ಹೆಪಟೈಟಿಸ್ ಎ
ಲಕ್ಷಣಗಳು: ವಾಕರಿಕೆ, ಆಯಾಸ, ಹಸಿವು ಇಲ್ಲದಿರುವುದು, ಅಲ್ಪ ಪ್ರಮಾಣದ ಜ್ವರ, ಕಾಮಾಲೆ ರೋಗ- ಇದರಲ್ಲಿ ಕಣ್ಣಿನ ಬಿಳಿ ಗುಡ್ಡೆ, ಚರ್ಮ, ಉಗುರುಗಳು ಎಲ್ಲವೂ ಹಳದಿ ಬಣ್ಣದ್ದಾಗಿರುತ್ತದೆ. ಇದರ ಜೊತೆಯಲ್ಲಿ ಘಾಡ ಹಳದಿ ಬಣ್ಣದ ಮೂತ್ರ ಮತ್ತು ಜೇಡಿಮಣ್ಣಿನ ರೀತಿಯ ಮಲ ಇರುತ್ತದೆ.

ಮುಂಜಾಗ್ರತೆ ಕ್ರಮಗಳು: ಶೌಚಾಲಯ ಬಳಸಿದ ನಂತರ ಮತ್ತು ಊಟ ಮಾಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಮಲ ವಿಲೇವಾರಿಯನ್ನು ಸರಿಯಾಗಿ ಮಾಡಬೇಕು. ಆಹಾರದ ಮೇಲೆ ನೊಣಗಳು ಕೂಡುವುದನ್ನು ತಪ್ಪಿಸಲು ಆಹಾರದ ಪಾತ್ರೆಯ ಮೇಲೆ ಮುಚ್ಚಬೇಕು. ಜ್ವರವಿದೆ ಎಂದು ಕ್ರೋಸಿನ್ ತೆಗೆದುಕೊಳ್ಳುವುದು ಬೇಡ, ಏಕೆಂದರೆ ಇದು ಈಗಾಗಲೇ ಸೋಂಕಾಗಿರುವ ಯಕೃತ್ತುವಿನ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಅದರ ಬದಾಲಾಗಿ ಊಟ ಮಾಡಿ ಆಸ್ಪಿರಿನ್ ಗುಳಿಗೆಯನ್ನು ತೆಗೆದುಕೊಳ್ಳಬಹುದು. ಇದನ್ನು ನಿರ್ಲಕ್ಷಿಸದೆ ನಿಮ್ಮ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ, ಇಲ್ಲದಿದ್ದಲ್ಲಿ ಇದು ಮಾರಕವಾಗಬಹುದು. ಇದನ್ನು ತಡೆಗಟ್ಟಲು ಲಸಿಕೆಯು ಸಹ ಲಭ್ಯವಿದೆ.

ಸೊಳ್ಳೆಗಳಿಂದ ಬರುವ ಕಾಯಿಲೆಗಳು
ಇತ್ತೀಚಿನ ಕೆಲವು ವರ್ಷಗಳಿಂದ ಸೊಳ್ಳೆಗಳು ಮಾನವನ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾರಣ ಮಳೆಗಾಲದಲ್ಲಿ ನಿಲ್ಲುವ ನೀರಿನಲ್ಲಿ ಇದರ ವಾಸ ಮತ್ತು ಸಂತಾನೋತ್ಪತ್ತಿ. ಇದರಿಂದ ಇದರ ಸಂತತಿ ಹೆಚ್ಚಾಗಿ ಕಾಯಿಲೆಗಳು ಹೆಚ್ಚುತ್ತವೆ.

ಡೆಂಗ್ಯೂ ಜ್ವರ
ಒಂದು ಸೊಳ್ಳೆಯು ಡೆಂಗ್ಯೂ ಸೋಂಕಿನ ವ್ಯಕ್ತಿಯನ್ನು ಕಡಿದಾಗ, ಡೆಂಗ್ಯೂ ವೈರಾಣು ಮಾನವನ ದೇಹದಿಂದ ಸೊಳ್ಳೆಯನ್ನು ಸೇರುತ್ತದೆ, ಈ ಸೊಳ್ಳೆ ಈಗ ಡೆಂಗ್ಯೂ ವೈರಾಣುವಿನ ಹರಡುವಿಕೆ ಇನ್ನಷ್ಟು ಕಾರಣವಾಗುತ್ತದೆ. ಡೆಂಗ್ಯೂ ವೈರಸ್ ಇರುವ ಈ ಸೊಳ್ಳೆಯು ಇನ್ನೊಬ್ಬ ವ್ಯಕ್ತಿಯನ್ನು ಕಚ್ಚಿದಾಗ, ಆ ವ್ಯಕ್ತಿಯ ರಕ್ತದಲ್ಲಿಯೂ ಕೂಡ ಡೆಂಗ್ಯೂ ವೈರಸ್ ಸೇರಿಕೊಳ್ಳುತ್ತದೆ ಮತ್ತು ಆತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುತ್ತಾನೆ.

