ಆರೋಗ್ಯ

ದಿನಾ ದಾಳಿಂಬೆ ಜೂಸ್ ಕುಡಿದರೆ ಕಡಿಮೆ ರಕ್ತದೊತ್ತಡ (low BP) ಇರುವವರಿಗೆ ತುಂಬ ಒಳ್ಳೇದು.

Pinterest LinkedIn Tumblr

ಊಟದ ನಂತರ ಸ್ವಲ್ಪ ತುಳಸಿ ಎಲೆ ತಿನ್ನಿ. ಗ್ಯಾಸ್ ಕಡಿಮೆ ಮಾಡುವ ಮಾತ್ರೆ ತರಹವೇ ಕೆಲಸ ಮಾಡುತ್ತದೆ.
ಅಸಿಡಿಟಿಗೆ ಒಂದು ಒಳ್ಳೆಯ ಉಪಾಯ. ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನ ಹೀರಿಕೊಳ್ಳಕ್ಕೆ ಸಹಾಯ ಮಾಡತ್ತೆ. ಹೊಟ್ಟೆ ಹುಣ್ಣು ಆಗಲು ಬಿಡುವುದಿಲ್ಲ.
ಲವಂಗದ ಒಂದು ಚೂರನ್ನು ಊಟದ ನಂತರ ಚೀಪುತ್ತಿದ್ದರೆ ಅಸಿಡಿಟಿ ಕಡಿಮೆ ಆಗತ್ತೆ.
ಬೆಳಗಾನೆ ಎದ್ದು ಒಂದು ಎಸಳು ಬೆಳ್ಳುಳ್ಳಿ ನುಂಗಿದರೂ ಕೂಡ ಹೊಟ್ಟೆಯ ತೊಂದರೆ ಮತ್ತು ಗ್ಯಾಸ್ ತೊಂದರೆ ಕಡಿಮೆಯಾಗತ್ತೆ
ಬೇಸಿಗೆಯ ಉರಿಬಿಸಿಲಿನಲ್ಲಿ ತಲೆನೋವು ಬಂದರೆ ಕಲ್ಲಂಗಡಿ ಹಣ್ಣಿನ ಪಾನಕ ಕುಡಿಯಿರಿ.
ದಿನಾ ಬೆಳಗ್ಗೆ ಅರ್ಧತಲೆನೋವು ಇರುವವರು ಒಂದು ಸೇಬು ತಿಂದರೆ ನೋವು ಕಡಿಮೆ ಮಾಡತ್ತೆ.
ಇದನ್ನು ಸ್ವಲ್ಪ ದಿನ ಬಿಡದೆ ಮಾಡಬೇಕು. ಕೆಲಸ ಮಾಡತ್ತೆ.
ಒಂದು 6 ಖರ್ಜೂರನ ಅರ್ಧ ಲೀಟರ್ ನೀರಿನಲ್ಲಿ 25 ನಿಮಿಷ ಬೇಯಿಸಿ ಪಾನಕ ತಯಾರು ಮಾಡಿ ದಿನಕ್ಕೆ 3 ಬಾರಿ ಕುಡಿದರೆ ಒಣ ಕೆಮ್ಮು ಹೋಗತ್ತೆ.
ಶುಂಠಿ ರಸಕ್ಕೆ ಜೇನುತುಪ್ಪ ಬೆರೆಸಿ ತಿಂದರೆ ಕಫ ಕಡಿಮೆ ಮಾಡತ್ತೆ.
ನೆಗಡಿ+ಕೆಮ್ಮು+ಗಂಟಲು ಕಿರಿಕಿರಿಗೆ ಇದು ರಾಮ ಬಾಣ.
ಅಜೀರ್ಣ ಆದಾಗ ಅಥವಾ ಮಲಬದ್ಧತೆ ಆದಾಗ ಬೆಳಗ್ಗಿನ ತಿಂಡಿಯ ಮುಂಚೆ ಒಂದು ಬಟ್ಟಲು ಬೀಟ್ರೂಟ್ ಬೇಯಿಸಿಕೊಂಡು ತಿಂದರೆ ಉಪಯೋಗ.
ಒಂದು ಆರು ಈರುಳ್ಳಿನ ರಸ ತೆಗೆದು ಅದಕ್ಕೆ ಜೇನುತುಪ್ಪ ಹಾಕಿ ಬಿಸಿ ನೀರಿನಲ್ಲಿ 2 ಘಂಟೆ ಕಾಲ ನೆನೆಸಿ. ಪ್ರತೀ 3 ಘಂಟೆಗಳಿಗೊಮ್ಮೆ ಒಂದು ಚಮಚ ತೊಗೊಳ್ಳಿ.
ಇದು ಆಯುರ್ವೇದದ ಪ್ರಕಾರ ಕೆಮ್ಮಿಗೆ ಒಳ್ಳೆಯ ಔಷಧಿ.

Comments are closed.