ಆರೋಗ್ಯ

ಆರೋಗ್ಯಕರ ಕಿಡ್ನಿ ನಿಮ್ಮದಾಗಿಸಲು ಒಂದಿಷ್ಟು ಉಪಯುಕ್ತ ಮಾಹಿತಿ

Pinterest LinkedIn Tumblr

ಮನುಷ್ಯನ ದೇಹದಲ್ಲಿ ಮೂತ್ರಪಿಂಡ(ಕಿಡ್ನಿ)ಗಳ ಕಾರ್ಯ ಮಹತ್ತರವಾದುದು. ಅವು ದೇಹದಲ್ಲಿನ ಕಲ್ಮಶಗಳು ಹೊರಹೋಗುವುದಕ್ಕೆ ಸಹಕಾರಿ. ಇವು ತಮ್ಮ ಕೆಲಸವನ್ನು ನಿಲ್ಲಿಸಿದರೆ, ಅಥವಾ ಇವುಗಳ ಕಾರ್ಯದಲ್ಲೇನಾದರೂ ವ್ಯತ್ಯಯವಾದರೆ ಮನುಷ್ಯನ ಆರೋಗ್ಯವೇ ಹದಗೆಡುತ್ತದೆ.

ಎರಡೂ ಮೂತ್ರಪಿಂಡಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದ್ದೇ ಆದರೆ ಅಲ್ಲಿಗೆ ಮನುಷ್ಯನ ಬದುಕೂ ಮುಗಿದಂತೆಯೇ. ಕಿಡ್ನಿ ಸಮಸ್ಯೆಯ ಬಗ್ಗೆ ಮೊದಲೇ ಅರಿವಿದ್ದರೆ ಏನಾದರೂ ಚಿಕಿತ್ಸೆ ಪಡೆಯಬಹುದು. ಆದ್ದರಿಂದ ಕಿಡ್ನಿ ಸಮಸ್ಯೆಯ ಲಕ್ಷಣಗಳನ್ನು ನೀವು ಅರಿತಿರುವುದು ಒಳ್ಳೆಯದು.

ಕಿಡ್ನಿ ಸಮಸ್ಯೆಯಿದೆಯೆಂದರೆ ನಿಮಗೆ ಪದೇ ಪದೇ ಸುಸ್ತಾಗುತ್ತಿರುತ್ತದೆ. ನಿಶ್ಶಕ್ತಿಯಿಂದ ಬಳಲುತ್ತೀರಿ. ಯಾವುದೇ ವಿಷಯದ ಕುರಿತಂತೆ ಏಕಾಗ್ರತೆಯನ್ನು ಸಾಧಿಸುವುದು ನಿಮಗೆ ಕಷ್ಟವಾಗಬಹುದು.

ನಿದ್ರಾಹೀನತೆ ಕಾಡುತ್ತದೆ. ದೇಹ ನಿಮಗೆ ನಿದ್ದೆ ಮಾಡಲು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ನೀವು ಕಿರಿಕಿರಿ ಅನುಭವಿಸುತ್ತೀರಿ.
ನಿಮ್ಮ ಚರ್ಮ ಒಣಗಿರುವುದಲ್ಲದೆ ಹೆಚ್ಚು ತುರಿಕೆ ಉಂಟಾಗುತ್ತದೆ.
* ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನ್ನಿಸುತ್ತದೆ.
* ಮೂತ್ರದಲ್ಲಿ ಕೆಲವೊಮ್ಮೆ ರಕ್ತವೂ ಕಾಣಿಸಿಕೊಳ್ಳಬಹುದು.
* ಕಣ್ಣಿನ ಸುತ್ತ ಸುಕ್ಕುಗಟ್ಟಿದಂತಿರುತ್ತದೆ. ಕ್ರಮೇಣ ಕಣ್ಣು ನಿಸ್ತೇಜಗೊಳ್ಳುತ್ತದೆ.
* ಕಾಲು ಊದಿಕೊಳ್ಳುತ್ತದೆ. ಸ್ವಲ್ಪ ನೋವೂ ಇರುತ್ತದೆ.
* ಹಸಿವಾಗದೇ ಇರುವುದು. ಯಾವ ಆಹಾರವನ್ನೂ ತಿನ್ನಬೇಕು ಎನ್ನಿಸದಿರುವುದು.
* ಸ್ನಾಯುಗಳ ಸೆಳೆತ ಆರಂಭವಾಗಿ ನಿಮ್ಮ ನೆಮ್ಮದಿಯನ್ನು ಕೆಡಿಸುತ್ತದೆ.
ನಿಮ್ಮಲ್ಲಿ ಈ ಎಲ್ಲ ಲಕ್ಷಣಗಳು ಕಂಡು ಬಂದಲ್ಲಿ ಒಮ್ಮೆ ವೈದ್ಯರನ್ನು ಕಾಣಿ. ಏಕೆಂದರೆ ಕಿಡ್ನಿ ಸುಸೂತ್ರವಾಗಿ ಕಾರ್ಯ ನಿರ್ವಹಿಸಬೇಕಾದ್ದು ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ದೇಹದಲ್ಲಿನ ದ್ರವರೂಪದ ಕಲ್ಮಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಮಾಡುವ ಕಿಡ್ನಿ ತನ್ನ ಕೆಲಸವನ್ನು ಮರೆತರೆ ಇಡೀ ದೇಹವೂ ಕಲ್ಮಶದ ನೆಲೆಯಾಗುತ್ತದೆ.
ಆದ್ದರಿಂದ ಕಿಡ್ನಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಹೆಚ್ಚು ಹೆಚ್ಚು ನೀರು ಸೇವಿಸುವುದನ್ನು ಮರೆಯಬೇಡಿ. ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿ ಮಾಡಿರಿ.

Comments are closed.