ಲಕ್ಷಣಗಳು: ಡೆಂಗ್ಯೂ ಇರುವ ವ್ಯಕ್ತಿಯಲ್ಲಿ ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು ಸಂಧಿಗಳ ನೋವು, ಕಣ್ಣು ನೋವು, ಅತಿಯಾದ ಆಯಾಸ, ತ್ವಚೆಯ ಮೇಲೆ ಚಿಕ್ಕ ಚಿಕ್ಕಕೆಂಪು ಗುಳ್ಳೆಗಳು, ಹೊಟ್ಟೆನೋವು, ಹೊಟ್ಟೆ ಮುಟ್ಟಿದರೂ ನೋವಾಗುವುದು, ನಿರಂತರ ವಾಂತಿ, ದೇಹದ ಮತ್ತು ಮಾನಸಿಕವಾಗಿ ಚಡಪಡಿಕೆ. ರೋಗಿಯೇನಾದರೂ ಈ ಮುಂಚಿತವಾಗಿಯೂ ಡೆಂಗ್ಯೂ ಸೋಂಕನ್ನು ಹೊಂದಿದ್ದರೆ ಆಗ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹಾಗಾಗಿ ನಿಮ್ಮ ವೈದ್ಯರನ್ನು ಕೂಡಲೇ ಭೇಟಿಯಾಗಿ.

ಮಲೇರಿಯ
ಇದು ಸಾಮಾನ್ಯವಾಗಿ ಹೆಣ್ಣು ಅನೊಫಲಿ ಸೊಳ್ಳೆಯಿಂದ ಹರಡುತ್ತದೆ. ಇದರಲ್ಲಿ ಸಾಮಾನ್ಯವಾಗಿ 3 ವಿವಿಧ ಹಂತಗಳಾದ ಚಳಿ, ಶೆಕೆ ಮತ್ತು ಬೆವರು ಇಲ್ಲದಿರುತ್ತದೆ, ಅದರ ಬದಲಾಗಿ ರೋಗಿಯು ಛಳಿಯ ಜೊತೆ ನಡುಕ, ತಲೆನೋವು ಮತ್ತು ವಾಕರಿಕೆಯನ್ನು ಹೊಂದಿರುತ್ತಾನೆ. ರಕ್ತ ಪರೀಕ್ಷೆಯಿಂದ ಇದು ಸಾಬೀತಾಗುವವರೆಗೂ ಕೂಡ ಕ್ರೋಸಿನ್ ಮಾತ್ರ ತೆಗೆದುಕೊಳ್ಳಬೇಕು. ನೀವು ಯಾವುದೇ ರೀತಿಯ ಮೇಲಿನ ಲಕ್ಷಣಗಳು ಕಂಡರೆ ತಕ್ಷಣ ನಿಮ್ಮ ವೈದ್ಯರನ್ನು ಭೇಟಿಯಾಗಿ ಒಮ್ಮೆ ಪರೀಕ್ಷಿಸಿಕೊಳ್ಳಿ.

ತಡೆಗಟ್ಟುವುದು: ಸೊಳ್ಳೆಗಳ ಸಂತಾನೋತ್ಪತ್ತಿ ಆಗುವುದನ್ನು ತಡೆಯಲು, ಮಳೆ ನೀರು ಒಂದೇ ಜಾಗದಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ಸಾಕುಪ್ರಾಣಿಗಳ ಸ್ವಚ್ಛತೆ, ಮನೆ ಒಳಾಂಗಣವನ್ನು ಸ್ವಚ್ಛಮಾಡುವುದು, ಕೀಟನಾಶಕಗಳ ನಿಯಮಿತ ಸಿಂಪಡಿಕೆ, ಮಲಗುವ ಕೋಣೆಯಲ್ಲಿ ಸೊಳ್ಳೆಪರದೆಗಳನ್ನು ಬಳಸುವುದು, ಸೊಳ್ಳೆಗಳನ್ನು ಸಾಯಿಸುವ ರೆಪಲೆಂಟ್ ಬಳಸುವುದು , ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು ಇತ್ಯಾದಿ.

Comments are closed.